ಲಿಂಗದ ಪ್ರಾಣದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು ಪ್ರಾಣನದಫ ಲಿಂಗದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು. ಹೂಸಿ ಹುಂಡನ ಮಾಡಿ ಹೊರಗನೆ ಪೂಜಿಸಿ ವೃಥಾ ದಿನಂಗಳು ಸವೆದುಹೋದವು. ಕೂಡಲಸಂಗಮದೇವರಲ್ಲಿ ಎನ್ನ ಪ್ರಾಣ ನಿಕ್ಷೇಪವಹ ಭೇದವ ತೋರಾ ಚೆನ್ನಬಸವಣ್ಣಾ.