• • • ಶನಿವಾರ

ನಿತ್ರಾಣನಾದ ನಾನಿಂದು, ಬರೆಯುವ ಮಹಾ ಯಜ್ಞದ

ಇನ್ನೊಂದು ದಿನವನ್ನು ಆರಂಭಿಸುತ್ತಿದ್ದೇನೆ. ಕಳೆದ ರಾತ್ರೆ ನನಗೆ ಪ್ರತಿಕೂಲವಾಗಿತ್ತು, ನಿದ್ದೆ ನನಗೆ ಕೈ ಕೊಟ್ಟಿತು. ನಿನ್ನೆ ಹಗಲೆಲ್ಲಾ ಒಂದೇ ಸಮನೆ ವಿಶ್ರಾಂತಿಯ ಯೋಚನೆ ಇಲ್ಲದೆ ಬರೆದುದರ ಫಲವಿರ ಬೇಕು. ಮೈ ಮನಸ್ಸು ಮೆದುಳು ಕಾದು ನನಗೆ ನಿದ್ದೆ ಬರಲಿಲ್ಲ. ಕರುಳು ವಿಕೃತವಾಗಿ ಕೆರಳಿಕೊಂಡು ಹೊತ್ತು ಕಳೆಯುವುದನ್ನು ಅಸಹ ನೀಯಗೊಳಿಸಿತು. ಒಂದು ಕಾಲದಲ್ಲಿ ಡಾಕ್ಟರು ಅದನ್ನು ఆಪೆಂಡಿ ಸೈಟಿಸ್ ಎಂದು ಕರೆದರು. ಬೇರೊಬ್ಬ ವಿಚಕ್ಷಣರು ಬರಿಯ ಕ್ರಿಮಿ ಷವೆಂದರು. ಮೂರನೆಯವರು ಹುಣ್ಣಿರಬೇಕು ಎಂದು ಅಭಿ ಪ್ರಾಯಪಟ್ಟರು. ಅವರು ಯಾರೂ ಆ ಬಗ್ಗೆ ಏಕಾಭಿಪ್ರಾಯವನ್ನು ಕೊಟ್ಟುದಿಲ್ಲ. ಕೊನೆಯ ತೀರ್ಮಾನವನ್ನಿತ್ತುದಿಲ್ಲ. ನಾನು ನರ ಳುತ್ತಾ ಬಂದಿದ್ದೇನೆ—ನಗು ನಗುತ್ತ ನರಳುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳಾದ ಮೇಲೆ ಈಗ?

ಬೆಳಗು ಮುಂಜಾವದ ಮುಂಚೆ ಚುಮು ಚುಮು ಎನ್ನುವ

ಹಾಗೆ ಕಣ್ಣಿಗೊಂದಿಷ್ಟು ಜೊಂಪು ಹತ್ತಿತು. ಆದರೆ ಅದು ಸ್ವಲ್ಪ ಹೊತ್ತು ಮಾತ್ರ, ಬಿರಿದು ಬಂದ ಕರುಳಿನ ನೋವು ಮತ್ತೆ ನನ್ನನ್ನು ಈಗ ಎಚ್ಚರಗೊಳಿಸಿದೆ.

.... ಸರಳುಗಳ ಎಡೆಯಿಂದ ಸ್ವರ ಹೊರ ಹಾಕಿ ಕರಿಯ ಕೇಳಿದ :

"ರಾತ್ರೆ ನಿದ್ದೆ ಮಾಡ್ಡಂಗೇ ಇಲ್ಲ ನೀವು.”

ಕತ್ತಲಾದರೆ ಸಾಕು, ಗೊರಕೆ ಹೊಡೆಯಲು ತೊಡಗುವ

ಕರಿಯ ನನಗೆ ಆ ಪ್ರಶ್ನೆ ಕೇಳುತ್ತಾನೆ!

"ನಿಂಗೆ ಎಚ್ಚರವಿತ್ತೇನೋ ?"

"ಎಲ್ಲೋ ಓಂದ್ಸಾರಿ ಉಚ್ಚೆ ಹುಯ್ಯೋಕೆ ಅಂತ ಎದ್ದಿದ್ದೆ, ಆಗ

ಬೆಳಕು ಕಾಣಿಸ್ತಿತ್ತು”

ನಿಜವಿರಬಹುದು.

ನಾನು ಬಂದ ಮೊದಲಿನಲ್ಲಿ ಒಮ್ಮೆ “ಬುದ್ದೀ?” ಎಂದು ನನ್ನನ್ನು

ಸಂಬೋಧಿಸಿದ್ದ, ಬಾಲ್ಯದಿಂದಲೇ ಅವನಿಗೆ ಅಂಟಿಕೊಂಡಿದ್ದ ಅಭ್ಯಾಸ. ಹಾಗೆ ಕರೆಯಬಾರದೆಂದು ನಾನು ಪುಟ್ಟ ಭಾಷಣವನ್ನೇ ಕೊಟ್ಟಿದ್ದೆ. ಅಂದಿನಿಂದ ನಮ್ಮೊಳಗೆ ಆತ್ಮೀಯ ಸಂಬಂಧ ನೆಲೆಸಿತ್ತು, ಆದರೂ ನನ್ನನ್ನು ಗೌರವದ ಬಹು ವಚನದಿಂದ ಆತ ಕರೆಯುತ್ತಿದ್ದ.

"ರಾಯರೇ-ರಾಯರೇ......"

ನಾನು ರಾಯನಾಗಿರಲಿಲ್ಲ. ಆದರೆ, ಈ ಮೂವತ್ತೆಂಟು

ವರ್ಷಗಳ ಅವಧಿಯಲ್ಲಿ ಎಷ್ಟೊಂದು ಹೆಸರುಗಳಿಗೆ ನಾನು ಒಡೆಯ ನಾಗಿದ್ದೆ! ಅದರ ಜತೆಯಲ್ಲಿ ಇದೊಂದು!

ನಾಲ್ಕು ಜನರಿದ್ದಲ್ಲಿ ನಾನು ಯಾವಾಗಲೂ ಅವರ ಗಮನ ಸೆಳೆ

ಯುತಿದ್ದೆ; ಅವರ ಮಾತು ಕತೆಯ ಕೇಂದ್ರವಾಗುತಿದ್ದೆ, ಮೊದಲಿ ನಿಂದಲೂ ಅದು ನನ್ನಲ್ಲಿ ಬೆಳೆದು ಬಂದ ಗುಣ ಇಲ್ಲವೆ ದೋಷ. ಇಪ್ಪತ್ತೊಂದು–ಇಪ್ಪತ್ತೆರಡು–ಇಪ್ಪತ್ತಮೂರು ವರ್ಷಗಳ ವಯಸ್ಸಿನ ಆ ಅವಧಿಯಲ್ಲಾ ಇತರರ ಮಾತು ಕತೆಗಳಿಗೆ ನಾನು ಕೇಂದ್ರವಾಗು ತಿದ್ದೆ, ನನ್ನ ವೃತ್ತಿಯಲ್ಲಿ ಏಕಾಕಿ ಜೀವನ ಸಾಧ್ಯವಿರಲಿಲ್ಲ, ನಾನು ಎಷ್ಟು ಪ್ರಯತ್ನಪಟ್ಟರೂ ವೃತ್ತಿಬಾಂಧವರ ಬಳಗದಿಂದ ದೂರವಿರುವು ದಕ್ಕಾಗಲಿಲ್ಲ.

ಒಂದು ದಿನ ನಮ್ಮನಗರದ ದೊಡ್ಡ ಬೀದಿಯಲ್ಲಿ ಆ ಮಾರವಾಡಿ

ಯನ್ನು ಕಂಡೆ. ಕಂಡವನೇ ಅವನನ್ನು ಹಿಂಬಾಲಿಸಿದೆ. ಆತ ಒಂದು ಹೋಟೆಲಿನ ಒಳ ಹೊಕ್ಕು ಮೂಲೆಯಲ್ಲಿ ಕುಳಿತು ಕಾಫಿ ತರಿಸಿದ. ಆವನು ನನಗೆ ಕಾಣಿಸುವಷ್ಟು ದೂರದಲ್ಲಿ ಕುಳಿತು, ಅವನನ್ನೆ ನಾನು ದಿಟ್ಟಿಸುತಿದ್ದೆ, ಆತ ಕೋಟಿನ ಒಳಜೇಬಿನಿಂದ ಒಂದು ಪುಟ್ಟ ಗಂಟನ್ನು ಹೊರತೆಗೆದು ತೆರೆದು, ನೂರು ನೂರರ ಅದೆಷ್ಟೋ ನೋಟುಗಳನ್ನು ಮೇಜಿಗೆ ಮರೆಯಾಗಿ ತೊಡೆಯ ಮೇಲಿರಿಸಿಕೊಂಡು ಎಣಿಸತೊಡಗಿದ. ಅವನ ತುಟಿಗಳು ಎಣಿಕೆಯ ಸಂಖ್ಯೆಯೊಡನೆ ಚಲಿಸುತ್ತಿದ್ದರೂ ದೃಷ್ಟಿ ಸುತ್ತಮುತ್ತಲಿನ ಜನರ ಮೇಲೆಲ್ಲಾ ಓಡಾಡುತ್ತಿತ್ತು.

ಕಾಫಿ ಮುಗಿಯಿತು. ಬ್ಯಾಂಕಿನ ಕಡೆಗೆ ಆತ ಹೊರಟಿರ

ಬೇಕೆಂದು ನಾನು ಊಹಿಸಿಕೊಂಡೆ. ಹಿಂದೂ ಮುಂದೂ ದೃಷ್ಟಿ ಹಾಯಿಸುತ್ತ ಆ ಮಾರವಾಡಿಯನ್ನು ಹಿಂಬಾಲಿಸಿದೆ. ವಯಸ್ಸಾಗಿದ್ದ ವ್ಯಕ್ತಿ, ಬೆನ್ನು ಸ್ವಲ್ಪ ಬಾಗಿತ್ತು, ಆದರೂ ಇನ್ನೂ ಇಪ್ಪತ್ತು- ಮೂ ವತ್ತು ವರ್ಷಗಳ ಕಾಲ ನಮ್ಮ ಊರಿನಲ್ಲೆ ಆತ ವ್ಯಾಪಾರ ಮಾಡುವು ದರಲ್ಲಿ ಸಂಶಯವಿರಲಿಲ್ಲ, ಐದು ನಿಮಿಷಗಳ ಕಾಲ ನಡೆದ ಮೇಲೆ ಬ್ಯಾಂಕು ಬಂತು. ನಾನು ವೇಗವಾಗಿ ಹೆಜ್ಜೆ ಇಟ್ಟೆ. ಆತ ಒಳ ಹೋಗಿ ಡಿಪಾಜಿಟ್ ಕೌಂಟರಿನ ಬಳಿ ನಿಂತು, ಹಣವನ್ನು ಹೊರ ತೆಗೆದ....

ಒಂದು ಕ್ಷಣದಲ್ಲೆ ಆ ಕೆಲಸವಾಗಿತ್ತು, ಆ ನೋಟುಗಳ ಮೇಲೆ

ನಾನು ಕೈ ಇರಿಸಿದ್ದೆ, ಆದರೆ ಒರಟಾದ ಇನ್ನೊಂದು ಕೈ ನನ್ನದನ್ನು ಬಿಗಿಹಿಡಿದಿತ್ತು. ನಾನು ಗಾಬರಿಗೊಂಡು ಮುಖವೆತ್ತಿದೆ. ಆ ಕೈ ಸರ ಕ್ಕನೆ ಹಿಂದಕ್ಕೆ ಸರಿಯಿತು. ಆತ ನನಗೆ ಅಡ್ಡಿಯಾಗಲಿಲ್ಲ, ಮಾರ ವಾಡಿಯ ಗಂಟಲಿನಿಂದ ಪ್ರಾಣಹೋಯಿತೇನೋ ಎಂಬಂತೆ ಆರ್ತ ನಾದ ಹೊರಟಿತು. ಅದನ್ನು ಕೇಳಲು ನಾನು ಅಲ್ಲಿರಲಿಲ್ಲ.

ಕೈಯನ್ನು ಷರಾಯಿಯ ಜೇಬಿನೊಳಕ್ಕೆ ಇಳಿಬಿಟ್ಟಿದ್ದೆ. ಇಷ್ಟು

ಅನುಭವಿಯಾದರೂ ಹೃದಯ ಡವಡವನೆ ಹೊಡೆದುಕೊಳ್ಳುತಿತ್ತು. ಆ ಇನ್ನೊಂದು ಕೈ—. ಆ ವ್ಯಕ್ತಿ ಪೋಲೀಸು ಖಾತೆಗೆ ಸಂಬಂಧಿಸಿದವ ನಾಗಿತಲಿಲ್ಲ . ಹಾಗೇನಾದರೂ ಆಗಿದ್ದರೆ, ಸೆಂಟ್ರಲ್ ಜೈಲಿನಲ್ಲಿ ವಿರಮಿಸುವ ಅವಕಾಶ ನನಗೆ ದೊರೆಯುತ್ತಿತ್ತು,

ಹಿಂತಿರುಗಿ ನೋಡದೆ ನಾನು ಸಂದಿಗೊಂದಿಗಳಲ್ಲಿ ಹಾದು

ಹೋದೆ. ಹೆಚ್ಚು ಹೊತ್ತು ನಾನು ನಡೆಯುತ್ತಿರಬಾರದು. ಯಾವು ದಾದರೂ ಹೋಟೆಲಿನ ಒಳಹೊಕ್ಕು ಸ್ವಲ್ಪ ಕಾಲ ಅಲ್ಲಿ ಕುಳಿತಿರಬೇಕು. ನಾನು ಸುರಕ್ಷಿತನೆ? ನನ್ನನ್ನು ಯಾರೂ ಹಿಂಬಾಲಿಸುತ್ತಿಲ್ಲ, ಅಲ್ಲವೆ? ಆ ಬಗ್ಗೆ ನನ್ನಲ್ಲಿ ಬಗೆಹರಿಯದ ಶಂಕೆಗಳಿದ್ದುವು. ಆ ವ್ಯಕ್ತಿ–ಆ ವ್ಯಕ್ತಿ........

ಆಲ್ಲಿದ್ದೊಂದು ಹೋಟೆಲು ನನಗೆ ಆಹ್ವಾನವಿತ್ತಿತು. ಆದಷ್ಟು ಗಂಭೀರವಾದ ನಡಿಗೆಯಲ್ಲಿ ಒಳ ಪ್ರವೇಶಿಸಿ, ಖಾಲಿಯಾಗಿದ್ದೊಂದು ಮೇಜಿನ ಬಳಿ ಸಾಗಿದೆ

"ಏನು ಕೊಡ್ಲಿ ಸಾರ್?"

"ಏನಪ್ಪಾ ?"

ಆ ಹುಡುಗನಿಗೆ ಸ್ವಲ್ಪ ನಗು ಬಂತು. ವಿಚಾರದಲ್ಲಿ ಮುಳುಗಿದ್ದ ನನಗೆ ಆ ಪ್ರಶ್ನೆ ಕೇಳಿಸಿರಲಿಲ್ಲ. ನನ್ನ ತಪ್ಪು ನನಗೆ ಮನವರಿಕೆ ಯಾಗಿ ಮುಗುಳ್ಳಕ್ಕೆ.

"ಬಿಸಿ ಏನಾದರೂ ಇದೆಯೊ?"

