ರೂಪು ಶೂನ್ಯವಾಗಬೇಕು ಶೂನ್ಯ ಅಂಕುರಿತವಾಗಬೇಕು. ಅಂಕುರಿತಕ್ಕೆ ಸಂದು ತೆರಹಿಲ್ಲದಿದ್ದರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.