ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾನ್, ಆಟ್ಟೊ

ಹಾನ್, ಆಟ್ಟೊ 1879-1968. ಜರ್ಮನಿಯ ಭೌತರಸಾಯನವಿe್ಞÁನಿ. ಸಂಶೋಧನ ಕ್ಷೇತ್ರ ಪರಮಾಣು ವಿದಲನ. ವಣಿಕ ಮನೆತನದಲ್ಲಿ ಹುಟ್ಟಿದ ಇವನಿಗೆ ವ್ಯಾಪಾರದಲ್ಲಿದ್ದ ಆಸಕ್ತಿ ವಿದ್ಯಾಭ್ಯಾಸದಲ್ಲಿರಲಿಲ್ಲ. ಆದರೆ ಯೋಹನ್ ಫ್ರೀಡ್ರಿಚ್ ವಿಲ್‍ಹೆಲ್ಮ್ ಅಡಾಲ್ಫ್ ಫಾನ್ ಬೇಯರ್ (1835-1917) ಎಂಬ ಜರ್ಮನ್ ರಸಾಯನವಿe್ಞÁನಿಯ (ಈತ ಇಂಡಿಗೊ - ನೀಲಿಬಣ್ಣವನ್ನು ಸಂಶ್ಲೇಷಿಸಿದ್ದ) ಸಂಪರ್ಕಕ್ಕೆ ಬಂದ ಈತ ಆತನ ಪ್ರೋತ್ಸಾಹದಿಂದ ಕಲಿಕೆಯಲ್ಲಿ ಮುಂದುವರಿದ. 1901ರಲ್ಲಿ ಪಿಎಚ್.ಡಿ. ಪಡೆದ. ಮೂರು ವರ್ಷಗಳ ತರುವಾಯ ಲಂಡನ್ನಿನಲ್ಲಿ ರ್ಯಾಮ್ಸೆಯೊಡನೆ (1852-1916) ಸಂಶೋಧನೆ ಮಾಡುವ ಅವಕಾಶ ಸಿಕ್ಕಿತು. 1906ರಲ್ಲಿ ಜರ್ಮನಿಗೆ ಹಿಂತಿರುಗಿ ಎಮಿಲ್ ಫಿಷರ್‍ನ (1852-1919) ಮಾರ್ಗದರ್ಶ ನದಲ್ಲಿ ಸಂಶೋಧನೆಗೆ ತೊಡಗಿದ. 1928ರಲ್ಲಿ ಕೈಸರ್ ವಿಲ್‍ಹೆಲ್ಮ್ ರಸಾಯನವಿe್ಞÁನ ಸಂಸ್ಥೆಯ ನಿರ್ದೇಶಕನಾದ. ತನ್ನ ಬಾಲ್ಯ ಸ್ನೇಹಿತೆ ಲೀಸ್ ಮೈಟ್ನರ್ (1878-1968) ಸಹಯೋಗದಲ್ಲಿ ಪ್ರೋಟೊ ಆಕ್ಟಿನಿಯಮ್ ಎಂಬ ನವ ಧಾತುವನ್ನು ಶೋಧಿಸಿದ. ಬೈಜಿಕ ಸಮರೂಪಿಗಳ ಆವಿಷ್ಕಾರಗೈದವರೂ (1921) ಇವರೇ. ಇವು ಒಂದೇ ವಿಕಿರಣಪಟು ಧಾತುವಿನ ಪರಮಾಣುಗಳು, ಅರ್ಧಾಯು ಮಾತ್ರ ಭಿನ್ನ. ಉದಾಹರಣೆಗೆ ಃಡಿ-80 ಮತ್ತು ಃಡಿ-82 ಸಮಸ್ಥಾನಿಗಳ ಅರ್ಧಾಯು ಅನುಕ್ರಮವಾಗಿ 4.4 ಗಂಟೆಗಳು ಮತ್ತು 6.1 ಮಿನಿಟುಗಳು. ಅವುಗಳ ಶಕ್ತಿ ಸ್ಥಿತಿಗಳು ಭಿನ್ನವಾಗಿರುವುದೇ ಇದರ ಕಾರಣ ಎಂದು ಇವರು ವಿವರಿಸಿದರು. ನ್ಯೂಟ್ರಾನ್‍ಗಳ ಸಂಘಟ್ಟನದಿಂದ ಯುರೇನಿಯಮ್-235 ವಿದಲನ ಇವನ ಪ್ರಸಿದ್ಧಿಗೆ ಕಾರಣವಾದ ಮುಖ್ಯ ಸಂಶೋಧನೆ. 