ಚಿತ್ರ: ಯಜಮಾನ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ಎಸ್.ಪಿ.ಬಿ, ರಾಜೇಶ್, ಚಿತ್ರ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ||ಪ||
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ
||ನಮ್ಮ ಮನೆಯಲಿ||
ಹಾಡೋ ಚಿಲಿಪಿಲಿ ಹಕ್ಕಿಗಳೆ
ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂಥ ಅಣ್ಣನು
ತಾಯಿಯಾದನು ನೋಡಿರಿ
ಶಿಲುಬೆಯನೇ ಎರಿದರೂ ನಗುವಿನ ಒಲುಮೆ ತುಂಬಿದೆ
ಹಾರಾಡೋ ಮನಸೀಗೆ ಆಕಾಶವೆ ನೀನಾದೆ
ಈ ಕಣ್ಗಳೇ ಕೊಡೆಯಾಗಲಿ
ಕಣ್ಣಿನ ಹನಿಯಲ್ಲೇ ಹೃದಯಕೆ ಹೂಮಳೆ
||ನಮ್ಮ ಮನೆಯಲಿ||
ನಮ್ಮ ಬಂಧ ಅನುಬಂಧ
ಸ್ವರ್ಗವೇ ನಾಚುವ ಹಾಗಿದೆ
ಗಿಲ್ಲಿ ಮೊಗ್ಗು ಅರಳಿದರೆ
ಹೂವಿಗೆ ಸಾವಿರ ವರ್ಷವೇ
ಕಣ್ಣೆರಡೂ ಇರಬಹುದು
ನೋಟಗಳೊಂದೇ ಅಲ್ಲವೇ
ರೂಪಗಳು ಎರಡೆರಡು ಇರಬಹುದು
ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ
ಇದು ಅಣ್ಣನಾಶಯ
ನೀ ಹೇಳೋ ಶುಭಾಶಯ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ
||ನಮ್ಮ ಮನೆಯಲಿ||