"ವಾಂಗಿ ಭಾತ್ ಇದೆ ಸಾರ್."

"ಸರಿ, ತಗೊಂಡು ಬಾ." ಹುಡುಗ ಹೊರಟನೋ ಇಲ್ಲವೊ.. ಆಗಲೆ ಆ ಸ್ವರ ಕೇಳಿಸಿತು:

"ಎರಡು ಪ್ಲೇಟು."

ಹುಡುಗ ಮುಖ ತಿರುಗಿಸಿ ನನ್ನನ್ನು ನೋಡಿದ.

ಇಲ್ಲ, ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆ ವ್ಯಕ್ತಿ ಹಿಂಬಾ ಲಿಸಿಕೊಂಡು ಬಂದಿದ್ದ.ಪೋಲೀಸರಾಗಿದ್ದರೆ ಹಿಂಬಾಲಿಸಲಾರದೆ, ಯಾವುದೊ ಗಲ್ಲಿಯಲ್ಲಿ ದಾರಿ ತಪ್ಪಿ ಬೇಸತ್ತು ಹೋಗುತ್ತಿದ್ದರು. ಅವನು ಪೋಲೀಸರಪನಾಗಿರಲಿಲ್ಲ.

ನಾನು ಮುಗುಳು ನಗಲು ಯತ್ನಿಸಿದೆ :

"ಹೌದು, ಎರಡು ಪ್ಲೇಟು."

ಆತ ನನಗಿಂತಲೂ ಹತ್ತು ಹದಿನೈದು ವೆರ್ಷಗಳ ಮಟ್ಟಿಗೆ

ದೊಡ್ಡವನಾಗಿದ್ದ.

ಎತ್ತರವಾದ ಕಪ್ಪು ಬಣ್ಣದ ದೇಹ. ಮುಖದ ಮೇಲೆ ಸಿಡುಬಿನ ಕಲೆಗಳಿದ್ದುವು. ಗೆರೆ ಮೀಸೆ, ಕ್ರೌರ್ಯದ ನೋಟ ವನ್ನು ಮುಖಕ್ಕೆ ಕೊಟ್ಟತ್ತು. ಕೆಂಪಗಿದ್ದುವು ಕಣ್ಣುಗಳು. ರಕ್ತ ಹೀನ ವಾದ ತುಟಿಗಳು, ಒಣಗಿದ ತೊಂಡೇ ಕಾಯಿಯಾಗಿದ್ದುವು. ಅವನು ಹಳೆಯ ಸ್ನೇಹಿತನಂತೆ ನಕ್ಕ. ಆ ರೀತಿ ನಕ್ಕಾಗ ಒಂದು ರೀತಿಯ ಮೃದುತನ ತೋರಿಸಿಕೊಳ್ಳುತಿತ್ತು. ಆ ಹಲ್ಲುಗಳು ದೊಡ್ಡವಾಗಿ ದ್ದುವು–ಅವುಗಳಲ್ಲೆರಡು ಬಂಗಾರದ ಹಲ್ಲುಗಳು.

"ಗಾಬರಿಯಾಯ್ತಾ?”

"ಈವರೆಗೆ ಹಾಗಂದರೇನೂಂತ ತಿಳಿದಿಲ್ಲ."

ಆವನ ಪದೋಚ್ಚಾರಣೆ ಸರಳವಾಗಿರಲಿಲ್ಲ. ಅವನದು ಕಲಿತ

ಕನ್ನಡ, ಸ್ವಲ್ಪ ರಾಗವಾಗಿರುತಿತ್ತು. ಆತ, ತಮಿಳನೊ ತೆಲುಗನೊ ಮಲೆಯಾಳಿಯೊ ಸುಲಭವಾಗಿ ಹೇಳುವುದು ಸಾಧ್ಯವಿರಲಿಲ್ಲ.

ನನ್ನನ್ನು ಸೂಕ್ಷ್ಮವಾಗಿ ಆತ ನಿರೀಕ್ಷಿಸುತ್ತಿದ್ದ.

ತಿಂಡಿ ಮತ್ತು ನೀರು ಬಂದುವು.

"ಕಾಫಿ" ಎಂದೆ, ಹುಡುಗನನ್ನು ಉದ್ದೇಶಿಸಿ.

ಆ ವ್ಯಕ್ತಿ ಗೊಣಗಿತು.

"ಈ ಬ್ರಾಹ್ಮಣರ ಕಾಫಿ ಕುಡಿದು ಸಾಕಾಯಿತು. ಒಂದಿಷ್ಟು

ಬೀರ್ ಸಿಕ್ಕಿದ್ದರೆ—?”

ನಾನು ಮಾತನಾಡಲಿಲ್ಲ.

ಹೊರ ಹೊರಟಾಗ, ಅವನು ಬಿಲ್ ತೆತ್ತ, ಬಹಳ ದಿನಗಳಿಂದ

ಪರಿಚಯವಿದ್ದವರ ಹಾಗೆ ನಾವು ನಡೆದೆವು. ಒಂದು ಜಟಕಾ ಮಾಡಿ ಕೊಂಡು ನಾಲ್ಕಾರು ಮೈಲಿ ದೂರ ಹೋದೆವು........ನನ್ನ ಮುಂದಿದ್ದ ಹಾದಿ ಸ್ಪಷ್ಟವಾಗಿತ್ತು, ಅದು ಪ್ರಾಯಶಃ ಜನತೆ ಎಲ್ಲಾ ಕಾಲ ದಿಂದಲೂ ತುಳಿದು ಬಂದಿರುವ ಹಾದಿ. ಅದು ವೃತ್ತಿಗೆ ಸಂಬಂಧಿಸಿದ ಸಾಂಘಿಕ ಜೀವನ.

