ಸ್ಪೇನ್ ಯುರೋಪಿನ ಪಶ್ಚಿಮ ಭಾಗದಲ್ಲಿರುವ ಐಬೀರಿಯನ್ ಪರ್ಯಾಯ ದ್ವೀಪದ ಒಂದು ದೇಶ. ಈ ದೇಶ ಉ.ಅ. 360 — 430471 ಮತ್ತು ಪೂ.ರೇ. 30191 — 90301 ನಡುವೆ ಇದೆ. ಉತ್ತರದಲ್ಲಿ ಬಿಸ್ಕೇ ಕೊಲ್ಲಿ ಮತ್ತು ಫ್ರಾನ್ಸ್, ಪೂರ್ವ ಮತ್ತು ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಪಶ್ಚಿಮದಲ್ಲಿ ಪೋರ್ಚುಗಲ್, ನೈಋತ್ಯದಲ್ಲಿ ಉತ್ತರ ಅಟ್ಲಾಂಟಿಕ್‍ಸಾಗರ ಮತ್ತು ವಾಯವ್ಯದಲ್ಲಿ ಬಿಸ್ಕೇಕೊಲ್ಲಿ ಇದರ ಮೇರೆಗಳು. ಬಲೀಯಾರಿಕ್ ದ್ವೀಪಗಳನ್ನೂ ಸೇರಿಸಿದಂತೆ ಇದರ ಒಟ್ಟು ವಿಸ್ತೀರ್ಣ 5,05,992 ಚ.ಕಿಮೀ. ಜನಸಂಖ್ಯೆ 3,98,48,000. ಸ್ಪೇನ್ ಉತ್ತರ ದಕ್ಷಿಣವಾಗಿ 880 ಕಿಮೀ, ಪೂರ್ವಪಶ್ಚಿಮವಾಗಿ 1,040 ಕಿಮೀ ಇದ್ದು 3,774 ಕಿಮೀ ಸಮುದ್ರತೀರ ಹೊಂದಿದೆ. ಇಲ್ಲಿಯ ಜನರ ಭಾಷೆಗಳು ಸ್ಪ್ಯಾನಿಷ್, ಕ್ಯಾಟಲನ್, ಬಾಸ್ಕ್, ಗ್ಯಾಲಿಷಿಯನ್. ಸಾಕ್ಷರತಾ ಪ್ರಮಾಣ ಸೇ.97. ಇಲ್ಲಿ ಕ್ರೈಸ್ತಧರ್ಮೀಯರೇ ಹೆಚ್ಚು. ನಾಣ್ಯ : ಯೂರೊ. ದೊರೆ: ವಾನ್ ಕಾರ್ಲೋಸ್, ಪ್ರಧಾನಿ: ಜೋಸ್ ಮರಿಯ ಅಜ್ನಾರ್. ಬಲೀಯಾರಿಕ್ ಮತ್ತು ಕ್ಯಾನರಿ ದ್ವೀಪಗಳನ್ನೊಳಗೊಂಡ ಬರನೀಸ್ ಪರ್ವತ ಶ್ರೇಣಿ ಫ್ರಾನ್ಸ್‍ನಿಂದ ಸ್ಪೇನನ್ನು ಬೇರ್ಪಡಿಸಿದೆ. ಮ್ಯಾಡ್ರಿಡ್ ಇದರ ರಾಜಧಾನಿ. ಜನಸಂಖ್ಯೆ 29,09,792.

