ರುದ್ರಮುನಿಲಿಂಗವೆ ಸದ್ಭಕ್ತರನೆ ತೋರಿಸಯ್ಯಾ ಪ್ರಭುವೆ. ನಿಧಾನವನಗಿವೆನೆಂದು ಹೋದಡೆ ವಿಘ್ನ ಬಪ್ಪುದು ಮಾಬುದೆ ಅಯ್ಯಾ ? ಸದಾಶಿವನ ಪೂಜಿಸಿಹೆನೆಂದು ಹೋದಡೆ ತರುಬಿ ಹಿಡಿವವಯ್ಯಾ ಸಕಲ ವಿಪತ್ತುಗಳು ಎಡೆಭಂಗವಿಲ್ಲದೆ ನಿಲಬಲ್ಲಡೆ ಸದಮಲಸುಖವನೀವ ನಮ್ಮ ಕೂಡಲಸಂಗಮದೇವರು