ರೂಪ(ನೆ) ಕಂಡರು ನಿರೂಪ ಕಾಣರು. ಅನುವನೆ ಕಂಡರು ತನುವನೆ ಕಾಣರು. ಆಚಾರವನೆ ಕಂಡರು ವಿಚಾರವನೆ ಕಾಣರು. ಗುಹೇಶ್ವರಾನಿಮ್ಮ ಕುರುಹನೆ ಕಂಡರು ಕೂಡಲರಿಯದೆ ಕೆಟ್ಟರು !