ಲಿಂಗದ್ರೋಹಿಯನೆ ಗುರುವೆಂಬೆ ಗುರುದ್ರೋಹಿಯನೆ ಶಿಷ್ಯನೆಂಬೆ. ಸಮಯದ್ರೋಹಿಯನೆ ಭಕ್ತನೆಂಬೆ ಪ್ರಸಾದದ್ರೋಹಿಯನೆ ಮಾಹೇಶ್ವರನೆಂಬೆ. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸರ್ವಾಂಗದ್ರೋಹಿಯ ಲಿಂಗೈಕ್ಯನೆಂದೆಂಬೆ