ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾರ್ಡಿ, ಥಾಮಸ್

ಹಾರ್ಡಿ, ಥಾಮಸ್ 1840-1928. ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಹಾಗೂ ಕವಿ. ಇಂಗ್ಲೆಂಡಿನ ಡಾರ್ಸೆಟ್ ಹತ್ತಿರದ ಅಪ್ಪರ್ ಬಾಕ್‍ಹಾಮ್‍ಟನ್‍ನಲ್ಲಿ 1840 ಜೂನ್ 2ರಂದು ಜನಿಸಿದ. ಡಾರ್ಸೆಟ್‍ನ ಗ್ರಾಮರ್ ಶಾಲೆಯಲ್ಲಿಯೂ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿಯೂ ವಿದ್ಯಾಭ್ಯಾಸ ಪಡೆದ ಈತ ಸೂಕ್ಷ್ಮ ಮನಸ್ಸಿನ ಸಂಕೋಚ ಸ್ವಭಾವದವನಾಗಿದ್ದ. ತಂದೆ ವಾಸ್ತುಶಿಲ್ಪಿ ಹಾಗೂ ಸಂಗೀತಗಾರ, ತಾಯಿ ಸಾಹಿತ್ಯಾಸಕ್ತೆ. ತಂದೆಯಂತೆಯೇ ಲಂಡನ್ನಿನಲ್ಲಿ ಸಹಾಯಕ ವಾಸ್ತುಶಿಲ್ಪಿಯಾಗಿ ಹಲವು ವರ್ಷ ಕೆಲಸಮಾಡಿದರೂ ಇವನ ತೀವ್ರ ಸಾಹಿತ್ಯಾಸಕ್ತಿ ಬರೆವಣಿಗೆಯ ಕಡೆಗೆ ಸೆಳೆಯಿತು. 1870ರ ತರುವಾಯ ಬರೆವಣಿಗೆಯಲ್ಲಿ ತೊಡಗಿ ಹಲವಾರು ಕಾದಂಬರಿಗಳನ್ನೂ ಕಾವ್ಯ, ಕವನಗಳನ್ನೂ ರಚಿಸಿದ.

ಹಳ್ಳಿಗಳ ಮಧ್ಯಮವರ್ಗದ ಜನಜೀವನ, ಬಡತನ, ಮೂಢನಂಬಿಕೆಗಳು, ಮುಗ್ಧಪ್ರೇಮ ಇತ್ಯಾದಿಗಳು ಇವನ ಕಾದಂಬರಿಗಳ ವಸ್ತುಗಳಾಗಿವೆ. ಮಾನವೀಯ ಅನುಕಂಪದ ಹೆಚ್ಚುಗಾರಿಕೆಗೆ ಇವನ ಕಾದಂಬರಿಗಳು ಹೆಸರಾಗಿವೆ. ¥sóÁರ್ ಫ್ರಮ್ ದ ಮ್ಯಾಡಿಂಗ್ ಕ್ರೌಡ್(1874), ರಿಟರ್ನ್ ಆ¥sóï ದ ನೇಟಿವ್(1878), ದ ಮೇಯರ್ ಆ¥sóï ದ ಕ್ಯಾಸ್ಟರ್ ಬ್ರಿಡ್ಜ್(1886), ಟೆಸ್ ಆ¥sóï ದ ಡರ್ಬರ್‍ವೀಲ್(1891), ಜೂಡ್ ದ ಅಬ್ಸ್‍ಕ್ಯೂರ್(1895) ಇವನ ಪ್ರಸಿದ್ಧ ಕಾದಂಬರಿಗಳು. ದಿ ಡೈನಾಸ್ಟ್ ಎಂಬುದು ಇವನ ನಾಟಕೀಯ ಮಹಾಕಾವ್ಯ. ಇದನ್ನು ತನ್ನ 70ನೆಯ ವಯಸ್ಸಿನಲ್ಲಿ ಬರೆದ. ಇವಲ್ಲದೆ ಈತ ಹಲವಾರು ಬಿಡಿ ಕವನಗಳನ್ನೂ ಬರೆದಿದ್ದಾನೆ.

¥sóÁರ್ ಫ್ರಮ್ ದ ಮ್ಯಾಡಿಂಗ್ ಕ್ರೌಡ್ (1874) ಕೃತಿಯಲ್ಲಿ ಸ್ವಾರ್ಥ ಹಾಗೂ ನಿಸ್ವಾರ್ಥ ಪ್ರೇಮಗಳ ವೈರುಧ್ಯಗಳ ಚಿತ್ರಣವಿದೆ. ಮೇಯರ್ ಆಫ್ ಕ್ಯಾಸ್ಟರ್ ಬ್ರಿಡ್ಜ್ ಕಾದಂಬರಿ ಆಧ್ಯಾತ್ಮಿಕ ಹಾಗೂ ಭೌತಿಕ ವಿಷಯಗಳಲ್ಲಿ ಸಂಭಾವಿತ ವ್ಯಕ್ತಿಯೊಬ್ಬನ ಅಧೋಗತಿಯನ್ನು ಚಿತ್ರಿಸಿದರೆ, ಅನೈತಿಕ ಪ್ರೇಮದಿಂದಾದ ದುರಂತಗಳ ವಿಷಣ್ಣತೆಯನ್ನು ಇವನ ಪ್ರಸಿದ್ಧ ಕಾದಂಬರಿ ರಿಟರ್ನ್ ಆ¥sóï ದ ನೇಟಿವ್ ಚಿತ್ರಿಸುತ್ತದೆ.

ಹರಿತ ವಿಡಂಬನೆ ಮತ್ತು ಕಟುವ್ಯಂಗ್ಯ ಇವನ ಕಾದಂಬರಿಗಳ ವೈಶಿಷ್ಟ್ಯ. ಇಂಗ್ಲೆಂಡ್ ಸರ್ಕಾರ ಇವನಿಗೆ ಆರ್ಡರ್ ಆ¥sóï ಮೆರಿಟ್‍ಪ್ರಶಸ್ತಿಯನ್ನು ನೀಡಿ ಗೌರವಿಸಿತು(1910). 1928 ಜನವರಿ 11ರಂದು ಇವನು ನಿಧನನಾದ. ಇವನ ರಿಟರ್ನ್ ಆ¥sóï ದ ನೇಟಿವ್, ಟೆಸ್ ಆಫ್ ದ ಡರ್ಬರ್‍ವೀಲ್ ಕಾದಂಬರಿಗಳನ್ನು ವಿ.ನಾಗರಾಜರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. *