ಆ ಮಟ ಮಟ ಮಧ್ಯಾಹ್ನ; ಉತ್ತರದ ಆಟದ ಬಯಲಿನ

ಮೂಲೆಯಲ್ಲಿ, ಮರದ ನೆರಳಿನಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತೆವು.

"ನಿನಗೇನೂ ಹೇಳಬೇಕಾದ್ದಿಲ್ಲ. ವೃತ್ತಿಯ ನಿಯಮ ನಿನಗೆ

ಗೊತ್ತಿರಬೇಕು. ನೋಡೋದಿಕ್ಕೆ ನೀನು ಹುಡುಗನ ಹಾಗಿದ್ದರೂ ಕಸಬಿನಲ್ಲಿ ಪಳಗಿದ ಕೈಯೇ ಸರಿ."

ಅವನ ಹೊಗಳಿಕೆ ಹಿತಕರವಾಗಿತ್ತು

ಆದರೆ ಅದು ಬೆದರಿಕೆಯ ಗುಡೂಗೂ ಬೆರೆತಿದ್ದ ಧ್ವನಿ.

ನಿನ್ನ ಪಾಲು ತಗೊ, ಎನ್ನುತ್ತಾ, ನೊಟೂಗಳನ್ನು ಎಣಿ

ಸಿದೆ. ಒಬ್ಬೊಬ್ಬರ ಪಾಲಿಗಿ ಆರುನೂರು ಐವತ್ತು ಬಂತು.

ಆತ ಮೌನವಾಗಿ ಆ ಹಣವನ್ನು ತನ್ನ ಕಿಸೆಗೆ ಸೇರಿಸಿಕೊಂಡ

ದುಡ್ಕೊಡ್ಬೇಕಾಯ್ತೂಂತ ಸ್ವಾಮಿಗೆ ದುಃಖವಾಗ್ತಾ ಇರ

ಬೇಕು.

ನಾನು ಸ್ವಾಮಿಯಲ್ಲ. ನನಗೆ ದುಃಖವೂ ಇಲ್ಲ. ನನ್ನ ಹೆಸರು

ಶೇಖರ್.v

ಓ! ನಿಜವಾದ ಹೆಸರಾ?

ಅವಮಾನವಾದವರ ಹಾಗೆ ಅವನನ್ನು ನೋಡಿದೆ.

ಹೌದು, ಪೂರ್ತಿಯಾಗಿ ಚಂದ್ರಶೇಖರ್ ಅಂತ. ಅದು,

ಪೋಲೀಸರು ದಾಖಲೆ ಮಾಡೀಕೊಂಡಿರೋ ಮೂಲ ಹೆಸರು. ಬೇರೆ

ಯೂ ಇವೆ. ಹೇಳ್ಳೇನು?

ಬೇಡ..........ಅಲ್ಲಾ, ಇಷ್ಟಕ್ಕೆಲ್ಲ ಸಿಟ್ಟಾದರೆ ಹೇಗೆ?"

............

ಇನ್ಮುಂದೆಯೂ ನಾವು ಸ್ನೇಹಿತರಾಗಿರೋಣವೊ ?

ಹೂಂ .

ಎಲ್ಲಿ ತಾ ಕೈ."

ಮತ್ತೊಮ್ಮೆ ಅವನು ಬಲಗೈ ನನ್ನದನ್ನು ಸೋಂಕಿತು. ಆ ಬೆರಳು

ಗಳು ನೀಳವಾಗಿ ಕುರೂಪವಾಗಿದ್ದುವು. ಹಿಂಗೈಯ ಮೇಲು ಭಾಗದಲ್ಲಿ

ನರಗಳು ಸಿಕ್ಕುಗಟ್ಟದ್ದುವು.

ನಾನು ಮತ್ತು ಚಲಂ ಸ್ನೇಹಿತರಾದುದು ಹಾಗೆ. ಆ ಗೆಳೆತನ

ಅಲ್ಲಿಗೆ ನಿಲ್ಲಲಿಲ್ಲ. ಅವನಿಗೆ ಮೂವರು ಸಂಗಡಿಗರಿದ್ದರು. ಅವರಿ ಗೆಲ್ಲಾ ಆತನೇ ನಾಯಕ. ಆ ಮೂವರು ಆತ ಹೆಳೇದ್ದನ್ನು ಮಾಡುವ, ಅಕ್ಷರಶ: ಪಾಲಿಸುವ, ಭಟರಾಗಿದ್ದರು.ಒಂಟಿ ಜೀವವಾಗಿದ್ದ ನಾನು ಅವರ ಸಂಗದಲ್ಲಿ ಒಂದು ರೀತಿಯ ಸಮಾಧಾನವನ್ನು ಪಡೆದೆ. ಅಲ್ಲಿ ಅವರೊಡನೆ ಮುಖವಾಡ ಧರಿಸಿ ಮಾತನಾಡಬೇಕಾಗಿರಲಿಲ್ಲ. ಮಾತು ಮಾತಿಗೂ ರಹಸ್ಯ ಜೀವಿಯಾಗಿ ಸುಳ್ಳಿನ ಸರಮಾಲೆ ನೇಯಬೇಕಾಗಿರ ಲಿಲ್ಲ.

