ಹಲಗ ಹದಿನೇಳನೆಯ ಶತಮಾನದಲ್ಲಿದ್ದ ವೀರಶೈವ ಕವಿ. ಹರಿಶ್ಚಂದ್ರ ಸಾಂಗತ್ಯ ಎಂಬ ಕಾವ್ಯದ ಕರ್ತೃ. ಗುಮ್ಮಳಾಪುರ ಇವನ ಸ್ಥಳ. ವೀರ ಗಣಾಚಾರಿ ಇವನ ತಂದೆ.

ಹರಿಶ್ಚಂದ್ರ ಸಾಂಗತ್ಯ ಸು. 823 ಪದ್ಯಗಳನ್ನುಳ್ಳ ಚಿಕ್ಕ ಕಾವ್ಯ. ಹರಿಶ್ಚಂದ್ರನ ಕಥೆ ಈ ಕಾವ್ಯದ ವಸ್ತು. ಕಥೆಗಿಂತ ವರ್ಣನೆಗಳಿಗೇ ಹೆಚ್ಚು ಪ್ರಾಧಾನ್ಯವನ್ನು ಕವಿ ನೀಡಿದ್ದಾನೆ. ಸಾಂಗತ್ಯ ಶೈಲಿ ಸುಲಲಿತವಾಗಿದೆ. ಇವನ ಕಾವ್ಯದ ಮೇಲೆ ರಾಘವಾಂಕನ ಹರಿಶ್ಚಂದ್ರಕಾವ್ಯದ ದಟ್ಟ ಪ್ರಭಾವ ಕಂಡುಬರುತ್ತದೆ. ಹರಿಶ್ಚಂದ್ರನ ಕಥೆಯನ್ನು ಸಾಂಗತ್ಯದಲ್ಲಿ ನಿರೂಪಿಸಿದ ಮೂವರು ಕವಿಗಳಲ್ಲಿ (ಓದುವ ಗಿರಿಯ, ಬೊಂಬೆಯಲಕ್ಕ) ಇನ್ನಿಬ್ಬರು ಇವನಿಗೂ ಒಂದು ಮುಖ್ಯ ಸ್ಥಾನ ಸಲ್ಲುತ್ತದೆ.

(ಆರ್.ಎನ್.ವಿ.)