ಮೇಲ್ಮೈಲಕ್ಷಣ: ಉತ್ತರದ ಕರಾವಳಿ : ಇದು ಫಲವತ್ತಾದ ಕಣಿವೆಗಳನ್ನೊಳಗೊಂಡ ಪರ್ವತ ಪ್ರದೇಶ. ಇದರ ಹೆಚ್ಚಿನ ಭಾಗ ಹುಲ್ಲುಗಾವಲು ಮತ್ತು ಅರಣ್ಯಗಳಿಂದ ಕೂಡಿದೆ. ಮಧ್ಯದ ಪ್ರಸ್ಥಭೂಮಿ ಅಥವಾ ಮೆಸೆಟ್ ಕಾರ್ಡಿಲೇರ್ ಬೆಟಿಕಾ ಮತ್ತು ಸಾಡೇಗುವಾಡ್ರಮ ನಡುವೆ ಇರುವ ಕಾಸ್ಟಿಲ್ಲಾ ಲಾ ನೋವ್, ಗುವಾಡ್ರಮದ ಉತ್ತರಕ್ಕಿರುವ ಕಸ್ಟಿಲಾಲೇ ವೈಜಾ ಮತ್ತು ಸ್ಪೇನ್ ರಾಜಧಾನಿಯಾದ ಮ್ಯಾಡ್ರಿಡ್ ಈ ಪ್ರಸ್ಥಭೂಮಿ ಪ್ರದೇಶದಲ್ಲಿವೆ. ಅಂಡಲೂಸಿಯ : ಇದು ಪರ್ವತ ಪ್ರದೇಶ. ಫಲವತ್ತಾದ ಮತ್ತು ಆಳವಾದ ಕಣಿವೆಗಳಿವೆ. ಲೆವಾಂಟ್ : ಇದು ದಕ್ಷಿಣ ಮೆಡಿಟರೇನಿಯನ್ ತೀರ ಪ್ರದೇಶ.ಈಶಾನ್ಯದ ಎಬ್ರೋ ಕಣಿವೆ ಪ್ರದೇಶ ಮತ್ತು ಕ್ಯಾಟಲೋನಿಯ.

ಸ್ಪೇನ್‍ನಲ್ಲಿ ಪಿರನೀಸ್ ಕಾರ್ಪಲೋ, ವೆಟಾನಿಕ, ಓಂಟಾನ, ಮೊರೈನಿಕ, ಪೆನಿಬೆಟಿಕ ಮತ್ತು ಇಬೇರಿಕ ಎಂಬ ಆರು ಪ್ರಮುಖ ಪರ್ವತ ಶ್ರೇಣಿಗಳಿವೆ. ಪಿಕೋಡಿಲೈಡೇ ಅತ್ಯಂತ ಎತ್ತರದ ಶಿಖರ (3,707 ಮೀ). ಇದು ಟೆನೆರಿಡೇ ಪ್ರದೇಶದ ಮಧ್ಯಭಾಗದಲ್ಲಿದೆ.

ವಾಯುಗುಣ: ಇಲ್ಲಿಯದು ಮೆಡಿಟರೇನಿಯನ್ ವಾಯುಗುಣ. ಪ್ರದೇಶದಿಂದ ಪ್ರದೇಶಕ್ಕೆ ಇದು ವ್ಯತ್ಯಾಸಗೊಳ್ಳುತ್ತದೆ. ಉತ್ತರದ ತೀರ ಪ್ರದೇಶಗಳು ಶೀತ ಮತ್ತು ತೇವಾಂಶದಿಂದ ಕೂಡಿದ್ದು ವಾರ್ಷಿಕ ಸರಾಸರಿ ಉಷ್ಣಾಂಶ 570 ಫ್ಯಾ. ಕನಿಷ್ಠ ಉಷ್ಣಾಂಶ 180 ಫ್ಯಾ. ವಾರ್ಷಿಕ ಸರಾಸರಿ ಮಳೆ ಸು. 99 ಸೆಂಮೀ. ದಕ್ಷಿಣ ವಲಯ ಅದರಲ್ಲೂ ಅಂಡಲೂಸಿಯ ಪ್ರದೇಶ ಶುಷ್ಕ. ಇಲ್ಲಿ ಬೇಸಗೆ ಉಷ್ಣಾಂಶ ಒಮ್ಮೊಮ್ಮೆ 1040 ಫ್ಯಾ. ಮುಟ್ಟುತ್ತದೆ. ವಾರ್ಷಿಕ ಸರಾಸರಿ ಮಳೆ 40-78 ಸೆಂಮೀ. ಒಳನಾಡಿನ ಮಧ್ಯದ ಮೈದಾನಗಳಲ್ಲಿ ವಾರ್ಷಿಕ ಮಳೆ 40 ಸೆಂಮೀ ಗಿಂತ ಕಡಿಮೆ. ಇಲ್ಲಿ ಮರುಭೂಮಿ ವಿಸ್ತರಿಸಬಹುದೆಂಬ ಅಂದಾಜಿದೆ.