1930ರ ದಶಕದಲ್ಲಿ ಫರ್ಮಿಯೊಡನೆ (1901-54) ಇದರ ಬಗ್ಗೆ ಪರಿಶೀಲಿಸಿದ್ದ. ಆದರೆ ಫರ್ಮಿ ಫಲಿತಾಂಶಗಳು ಸಂಶಯಾಸ್ಪದವಾಗಿದ್ದುವು. ವಿದಲನದ ಫಲವಾಗಿ ಯಾವುದೊ ವಿಕಿರಣಪಟು ಧಾತು ಅಥವಾ ಧಾತುಗಳು ಹುಟ್ಟಿರಬಹುದೆಂಬ ಅನುಮಾನ ಉಳಿದಿತ್ತು. ಇವನು ಮತ್ತು ಮೈಟ್ನರ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ನ್ಯೂಟ್ರಾನ್ ಸಂಘಟ್ಟನೆಗೆ ಒಳಗಾದ ಯುರೇನಿಯಮ್‍ನೊಂದಿಗೆ ಬೇರಿಯಮ್ ವರ್ತಿಸುವಂತೆ ಮಾಡಿದಾಗ ಅದು ಉತ್ಪನ್ನದಲ್ಲಿದ್ದ ಯಾವುದೋ ವಿಕಿರಣಪಟು ಧಾತುವಿನ ಒಂದಂಶವನ್ನು ಕೊಂಡೊಯ್ಯಿತು. ಅದು ರೇಡಿಯಮ್ ಇರಬಹುದು. ಏಕೆಂದರೆ ಬೇರಿಯಮ್ ಮತ್ತು ರೇಡಿಯಮ್ ರಾಸಾಯನಿಕ ಸಾಮ್ಯವಿರುವ ಧಾತುಗಳು. ವಾಸ್ತವವಾಗಿ ಅದು ರೇಡಿಯಮ್ ಆಗಿರಲಿಲ್ಲ. ಸರಿಸುಮಾರಾಗಿ ಯುರೇನಿಯಮ್ ಪರಮಾಣುವಿನ ಅರ್ಧತೂಕದಷ್ಟಿತ್ತು. ಇದರಿಂದ ಯುರೇನಿಯಮ್ ಪರಮಾಣು ಅರ್ಧಹೋಳಾಗಿ ಒಡೆದಿರಬಾರದೇಕೆ ಎಂಬ ಸಂದೇಹ ಮೂಡಿತು.

ಯುರೇನಿಯಮ್ ವಿದಲನ ಎಂದು ಕರೆಯಲಾದ ಈ ಕ್ರಿಯೆ ಸು. 300 ರೀತಿಗಳಲ್ಲಿ ನಡೆಯುವುದೆಂದು ಈಗ ಗೊತ್ತಾಗಿದೆ. ಆದರೆ ಈ ಮೇಲಿನ ರೀತಿಯೇ ಹೆಚ್ಚು ಸಂಭವನೀಯ. ವಿದಲನೋತ್ಪನ್ನಗಳ ಒಟ್ಟು ರಾಶಿಗಿಂತ ಸ್ವಲ್ಪ ಕಡಿಮೆ. ಇದನ್ನು ರಾಶಿದೋಷವೆನ್ನುತ್ತಾರೆ. ನಾಶವಾದ ವಸ್ತುರಾಶಿ ಅಪಾರಶಕ್ತಿ ರೂಪದಲ್ಲಿ ವ್ಯಕ್ತವಾಗುವುದೆಂದು ಐನ್‍ಸ್ಟೈನ್ (1879-1955) ಅವರ ರಾಶಿ-ಶಕ್ತಿ ಸಮೀಕರಣ E=mc2 ದಿಂದ ಗಣಿಸಲಾಯಿತು. ಈ ಸಮೀಕರಣದಲ್ಲಿ m=ವಿನಷ್ಟರಾಶಿ, ಇ=ಫಲಿತಶಕ್ತಿ, C=ಬೆಳಕಿನ ವೇಗ. ಯುರೇನಿಯಮ್ ವಿದಲನ ಒಂದು ಶೃಂಬಲಾ ಕ್ರಿಯೆ. ಬಿಡುಗಡೆಯಾದ ಒಂದೊಂದು ನ್ಯೂಟ್ರಾನ್ ಹೀಗೆಯೇ ಯುರೇನಿಯಮ್-235 ಪರಮಾಣುಗಳನ್ನು ಒಡೆಯುತ್ತ ಹೋಗಿ ತನ್ನದೇ ಆದ ಒಂದು ಶೃಂಬಲಾ ಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇಂಥ ಅಸಂಖ್ಯ ಕ್ರಿಯೆಗಳ ದೆಸೆಯಿಂದ ಹೊರಬೀಳುವ ಅಗಾಧ ಶಕ್ತಿಯೇ ಪರಮಾಣು ಶಕ್ತಿ. ಕೇವಲ ಪರಮಾಣುರಾಶಿಮಾನ ದೋಷದಿಂದ 931 ಮಿಲಿಯನ್ ಎಲೆಕ್ಟ್ರಾನ್‍ವೋಲ್ಟುಗಳಷ್ಟು ಅಪಾರ ಶಕ್ತಿ ಬಿಡುಗಡೆಯಾಗುವುದೆಂದು ಒಂದು ಅಂದಾಜು. ಪರಮಾಣು ವಿದಲನದ ಆದ್ಯ ಪ್ರವರ್ತಕನೆಂದು ಪರಿಗಣಿಸಿ ಇವನಿಗೆ 1944ನೆಯ ಸಾಲಿನ ರಸಾಯನವಿe್ಞÁನದ ನೊಬೆಲ್ ಪಾರಿತೋಷಿಕವನ್ನು ಪ್ರದಾನಿಸಲಾಯಿತು. ಮ್ಯಾಕ್ಸ್‍ಪ್ಲ್ಯಾಂಕ್ ಸೊಸೈಟಿಯ ಅಧ್ಯಕ್ಷ ಪದವಿ ಪ್ರಾಪ್ತವಾಯಿತು. 