ಲಿಂಗಕ್ಕೆ ಮನ ಭಾಜನ ಜಂಗಮಕ್ಕೆ ಧನ ಭಾಜನ ಪ್ರಸಾದಕ್ಕೆ ತನು ಭಾಜನ_ ಈ ತ್ರಿವಿಧಭಾಜನದಲ್ಲಿ ಸಹಭೋಜನವ ಮಾಡುವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣನು