Pages(key to [[Help:Page Status{{!}}Page Status]])
ಯೋಗದಾಗೆಂಬುದನಾರು ಬಲ್ಲರೊ? ಅದು ಮೂಗ ಕಂಡ ಕನಸು ! ನಡೆವ ಬಟ್ಟೆ ಮೂರು ನಡೆಯದ ಬಟ್ಟೆ ಒಂದೆ ! ಒಂದನೊಂಬತ್ತ ಮಾಡಿ ನಡೆದೆಹೆವೆಂಬರು ಒಂಬತ್ತನೊಂದ ಮಾಡಿ ನಡೆದೆಹೆವೆಂಬ[ನ್ನಕ್ಕರ] ಮೂರು ಮುಖದ ಕತ್ತಲೆ ಒಂದು ಮುಖವಾಗಿ ಕಾಡುತ್ತಿಪ್ಪುದು. ಪ್ರಾಣಲಿಂಗಸಂಬಂಧವೆಲ್ಲಿಯದು ಹೇಳಾ ಗುಹೇಶ್ವರಾ.