ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ವಿಟ್ಜರ್ಲೆಂಡ್

ಸ್ವಿಟ್ಜರ್‍ಲೆಂಡ್ ಮಧ್ಯ ಯುರೋಪಿನಲ್ಲಿ ಉ.ಅ. 47048†35††-45049†08†† ಮತ್ತು ಪೂ.ರೇ. 5057†24††-10029†36†† ನಡುವೆ ಇದೆ. ವಿಸ್ತೀರ್ಣ 4,49,793 ಚ.ಕಿಮೀ. ಉತ್ತರ ದಕ್ಷಿಣವಾಗಿ 220 ಕಿಮೀ ಮತ್ತು ಪೂರ್ವ ಪಶ್ಚಿಮವಾಗಿ 348 ಕಿಮೀ ಹಬ್ಬಿದೆ. ಇದರ ಗಡಿಯ ಉದ್ದ ಸು. 1882 ಕಿಮೀ. ಇಲ್ಲಿಯ 1/3 ಭಾಗ ಅರಣ್ಯಾವೃತ. ಇದು ಅರಣ್ಯ, ಸರೋವರ ಮತ್ತು ಪರ್ವತಗಳಿಂದ ಆವೃತವಾಗಿದೆ. ಆಲ್ಪ್ಸ್ ಪರ್ವತ ಸೇ 60ರಷ್ಟು ನೆಲವನ್ನು ಆವರಿಸಿಕೊಂಡಿದೆ. ಜನಸಂಖ್ಯೆ 73ಲಕ್ಷ. ಭಾಷೆ ಜರ್ಮನ್, ಫ್ರೆಂಚ್, ಇಟಾಲಿಯನ್ ಮತ್ತು ರೋಮಾನ್. ಸಾಕ್ಷರತೆ 100%. ಕ್ರೈಸ್ತಧರ್ಮ. ನಾಣ್ಯ ಫ್ರಾಂಕ್. ಭೌಗೋಳಿಕವಾಗಿ ಆಲ್ಪ್ಸ್ ಪ್ರದೇಶ, ಮಿಡ್‍ಲ್ಯಾಂಡ್ ಮತ್ತು ಜ್ಯೂರಾ ಎಂದು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಈ ದೇಶದಲ್ಲಿ ಯಾವುದೇ ಖನಿಜ ಸಂಪನ್ಮೂಲವಿಲ್ಲ. ರಾಜಧಾನಿ ಬರ್ನ್. ಇತರ ಮುಖ್ಯ ನಗರಗಳು ಜೂರಿಟ್, ಬ್ರಾಸೆಲ್, ಜಿನೀವ, ಲಾಸೇನ್. ಸ್ವಿಟ್ಜರ್‍ಲೆಂಡ್ ಸಮಶೀತೋಷ್ಣವಲಯದಲ್ಲಿದೆ. ಇಲ್ಲಿ ವೈವಿಧ್ಯಮಯವಾದ ವಾಯುಗುಣವಿದೆ. ಪಶ್ಚಿಮದ ಅಟ್ಲಾಂಟಿಕ್ ಸಾಗರದಿಂದ ಬೀಸಿ ಬರುವ ಮಾರುತಗಳು ಈ ದೇಶಕ್ಕೆ ಮಳೆ ತರುತ್ತವೆ. ಪೂರ್ವದ ಆಲ್ಪ್ಸ್ ಪರ್ವತಪ್ರದೇಶ ಇಲ್ಲಿಯವು. ಕಡಿಮೆ ಉಷ್ಣಾಂಶದ ಒಣವಾಯುಗುಣ. ಮಳೆ ಕಡಿಮೆ. ಆಲ್ಫ್ಸ್ ಪರ್ವತದ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಮೆಡಿಟೆರೇನಿಯನ್ ಮಾದರಿಯ ವಾಯುಗುಣವಿದೆ. ಇಲ್ಲಿ ಉಷ್ಣಾಂಶವೂ ಹೆಚ್ಚು ಮಳೆಯೂ ಅಧಿಕ. ಬೇಸಗೆಯಲ್ಲಿ ಒಣ ಮತ್ತು ಬಿಸಿ ಗಾಳಿ ಬೀಸುತ್ತದೆ. ಗರಿಷ್ಠ ಉಷ್ಣಾಂಶ 350ಛಿ ವರೆಗೆ. ಚಳಿಗಾಲ ಹೆಚ್ಚು ಶೀತ ಮತ್ತು ತೇವಾಂಶದಿಂದ ಕೂಡಿದ್ದು, ಏಪ್ರಿಲ್ ತಿಂಗಳಲ್ಲಿ ಹವಾಮಾನ ಬದಲಾವಣೆಯಾಗುತ್ತದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಉಷ್ಣಾಂಶ ಅತಿ ಕಡಿಮೆಯಾಗುವುದಲ್ಲದೆ 200 ಮೀ ಎತ್ತರದ ಪ್ರದೇಶಗಳಲ್ಲಿ 00ಛಿ ಗೆ ಇಳಿಯುತ್ತದೆ. ಆಲ್ಪ್ಸ್ ಪರ್ವತದ ತಗ್ಗು ಪ್ರದೇಶಗಳಲ್ಲಿ ಹಿಮ ಬೀಳುವುದು ಸಾಮಾನ್ಯ.

