ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ ಶರಣ ಪ್ರಸಾದಭೋಗೋಪಭೋಗದಲ್ಲಿ ಆಪ್ಯಾಯನ ಶರಣ ಅನಪ್ಯಾಯನಪ್ರಸಾದಿ ಕುಳಾಕುಳರಹಿತನು. ಕ್ರೀ ಹಿಂದಾದ ಲಿಂಗ ಮುಂದಾದ ಪ್ರಸಾದಿ. ಪ್ರಸಾದಕ್ಕೆ ತಾನವಗ್ರಾಹಿ ಪ್ರಸಾದಿ ತನಗವಗ್ರಾಹಕನು. ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ.