ರುಚಿಯೆಂದರೆ ರೂಪಾಯಿತ್ತು ಸವಿಯೆಂದರೆ ಸಂದಾಯಿತ್ತು. ರುಚಿಯೆನ್ನದ ರೂಪೆನ್ನದ ಸವಿಯೆನ್ನದ ಸಂದಿಲ್ಲದ ಕೂಡಲಚೆನ್ನಸಂಗನ ಪ್ರಸಾದಿಗೆ ನಮೋ ನಮೋಯೆಂಬೆ.