ಮಾಂಟೊರೋಜಾ (4,634ಮೀ) ಇಲ್ಲಿನ ಅತಿ ಎತ್ತರದ ಶಿಖರ. ಲಗೋ ಮಗಿಯೋರಾ (193ಮೀ) ಅತಿ ಕಡಿಮೆ ಎತ್ತರದ ಶಿಖರ. ಸುರಂಗ ರೈಲುಮಾರ್ಗಗಳು, ಏರಿಯಲ್ ಕೇಬಲ್ ಕಾರುಗಳು ಹಾಗೂ ಇತರ ಹಲವು ಬಗೆಯ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಪರ್ವತಗಳನ್ನು ಏರುವ, ಹಾಗೂ ಜಾರುವ ಮತ್ತು ಹಿಮದ ಮೇಲೆ ಹಿಮ ದೋಣಿಗಳಲ್ಲಿ ಜಾರುವ ಅನೇಕ ಕ್ರೀಡೆಗಳು ಪ್ರಸಿದ್ಧವಾಗಿವೆ.

ಸ್ವಿಟ್ಜರ್‍ಲೆಂಡ್‍ನಿಂದ ದಕ್ಷಿಣ ಮತ್ತು ಉತ್ತರ ಯುರೋಪಿನ ಕೆಲವು ಪ್ರದೇಶಗಳಿಗೆ ಹೋಗಿಬರಲು ಪ್ರಮುಖವಾಗಿ ಆಲ್ಪೆನ್ ಪರ್ವತ ಮಾರ್ಗಗಳನ್ನು ಉಪಯೋಗಿಸುತ್ತಾರೆ. ಗ್ರೇಡ್ ಓಪನ್, ಅಂಬ್ರೆಲ್ ಸ್ಟಾ, ಮಾರಿಯಾ, ಮನ್‍ಸ್ಟರ್‍ಟಲ್ ಮತ್ತು ಬೋರ್ಮಿಯೋ ಇನ್ನಿತರ ಪರ್ವತದ ಮಾರ್ಗಗಳಾಗಿವೆ.

ಇಲ್ಲಿನ ನದಿಗಳು ಪ್ರಮುಖವಾಗಿ 3 ಸಾಗರಗಳನ್ನು ಸೇರುತ್ತವೆ. ರೈನ್ ಮತ್ತು ಅದರ ಉಪನದಿಗಳಾದ ಆರೆ ಮತ್ತು ಥರ್ ಉಪನದಿಗಳು ಉತ್ತರ ಸಾಗರವನ್ನೂ ರ್ಹೋನೆ ಮತ್ತು ಟಿಸಿನೋ ನದಿಗಳು ಮೆಡಿಟೆರೀನಿಯನ್ ಸಮುದ್ರವನ್ನೂ ಮತ್ತು ಒಳನಾಡಿನ ಸಣ್ಣ ಝರಿಗಳು ಮತ್ತು ತೊರೆಗಳು ಕಪ್ಪುಸಮುದ್ರವನ್ನೂ ಸೇರುತ್ತವೆ.

ಸ್ವಿಟ್ಜರ್‍ಲೆಂಡ್‍ನಲ್ಲಿ ಅನೇಕ ಸರೋವರಗಳಿವೆ. ಕೃತಕ ಸರೋವರಗಳೂ ಇವೆ. ಜಿನೀವ ಎಂಬ ಸರೋವರ ಅತ್ಯಂತ ದೊಡ್ಡದು. ಬಹುಪಾಲು ಸರೋವರಗಳು ಪರ್ವತ ಪ್ರದೇಶಗಳಲ್ಲಿವೆ. ಜಲವಿದ್ಯುಚ್ಛಕ್ತಿ ಉತ್ಪಾದನ ಘಟಕಗಳು ಕೃತಕ ಸರೋವರಗಳಲ್ಲಿ ಸ್ಥಾಪಿತವಾಗಿವೆ. ಇಲ್ಲಿನ ಇತರ ಸರೋವರಗಳೆಂದರೆ ಕ್ಯಾಂಟನ್ ಬೋಡೆನ್‍ಸೀ ಮತ್ತು ನಿಯುನ್ ಬರ್ಗರ್‍ಸೀ.

ಸ್ವಿಟ್ಜರ್‍ಲೆಂಡಿನ ಸು. 3000ಚ.ಕಿಮೀ ಪ್ರದೇಶದಲ್ಲಿ ಹಿಮನದಿಗಳು ಹಂಚಿಕೆಯಾಗಿವೆ. ಪ್ರಮುಖ ಹಿಮನದಿಗಳೆಂದರೆ ಅಲೆಸ್ಕ್‍ಗ್ಲಿಸ್ಚರ್ (23.6 ಕಿಮೀ ಉದ್ದ), ಗಾರ್ನೆರ್ ಗ್ಲೆಸ್ಚರ್ (14.5 ಕಿಮೀ ಉದ್ದ), ಫಿಷರ್ ಗ್ಲೆಸ್ಚರ್ (14.7 ಕಿಮೀ ಉದ್ದ).

ಸ್ವಿಟ್ಚರ್‍ಲೆಂಡ್ ಖನಿಜ ಸಂಪನ್ಮೂಲಗಳ ಕೊರತೆಯಿಂದ ಕಚ್ಚಾ ಸಂಪನ್ಮೂಲಗಳನ್ನು ಆಮದು ಮಾಡಿಕೊಂಡು ಸಿದ್ಧ ವಸ್ತುಗಳನ್ನು ಉತ್ಪಾದಿಸಿ ರಫ್ತು ಮಾಡುತ್ತದೆ. ಇಲ್ಲಿನ ಆರ್ಥಿಕತೆಯಲ್ಲಿ ಸೇವಾ ವಲಯ ಮುಖ್ಯವಾದುದು. ಬ್ಯಾಂಕಿಂಗ್, ವಿಮೆ ಮತ್ತು ಪ್ರವಾಸೋದ್ಯಮ ಪ್ರಮುಖವಾಗಿವೆ. ವ್ಯವಸಾಯದಲ್ಲಿ ಸ್ವಯಂಪೂರ್ಣಾವಾಗಿಲ್ಲ. ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. *