ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ ಸುಖವ ಕೊಡು ಕಂಡಾ ಲಿಂಗವೆ ಪರಮಸುಖವ ಕೊಡು ಕಂಡಾ ಲಿಂಗವೆ. ಕೂಡಲಸಂಗಮದೇವಾ ಇದೇ ವರವ ನಿಮ್ಮಲ್ಲಿ ಬೇಡುವೆ. 373