Pages (key to Page Status)
ವಾರವೆಂದರಿಯೆ ದಿನವೆಂದರಿಯೆ ಏನೆಂದರಿಯೆನಯ್ಯಾ. ಇರುಳೆಂದರಿಯೆ ಹಗಲೆಂದರಿಯೆ ಏನೆಂದರಿಯೆನಯ್ಯಾ. ನಿಮ್ಮ ಪೂಜಿಸಿ ಎನ್ನುವ ಮರೆದೆ ಕೂಡಲಸಂಗಮದೇವಾ. 490