ಲೋಹ ಪರುಷವ ಮುಟ್ಟುವುದಲ್ಲದೆ ಪರುಷ ಪರುಷವ ಮುಟ್ಟುವುದೆ ಅಯ್ಯಾ ಅಂಗವಿಡಿದಂಗೆ ಲಿಂಗವುಂಟಲ್ಲದೆ ಲಿಂಗವಿಡಿದಂಗೆ ಲಿಂಗವುಂಟೆ `ಆಣೋರಣೀಯಾನ್ ಮಹತೋ ಮಹೀಯಾನ್ ಹಿರಿದಕ್ಕೆ ಹಿರಿದು ಕಿರಿದಿಂಗೆ ಕಿರಿದು ವಾಙ್ಮನಕ್ಕಗೋಚರ ಕೂಡಲಸಂಗಮದೇವಾ ಸ್ವರೂಪು ಪ್ರಸಾದ ನಿರೂಪು ಲಿಂಗೈಕ್ಯ.