ಇಲ್ಲಿ ಡ್ಯೊರೋ, ಟಾಗಸ್, ಗ್ವಾಡಲ್‍ಕ್ವಿವಿರ್, ಗಾಡಿಯಾನ, ಎಬ್ರೊ ನದಿಗಳ ಹಾಗೂ ಅವುಗಳ ಉಪನದಿಗಳ ಜಾಲ ಹಬ್ಬಿದೆ. ಟಾಗಸ್ ನದಿ ಮೆಸಟಾದಲ್ಲಿ ಹುಟ್ಟಿ 1,007 ಕಿಮೀ ದೂರಹರಿದು ಪೋರ್ಚುಗಲ್ ಮೂಲಕ ಅಟ್ಲಾಂಟಿಕ್ ಸಾಗರ ಸೇರುತ್ತದೆ. ಗ್ವಾಡಲ್‍ಕ್ವಿವಿರ್ ನದಿ 640 ಕಿಮೀ ಪ್ರವಹಿಸಿ ಅಟ್ಲಾಂಟಿಕ್‍ಸಾಗರ ಸೇರುವುದು.

ಸಸ್ಯ ವರ್ಗ: ಇಲ್ಲಿಯ ಸಸ್ಯ ವರ್ಗ ವಿಭಿನ್ನವಾದದ್ದು. ಉತ್ತರದ ತೇವದ ಪ್ರದೇಶಗಳಲ್ಲಿ ದಟ್ಟವಾದ ಅರಣ್ಯಗಳಿವೆ. ಇಲ್ಲಿ ಓಕ್, ಚೆಸ್ಟ್‍ನಟ್, ಎಲ್ಮ ಮುಂತಾದ ಮರಗಳಿವೆ. ಸ್ಟೆಫಿ ಸಸ್ಯವರ್ಗ ಮೆಸಟ ಮತ್ತು ಅಂಡಲೂಸಿಯ ಪ್ರದೇಶಗಳಲ್ಲಿವೆ.

ಅರ್ಥ ವ್ಯವಸ್ಥೆ : ಸ್ಪೇನಿನ ಆರ್ಥಿಕತೆ ಗಾತ್ರದಲ್ಲಿ ಪ್ರಪಂಚದಲ್ಲಿ ಒಂಬತ್ತನೆಯದು. ದೇಶದ ಒಟ್ಟು ಉತ್ಪನ್ನದಲ್ಲಿ ಕೃಷಿಯ ಪಾಲು ಸೇ.4 ಮಾತ್ರ. 20ನೆಯ ಶತಮಾನದ ಅರವತ್ತರ ದಶಕದಲ್ಲಿ ಇದು ಸೇ.65ರಷ್ಟಿತ್ತು. ಕೈಗಾರಿಕೆಯ ಪಾಲು ಸೇ.91. ಸೇವಾ ವಲಯದ್ದು ಸೇ.65.

ಕೃಷಿ : ದ್ರಾಕ್ಷಿ, ಆಲಿವ್, ತರಕಾರಿ, ಹಣ್ಣು ಇವು ಮುಖ್ಯ ಕೃಷಿ ಉತ್ಪನ್ನಗಳು. ರಾಸಾಯನಿಕ ಯಂತ್ರ ಸಲಕರಣೆ, ಮೋಟರು, ಹಡಗು ನಿರ್ಮಾಣ, ಉಕ್ಕು, ಜವಳಿ, ಹಣ್ಣಿನ ಸಂಸ್ಕರಣೆ, ಕಾಗದ, ಸಿಮೆಂಟ್ ಇವು ಮುಖ್ಯ ಕೈಗಾರಿಕೆಗಳು. ಸ್ಪೇನಿನ ಫುಟ್‍ಬಾಲ್ ಹಾಗೂ ಗೂಳಿಕಾಳಗ ಕ್ರೀಡೆ ಪ್ರಪಂಚ ಪ್ರಸಿದ್ಧವಾದುದು. ರಾಜಧಾನಿ ಮ್ಯಾಡ್ರಿಡನ್ನು ಬಿಟ್ಟರೆ ಬಾರ್ಸಿಲೋನ(16,25,542), ವ್ಯಾಲೆನ್ಷಿಂiÀi(7,52,909), ಸೆವಿಲ್ಲೆ(6,59,126), ಸರಗೊಸ್ಸ(5,86,219), ಮೆಲಗ (5,12,136) ಇತರ ದೊಡ್ಡ ನಗರಗಳು. ದಕ್ಷಿಣದಲ್ಲಿ ಪ್ರಸಿದ್ಧ ಜಿಬ್ರಾಲ್ಟರ್ ಜಲಸಂಧಿಯಿದೆ.