ಅವರು ಬಲು ಸುಲಭವಾಗಿ ನನ್ನನ್ನು ಪ್ರೀತಿಸಿದರು. ನಾನು

ಅವರೆಲ್ಲರಿಗಿಂತ ಚಿಕ್ಕವನಾಗಿದ್ದೆ. ಆದರೆ ನನಗೆ ಬರುತಿದ್ದ ಓದು ಬರೆಹ ವಯಸ್ಸಿನ ಅಂತರವನ್ನು ಕಡಿಮೆ ಮಾಡಿತ್ತು. ಅಕ್ಷರಗಳ ಮಾತು ಬಂದಾಗ, ನನ್ನ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಅವರು ಚಕಾರವೆತ್ತುತ್ತಿರಲಿಲ್ಲ.

ಅವರಲ್ಲೊಬ್ಬ ಮುಸಲ್ಮಾನರವನಿದ್ದ, ಅವನೂ ಒಂದು ಕಾಲ

ದಲ್ಲಿ ಬೊಂಬಾಯಿಯಲ್ಲಿದ್ದನಂತೆ. ನಾನು ದೇಶ ಪರ್ಯಟನ ಮಾಡಿ ದವನೆಂದು ತಿಳಿದ ಮೇಲೆ ನನ್ನ ಬಗ್ಗೆ ಅವನಿಗಿದ್ದ ಗೌರವ ಇಮ್ಮಡಿ ಯಾಯಿತು. ತನ್ನ ವಿಶಿಷ್ಟ ಹಿಂದೂಸ್ಥಾನಿಯಲ್ಲಿ ಅವನು ಹೇಳಿದ:

"ಶೇಖರ್ ಸಾಹೆಬ್ . ನಾನು ನಿಮ್ಮನ್ನು ಬಾಷ ಎಂತಲೇ

ಕರೀತೀನಿ."

"ಅದು ಹ್ಯಾಗಾದೀತು? ಬಾಷ ಎನ್ನೋದು ನನ್ನ ಸ್ನೇಹಿತ

ಅಮಿಾರನ ಹೆಸರು."

"ಅದಕ್ಕೇನಂತೆ? ಅವನು ಬೊಂಬಾಯಿ ಬಾಷ. ನೀವು ಇಲ್ಲಿ

ಯುವರು."

ಹೀಗೆ ನನ್ನ ಹಲವು ಹೆಸರುಗಳಿಗೆ ಮತ್ತೊಂದು ಸೇರಿತು.

ಆದರೆ, ಯಾವ ಹೆಸರಾದರೇನು? ನಾವೆಲ್ಲ ಒಂದೇ ರೀತಿ ಯಾಗಿದ್ದೆವು. ಹೆಸರುಗಳಲ್ಲಿ ವೈವಿಧ್ಯವಿದ್ದರೂ ನಮ್ಮ ಮನೋ ಪ್ರವೃ ತ್ತಿಯಲ್ಲಾ ವ್ಯಕ್ತಿತ್ವದಲ್ಲಾ ಏಕರೂಪತೆ ಇತ್ತು. ಅಷ್ಟೇ ಅಲ್ಲ, ನಮ್ಮ ಬಾಲ್ಯದ ಇತಿಹಾಸದಲ್ಲೂ ಸಾಮ್ಯವಿತ್ತು.

ಆ ಚಲಂ, ನನಗಿಂತ ಹೆಚ್ಚು ಚಳ್ಳೇಕಾಯಿ ತಿಂದವನು.

ಅವನು ತಂದೆಯ ಮುಖವನ್ನೂ ಕಂಡವನಲ್ಲ; ತಾಯಿಯ ಮುಖ ವನ್ನೂ ಕಂಡವನಲ್ಲ. ಅವನು ತೊಟ್ಟಿಲ ಮಗುವಾಗಿರಲಿಲ್ಲ. ಕಸದ ತೊಟ್ಟಿಯ ಕೂಸಾಗಿದ್ದ. ಮದರಾಸಿನ ಬೀದಿಗಳಲ್ಲಿ ಹಾಗೆ ಬೆಳೆದ ಚಲಂ ,ಒಂದು ದಿನವೂ ಮಣ್ಣು ಹೊತ್ತಿರಲಿಲ್ಲ. ದೊಡ್ಡ ಮನುಷ್ಯನಾಗಲು ಯತ್ನಿಸೆಂದು ಯಾವ ಹಿರಿಯರೂ ಅವನಿಗೆ ಪ್ರೇರೇ ಪಿಸಿರಲಿಲ್ಲ. ನಡು ನಡುವೆ ಅವನು ಹೊಟ್ಟೆಯ ಪಾಡಿಗಾಗಿ ಆ ಕೆಲಸ ಈ ಕೆಲಸ ಕೈಕೊಂಡ. ಆದರೆ ಆಗಾಗ್ಗೆ ಅವನ ಅತಿಥಿಯಾಗುತಿದ್ದ ದೀರ್ಘ ಉಪವಾಸ, ಕೈ ಚಳಕದ ವೃತ್ತಿಗೆ ಅವನನ್ನು ತಳ್ಳಿತು. ಆ ಪ್ರತಿಭೆ ಅವನಲ್ಲಿ ಲೀಲಾಜಾಲವಾಗಿ ಪ್ರಕಟಗೊಂಡು ಅವನ ಮೈಗೂಡಿತು.

