ವರ
ವೇಷದ
ವಿಭೂತಿ
ರುದ್ರಾಕ್ಷಿಯ
ಧರಿಸಿಕೊಂಡು
ವೇದ
ಶಾಸ್ತ್ರ
ಪುರಾಣಾಗಮದ
ಬಹುಪಾಠಿಗಳು
ಅನ್ನ
ಹೊನ್ನು
ವಸ್ತ್ರವ
ಕೊಡುವನ
ಬಾಗಿಲಕಾಯಿದು
ಮಣ್ಣ
ಪುತ್ಥಳಿಯಂತೆ
ಅನಿತ್ಯನೇಮದ
ಹಿರಿಯರುಗಳು.
ಅದೆಂತೆಂದಡೆ:
ವೇದವೃದ್ಧಾ
ವಯೋವೃದ್ಧಾ
ಶಾಸ್ತ್ರವೃದ್ಧಾ
ಬಹುಶ್ರುತಾಃ
ಇತ್ಯೇತೆ
ಧನವೃದ್ಧಸ್ಯ
ದ್ವಾರೇ
ತಿಷ*ಂತಿ
ಕಿಂಕರಾಃ
ಎಲ್ಲಾ
ಹಿರಿಯರುಗಳು
ಲಕ್ಷ್ಮಿಯ
ದ್ವಾರಪಾಲಕರಾದರಯ್ಯ.
ಅರುಹಿಂಗೀ
ವಿಧಿಯೇ
ಗುಹೇಶ್ವರಾ.