ಇತಿಹಾಸ : ಸ್ಪೇನ್ ದೇಶ ಹಿಂದಿನಿಂದಲೂ ವಿವಿಧ ರಾಷ್ಟ್ರಗಳ ಅಧೀನದಲ್ಲಿದ್ದ ದೇಶ. 1469ರಲ್ಲಿ ಆಧುನಿಕ ಸ್ಪೇನ್ ರೂಪುಗೊಂಡಿತು. 1492 ರಲ್ಲಿ ಸ್ಪೇನಿನ ಪರವಾಗಿ ಕೊಲಂಬಸ್ ಅಮೆರಿಕವನ್ನು ಆವಿಷ್ಕರಿಸಿದ ಮೇಲೆ ಅದೊಂದು ಸ್ಪ್ಯಾನಿಷ್ ಸಾಮ್ರಾಜ್ಯವಾಗಿ ಬೆಳೆಯಿತು. ಅನೇಕ ವಸಾಹತುಗಳು ಅದರ ಅಧೀನದಲ್ಲಿದ್ದುವು. 1588 ರಲ್ಲಿ ಸ್ಪ್ಯಾನಿಷ್ ಆರ್ಮಡಾ ನೌಕಾ ಪಡೆಯನ್ನು ಇಂಗ್ಲೆಂಡ್ ಸೋಲಿಸಿತು. ಅದರ ಪರಿಣಾಮವಾಗಿ ಸ್ಪೇನ್ ಯುರೋಪಿನ ಒಂದು ಪುಟ್ಟ ಪ್ರಭುತ್ವವಾಯಿತು. 1939ರಲ್ಲಿ ಜನರಲ್ ಫ್ರಾಂಕೋ ಸರ್ವಾಧಿಕಾರ ಸ್ಥಾಪಿತವಾಯಿತು. ಆತನ ಮರಣಾನಂತರ (1975) ಸ್ಪೇನ್ ಸಾಂವಿಧಾನಿಕ ರಾಜ ಪ್ರಭುತ್ವವಾಯಿತು. 1981ರಲ್ಲಿ ಅಧಿಕಾರ ಕಸಿದುಕೊಳ್ಳಲು ನಡೆಸಿದ ಕ್ಷಿಪ್ರಕ್ರಾಂತಿ ವಿಫಲಗೊಂಡಿತು. 1982-93ರ ವರೆಗೆ ಸತತವಾಗಿ ನಾಲ್ಕು ಬಾರಿ ಸಮಾಜವಾದಿ ಕಾರ್ಮಿಕ ಸಂಘ ಚುನಾವಣೆಗಳಲ್ಲಿ ಗೆದ್ದಿತು. 1996ರಲ್ಲಿ ಕನ್ಸರ್ವೇಟಿವ್ ಮತ್ತು ಪ್ರಾದೇಶಿಕ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. 2004ರಲ್ಲಿ ನಡೆದ ಚುನಾವಣೆಗಳಲ್ಲಿ ಪಿ.ಎನ್.ಡಿ.ಇ. ಪಕ್ಷ ಜಯಗಳಿಸಿ ಸರ್ಕಾರ ರಚಿಸಿತು. 1980 ರಲ್ಲಿ ಕ್ಯಾಟಲೋನಿಯ ಮತ್ತು ಬಾಸ್ಕ್ ನಾಡುಗಳು ಸ್ವಯಂ ಆಡಳಿತಾಧಿಕಾರ ಪಡೆದವು. ತಮ್ಮ ಪ್ರದೇಶಕ್ಕೆ ಪೂರ್ಣ ಸ್ವಾತಂತ್ರ್ಯಬೇಕೆಂದು ಬಾಸ್ಕ್ ಬಂಡಾಯಗಾರ ಚಳವಳಿ ನಡೆದಿದೆ. ಸುಧಾರಣಾವಾದಿಗಳ ರಾಷ್ಟ್ರೀಯ ಬಾಸ್ಕ್ ಪಕ್ಷ (ಪಿಎನ್‍ವಿ) 2001ರಲ್ಲಿ ಅಲ್ಲಿನ ಚುನಾವಣೆಯಲ್ಲಿ ಜಯಗಳಿಸಿತು.

(ಬಿ.ಎಸ್.ಎಸ್.ಐ.)