"ಜೀವನ ಒಮ್ಮೆಯೂ ನನ್ನನ್ನು ಕಂಡು ಮುಗುಳ್ನಕೃದ್ದಿಲ್ಲ ಶೇಖರ್.

ಹಾಗಿರೋದರಿಂದ ಮುಗುಳ್ನಗೋದು ನನಗಾದರೂ ಹ್ಯಾಗೆ ತಿಳಿದಿರ್ಬೇಕು ಹೇಳು?....."

"ಎಲ್ಲರ ಕತೆಯೂ ಹಾಗೆಯೇ."

ಹಾಗೆ ಉತ್ತರ ಕೊಡುತ್ತ ನಾನು ಅನುಭವದಿಂದ ಕಂಡು

ಬಂದುದನ್ನೆಲ್ಲ ಸಾಮಾನ್ಯ ನಿಯಮವಾಗಿ ತೋರಿಸಲು ಯತ್ನಿಸುತ್ತಿದ್ದೆ. ಆದರೆ ಆ ತತ್ವಜ್ಞಾನ ಚಲಂಗೆ ಅರ್ಥವಾಗುತ್ತಿರಲಿಲ್ಲ. ಆತ ಮಾತು ಗಾರನಾಗಿರಲಿಲ್ಲ.

ಚಲಂನನ್ನು ನಮ್ಮ ಮನೆಗೆ ಆಹ್ವಾನಿಸಿದೆ.

"ಇಲ್ಲಿಯೇ ಇರಬಹುದಲ್ಲಾ," ಎಂದೆ.

ಅವನು ಒಪ್ಪಲಿಲ್ಲ.

"ನಾವೆಲ್ಲಾ ಜತೆಯಾಗಿ ಇರೋದು ಸರಿಯಲ್ಲ ಶೇಖರ್. ಅದು

ಅಫಾಯದ ಹಾದಿ. ನಮ್ಮ ಸಂಘಟನೆ ಯಾವಾಗಲೂ ವಿಂಗಡ ವಿಂಗಡವಾಗಿ ಬೇರೆ ಬೇರೆಯಾಗಿ ಇರಬೇಕು."

ಆದು, ಅನುಭವದ ಆಳದಿಂದ ಬಂದ ಮಾತು.

"ಸರಿ,ಚಲಂ."

ಚಲಂ ನಮ್ಮ ಮನೆಯಲ್ಲಿ ಇರಲು ಇಚ್ಚಿಸಲಿಲ್ಲ. ಆದರೆ ಆತ,

ನಮ್ಮ ಊರಿನಲ್ಲಿ ಇದ್ದಾಗಲೆಲ್ಲ ಒಬ್ಬಾಕೆಯ ಮನೆಯಲ್ಲಿರು ತಿದ್ದ.

ಊರ ವಿಸ್ತರಣದಲ್ಲಿ ಆ ಮನೆಯಿತ್ತು.

ಆ ವಿಷಯ ನನಗೆ ತಿಳಿದ ಬಗೆ ಹೀಗೆ.

ಬೇಸಗೆಯ ವಿಶ್ರಾಂತಿಗಾಗಿ ಹೈದರಾಬಾದಿನಿಂದ ಇಲ್ಲಿಗೆ ಬಂದು

ದೊಡ್ಡದೊಂದು ಬಂಗಲೆಯಲ್ಲಿ ಆಗರ್ಭ ಶ್ರೀಮಂತನೊಬ್ಬ ಇಳಿದು ಕೊಂಡಿದ್ದ ವಿಷಯ ನನಗೆ ತಿಳಿಯಿತು.ಆತ ಬಂದು ಎರಡು ದಿನ ಗಳೂ ಆಗಿರಲಿಲ್ಲ, ಅವನ ಊಳಿಗದವರು ಇನ್ನೂ ಬಂದಿರಲಿಲ್ಲ. ಆ ರಾತ್ರೆಯೇ ಕಾರ್ಯಾಚರಣೆ ಮಾಡಿದರೆ ಸುಲಭವಾಗಿ ಬೇಟೆ ಬಲೆಗೆ ಬೀಳುವ ಹಾಗಿತ್ತು, ನಾನು ಗುಂಪಿನವರಲ್ಲಿ ಒಬ್ಬನನ್ನು ಸಂಧಿಸಿ,"ಈಗಿಂದೀಗ ಚಲಂನನ್ನು ನೋಡಬೇಕು,"ಎಂದೆ.

ಉತ್ತರ ನಿಧಾನವಾಗಿ ಬಂತು:

"ಸಾಯಂಕಾಲ ಐದು ಘಂಟೆಗೇನೇ ಉಸ್ತಾದ್ ಬರೋದು."

