ಹೀರೆ ಲ್ಯುಫಾ ಅಕ್ಶುಟಾಂಗುಲ ಎಂಬ ಪ್ರಭೇದದ ಈ ಬಳ್ಳಿಯು ಕುಕರ್‍ಬಿಟೇಸಿ ಕುಟುಂಬಕ್ಕೆ ಸೇರುತ್ತದೆ. ಇದನ್ನು ಆಂಗ್ಲಭಾಷೆಯಲ್ಲಿ ರಿಬ್ಬರ್‍ಗಾರ್ಡ್, ವೆಜಿಟೇಬಲ್‍ಸ್ಪಾಂಜ್, ಹಿಂದಿಯಲ್ಲಿ ಕಾಲಿ ಟೊರೈ, ಜಿಂಗಾ ಮತ್ತು ಕನ್ನಡದಲ್ಲಿ ಹೀರೆಕಾಯಿ ಎಂದು ಕರೆಯುತ್ತಾರೆ. ಉಷ್ಣವಲಯದಲ್ಲಿ ಬೆಳೆಯುವ ಈ ಸಸ್ಯ ನೆಲದ ಮೇಲೆ ವಾರ್ಷಿಕ ಬಳ್ಳಿ. ಏಷ್ಯದ ವಿವಿಧ ದೇಶಗಳ್ಲಿ ಬೆಳೆಯುತ್ತದೆ. ಭಾರತದ ಎಲ್ಲ ಭಾಗಗಳಲ್ಲಿ ಬೆಳೆಯುತ್ತಾರೆ.

ಹೀರೆಕಾಯಿ ತರಕಾರಿಯ ರೂಪದಲ್ಲಿ ಅಡುಗೆಗೆ ಉಪಯೋಗವಾಗುತ್ತದೆ. ಒಣಗಿದ ಹಣ್ಣುಗಳಿಂದ ಪಡೆಯುವ ತಂತುಮಯ ಪದಾರ್ಥವು ಕಾರ್ಖಾನೆಗಳಲ್ಲಿ ಸೋಸುವ ಅರಿವೆಯಾಗಿ ಮತ್ತು ಸ್ನಾನದ ಸ್ಪಂಜಿನ ಬದಲಾಗಿ ಉಪಯುಕ್ತವಾಗುತ್ತದೆ.

   (ಎ.ಜಿ.ಡಿ.)