ಲಿಂಗ ಲಿಂಗವೆಂಬವ ಲಿಂಗಸೂತಕಿಯಯ್ಯ ಜಂಗಮ ಜಂಗಮವೆಂಬವ ಜಂಗಮಸೂತಕಿಯಯ್ಯ ಪ್ರಸಾದ ಪ್ರಸಾದವೆಂಬವ ಪ್ರಸಾದಸೂತಕಿಯಯ್ಯ ಈ ತ್ರಿವಿಧ ಸೂತಕಿಯ ಮಾತ ಕೇಳಲಾಗದು. ಸರ್ವಸೂತಕ ನಿರ್ವಾಹವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.