1960ರಲ್ಲಿ ನಿವೃತ್ತಿಯಾಗುವ ತನಕ ಅಧ್ಯಕ್ಷ ಪೀಠದಲ್ಲಿದ್ದ. ಈ ಸಂಶೋಧನೆಯ ದೂರಗಾಮಿ ಪರಿಣಾಮಗಳನ್ನು ನಾಜೀ ಜರ್ಮನಿ ಅಷ್ಟು ಗಂಭೀರವಾಗಿ ಪರಿಗಣಿಸದಿದ್ದುದು ಒಳಿತೇ ಆಯಿತು. ಜರ್ಮನಿ ಪರಮಾಣು ಬಾಂಬನ್ನು ಸೃಷ್ಟಿಸಲಿಲ್ಲ. ಆದರೆ ಅಮೆರಿಕ ಈ ದಿಶೆಯಲ್ಲಿ ಯಶಸ್ವಿಯಾಯಿತು. ಸಂಶೋಧನೆಯ ವಿವರಗಳು ನೀಲ್ಸ್ ಬೋರ್ (1885-1962) ಮೂಲಕ ಅಮೆರಿಕ ದೇಶದ ಹಸ್ತಗತವಾಯಿತು. ಅಲ್ಲಿ ಲಿಯೊ ಸ್ಝಿಲಾರ್ಡ್ (1898-1964) ಎಂಬ ಭೌತವಿe್ಞÁನಿಯ ಪರಿಶ್ರಮದಿಂದ ಪರಮಾಣು ಬಾಂಬ್ ನಿರ್ಮಾಣಗೈಯಲು ಅಮೆರಿಕ ಸರ್ಕಾರ ಮನಹಟ್ಟನ್ ಯೋಜನೆಯನ್ನು ಪ್ರವರ್ತಿಸಿತು. ಆ ವೇಳೆಗೆ (1945ರ ಸುಮಾರಿಗೆ) ಯುರೋಪ್‍ನಲ್ಲಿ ಎರಡನೆಯ ಮಹಾಯುದ್ಧ ಮುಕ್ತಾಯವಾಗಿತ್ತು. ಹಾನ್, ಲವೆ, ಹೈಸೆನ್‍ಬರ್ಗ್ ಮತ್ತು ಸಂಗಡಿಗರನ್ನು ಸೆರೆಹಿಡಿದು ಅಮೆರಿಕಕ್ಕೆ ಒಯ್ದರು. ಅಲ್ಲಿ ಇವನು ಬಂದಿಯಾಗಿದ್ದಾಗಲೇ ಇವನಿಗೆ ಹೃದಯ ವಿದ್ರಾವಕ ಸುದ್ದಿಯೊಂದು ತಲಪಿತು: ಅಮೆರಿಕ ಒಂದು ಪುಟ್ಟ ಪರಮಾಣು ಬಾಂಬನ್ನು ಹಿರೋಷಿಮ ನಗರದ ಮೇಲೆ ತಾಡಿಸಿಯಾಗಿತ್ತು. ಲಕ್ಷಾಂತರ ಜೀವ ಹಾನಿ, ಆಸ್ತಿಪಾಸ್ತಿ ನಿರ್ನಾಮವಾಯಿತೆಂದು ತಿಳಿದು ಈತ ಸಂಕಟಪಟ್ಟ. ಈ ದುರಂತದಲ್ಲಿ ತನ್ನ ಪಾಲೂ ಇದೆಯೆಂದು ಮನನೊಂದು ಆತ್ಮಹತ್ಯೆಯ ಯೋಚನೆ ಮಾಡಿದ್ದನೆಂದು ವರದಿ. 1957ರಲ್ಲಿ ಜರ್ಮನಿ ಕೈಗೆತ್ತಿಕೊಂಡ ಮಾರಕಾಸ್ತ್ರಗಳ ತಯಾರಿಕೆಗೆ ಸ್ಪಂದಿಸದೆ, ಜೀವಮಾನ ಪರ್ಯಂತ ಭಯಂಕರ ಬೈಜಿಕಾಸ್ತ್ರಗಳ ವಿರೋಧಿಯಾಗಿದ್ದ. ಅಮೆರಿಕ ಪರಮಾಣು ಶಕ್ತಿ ಆಯೋಗ ನೀಡುವ ಫರ್ಮಿ ಪ್ರಶಸ್ತಿಯನ್ನು ಪಡೆದ ಏಕೈಕ ವಿದೇಶೀಯ ಈತ. ಇವನು 1968ರಲ್ಲಿ ನಿಧನನಾದ. (ಎಚ್.ಜಿ.ಎಸ್.)