ಲಿಂಗಕ್ಕೆ ತನ್ನ ತನುವೇ ಭಾಜನವಾಗಿ
ಆ ತನುವಿಂಗೆ ಲಿಂಗವೇ ಭಾಜನವಾಗಿ
ತನುವೆಂಬ ಭಾಜನವಳಿದು ಲಿಂಗವೇ ಭಾಜನವಾಗಿರಬಲ್ಲರೆ ಅದು ಲಿಂಗಭಾಜನವೆಂಬೆ. ಮನಕ್ಕೆ ಲಿಂಗವೇ ಭಾಜನವಾಗಿ
ಲಿಂಗಕ್ಕೆ ಮನವೇ ಭಾಜನವಾಗಿ ಮನವೆಂಬ ಭಾಜನವಳಿದು
ಮನವೇ ಲಿಂಗಭಾಜನರಾಗಿರಬಲ್ಲರೆ
ಮನಲಿಂಗಭಾಜನವೆಂಬೆ. ಪ್ರಾಣಕ್ಕೆ ಲಿಂಗವೇ ಭಾಜನವಾಗಿ
ಲಿಂಗಕ್ಕೆ ಪ್ರಾಣವೇ ಭಾಜನವಾಗಿ ಪ್ರಾಣವೆಂಬ ಭಾಜನವಳಿದು
ಪ್ರಾಣವೇ ಲಿಂಗವಾಗಿರಬಲ್ಲರೆ
ಪ್ರಾಣಲಿಂಗಭಾಜನವೆಂಬೆ. ತನುಭಾಜನ ಮನಭಾಜನ ಪ್ರಾಣಭಾಜನ ಇಂತೀ ತ್ರಿವಿಧವು ಚಿದ್ಭಾಂಡೆಯಲ್ಲಿ ಅಡಗಿ ಚಿದ್ಪ್ರಹ್ಮವೇ ತಾನಾಗಿರಬಲ್ಲರೆ
ಸಹವರ್ತಿ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.