ರುಚ್ಯರ್ಪಿತ ಪ್ರಸಾದಸ್ತು ಸ್ಪರ್ಶನಂ ಸುಖಮರ್ಪಿತಂ ಉಭಯಾರ್ಪಿತ ವಿಹೀನಂ ಚ ಪೂಜನಂ ನಿಷ್ಫಲಂ ಭವೇತ್ ಇಂತೆಂಬ ಶ್ರುತಿಯನೊಲ್ಲೆ. ರುಚಿಯ ಬಲ್ಲನೆ ಪ್ರಸಾದಿ ತಾ ಲಿಂಗಭೋಗೋಪಭೋಗಿಯಾಗಿ ? ಸುಖವ ಬಲ್ಲನೆ ಭಕ್ತ ತಾ ಜಂಗಮಭೋಗೋಪಭೋಗಿಯಾಗಿ ? ರುಚಿಯನರ್ಪಿಸುವಾತ ಪ್ರಸಾದಿಯಲ್ಲ
[ಸುಖವ]ನರ್ಪಿಸುವಾತ ಭಕ್ತನಲ್ಲ
ಇದನರಿದ ಶರಣಂಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.