ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟೌಡಿಂಗೆರ್, ಹೆರ್ಮಾನ್

ಸ್ಟೌಡಿಂಗೆರ್, ಹೆರ್ಮಾನ್ 1881-1965. ಜರ್ಮನಿಯ ರಸಾಯನ ವಿe್ಞÁನಿ. ಹಾಲೆ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಪಡೆದು (1903), 1912ರ ವರೆಗೆ ತಾಂತ್ರಿಕ ಸಂಸ್ಥೆಯೊಂದರಲ್ಲಿ ಅಧ್ಯಾಪಕನಾಗಿ ಸೇವೆ. ಅಲ್ಲಿ ಫ್ರಿಟ್ಝ್ ಹಾಬೆರ್‍ನ (1868-1934) ಮಾರ್ಗದರ್ಶನದಲ್ಲಿ ಸಂಶೋಧನೆ. ಮುಂದೆ ನಿವೃತ್ತನಾಗುವತನಕ (1951) ಫ್ರೀಬರ್ಗ್ ವಿಶ್ವವಿದ್ಯಾಲಯದಲ್ಲಿ ನೆಲೆನಿಂತ. ನಿವೃತ್ತಿಯ ಬಳಿಕ ಮಹೋಪಾಧ್ಯಾಯ ನಾಗಿ ನೇಮಕಗೊಂಡು ಆಗ್ರ್ಯಾನಿಕ್ ರಸಾಯನವಿe್ಞÁನದಲ್ಲಿ, ಮುಖ್ಯವಾಗಿ ಪಾಲಿಮೆರ್ ಕುರಿತ ಸಂಶೋಧನೆಗಳಿಂದ ಖ್ಯಾತನಾದ. ಬೃಹದಣುಗಳ ಚಿಕ್ಕ ಘಟಕಗಳು (ಮಾನೊಮರ್‍ಗಳು) ಮಣಿಯಂತೆ ಪೋಣಿಸಿಕೊಳ್ಳು ವುದರ ಸಮಷ್ಟಿಯೇ ಪಾಲಿಮೆರ್. ಸಹಸ್ರಾರು ಆಲ್ಫಾ ಗ್ಲುಕೋಸ್ ಘಟಕಗಳು ಕೂಡಿ ನೀರು ಕಳೆದು ಪಿಷ್ಟದ ಅಣು, ಹೀಗೆಯೇ ಬೀಟಾ ಗ್ಲುಕೋಸ್ ಘಟಕಗಳ ಸಂಯೋಜನೆಯಿಂದ ಸೆಲ್ಯುಲೋಸ್(ಹತ್ತಿ, ಕಾಗದ ಇತ್ಯಾದಿ), ಅಮೈನೊ ಆಮ್ಲಗಳ ಸಂಘಟನೆಯಿಂದ ಪ್ರೋಟೀನು ಗಳು ಆಗುವಂತೆ ಪಾಲಿಮೆರ್‍ಗಳ ರೂಪಣೆ ಕೂಡ ಆಗುತ್ತದೆ. ಪ್ಲಾಸ್ಟಿಕ್‍ಗಳು ಇಂಥ ಪಾಲಿಮೆರ್‍ಗಳ ನೇರ ಸರಣಿ ರಚನೆಯುಳ್ಳವು. ಅನ್ಯರು ಭಾವಿಸಿದ್ದಂತೆ ಇವು ಅಡ್ಡಾದಿಡ್ಡಿ ಹೆಣೆದುಕೊಂಡಿರುವ ಅಣು ಜೊಂಪೆಗಳಲ್ಲ. ಇದು ಇವನ ಸಂಶೋಧನೆಯ ಸಾರಾಂಶ. ಎರಡನೆಯ ಮಹಾಯುದ್ಧದ (1939-45) ಅನಂತರ ಜಗತ್ತಿನಾದ್ಯಂತ ಸಂಶ್ಲೇಷಿತ ಪ್ಲಾಸ್ಟಿಕುಗಳ ಬಳಕೆ ವ್ಯಾಪಕವಾಯಿತು. ಈ ನಿಟ್ಟಿನಲ್ಲಿ ಮೂಲಭೂತ ಸಂಶೋಧನೆಗೈದಿದ್ದ ಇವನಿಗೆ 1953ರ ರಸಾಯನವಿe್ಞÁನ ನೊಬೆಲ್ ಪಾರಿತೊಷಕ ಪ್ರದಾನವಾಯಿತು. (ಎಚ್.ಜಿ.ಎಸ್.)