ಮೋಟರ ಮದುವೆಗೆ ಭಂಡರು ಹರೆಯ ಹೊಯ್ದು ಮೂಕೊರತಿಯರು ಕಳಸವ ಹೊತ್ತರಲ್ಲಾ ! `ಉಘೇ ಚಾಂಗು ಭಲಾ' ಎಂದು ನಿಬ್ಬಣ ನೆರೆದು ಹೂದಂಬುಲಕ್ಕೆ ಮುನಿವರದೇಕಯ್ಯಾ ? ತ್ರಿಜಗವೆಲ್ಲಾ ನಿಬ್ಬಣವಾಯಿತ್ತು ಗುಹೇಶ್ವರನನರಿಯದ ಹಗರಣವೊ !