"ಇಲ್ಲ, ಅಷ್ಟು ತಡಮಾಡೋದು ಸಾಧ್ಯವಿಲ್ಲ, ಬಹಳ

ಜರೂರು ವಿಷಯ."

"ಇನ್ನೂ ಒಂದು ಘಂಟೆ ಹೊತ್ತು ಇಲ್ಲೇ ಇರಿ. ಹೇಳಿ

ಕಳಿಸ್ತೀನಿ."

ಬೇರೊಬ್ಬನನ್ನು ಆತ ಸೈಕಲಿನ ಮೇಲೆ ಕಳುಹಿಸಿಕೊಟ್ಟ.

ಆ ದೂತ ವಾಪಸು ಬಂದವನು ಸಂದೇಶ ತಂದ.

"ಶೇಖರ್, ನಿಮ್ಮನ್ನು ಅಲ್ಲಿಗೇ ಬರಹೇಳಿದ್ದಾರೆ.”

ಹಾಗೆ ನಾನು, ಚಲಂ ವಾಸವಾಗಿದ್ದ ಮನೆಗೆ ಹೋದೆ. ಪುಟ್ಟ

ದಾಗಿದ್ದರೂ ಸೊಗಸಾದ ಮನೆ, ಮೂವತ್ತು ಮೂವತ್ತೈದು ರೂಪಾಯಿ ಬಾಡಿಗೆ ಬರುವಂಥಾದ್ದು—ಆಗಿನ ಕಾಲದ ಬಾಡಿಗೆ.

ಹೊರಬಾಗಿಲನ್ನು ನಾನು ಸಮಾಪಿಸುತಿದ್ದಾಗಲೇ ಚಲಂ

ಸ್ವರ ಕೇಳಿಸಿತು.

"ಬಾ ಶೇಖರ್, ಒಳಕೈ ಬಾ."

ನಾನು ಒಳಹೋದೆ. ತಪ್ಪು ತಪ್ಪಾಗಿ ಮುದ್ದು ಮುದ್ದಾಗಿದ್ದ

ತೊದಲು ಮಾತಿನ ಎಳೆಯ ಮಗುವೊಂದನ್ನು ಎತ್ತಿಕೊಂಡು ಚಲಂ ನನಗೆ ಸ್ವಾಗತಬಯಸಿದ. ಚಲಂ ಮತ್ತು ಮಗು ! ಇದು ನನ್ನ ಊಹೆಗೆ ನಿಲುಕದ ವಿಷಯವಾಗಿತ್ತು, ಆದರೂ ನನ್ನ ಭಾವನೆಗಳನ್ನು ತೋರಗೊಡದೆ ಮಗುವಿನತ್ತ ಕೈ ಬಾಚಿದೆ. ಆದರೆ ಅದು ನನ್ನ ಮುಖ ನೋಡಿ ಅಳತೊಡಗಿತು. ಚಲಂನ ವಿರೂಪ ಮುಖಕ್ಕೇ ತೆಕ್ಕೆ ಬಿದ್ದು ರಕ್ಷಣೆ ಪಡೆಯಿತು.

ಆ ಮನೆಯತನಕ ನನ್ನನ್ನು ಕರೆದುಕೊಂಡು ಬಂದಿದ್ದವನು

ಹೊರಟು ಹೋಗಿದ್ದ. ನಾನೊಬ್ಬನೇ ಚಲಂ ಜತೆಯಲ್ಲಿ ಕುಳಿತೆ.

"ಏನು ವಿಷಯ? ಎಂದ ಚಲಂ,

ನಾನು, ಹೇಳಲು ಅನುಮಾನಿಸುವವನಂತೆ, ತೆರೆದಿದ್ದ ಒಳ

ಬಾಗಿಲಿನತ್ತ ನೋಡಿದೆ.

"ಪರವಾಗಿಲ್ಲ ಹೇಳು."

ನಾನು ನನಗೆ ದೊರೆತಿದ್ದ ಮಾಹಿತಿಯನ್ನು ಅವನ ಮುಂದಿಟ್ಟೆ.

ಆ ರಾತ್ರೆಯ ಕಾರ್ಯಕ್ರಮವನ್ನು ಇಬ್ಬರೂ ಗೊತ್ತುಮಾಡಿದೆವು.

ಒಮ್ಮೆಲೆ ಚಲಂ, ಮಗುವನ್ನು ಎತ್ತರಕ್ಕೆ ಎತ್ತುತ್ತಾ, ಮೈ

ಕೊಡವಿ ಎದ್ದು ನಿಂತ.. ಮಗು ಸದ್ದಿಲ್ಲದೆ ಇಶ್ಶಿ ಮಾಡಿತ್ತು.

"ಧೂ ಮುಂಡೇ ಗಂಡ! ಏ ಸಾವಿತ್ರಿ, ಇಲ್ನೋಡು.. ನಿನ್ನ

ಮಗ ಏನ್ಮಾಡಿದಾನೆ ನೋಡು!”

ತಮಿಳು ಮಾತು ಕೇಳಿ, ಮಗನನ್ನು ಎತ್ತಿಕೊಳ್ಳಲು ಸಾವಿತ್ರಿ

ಬಂದಳು-ಮನೆಯಡತಿ. ವಯಸ್ಸಿನಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವಳಿದ್ದಿರಬೇಕು. ಮಗುವಿನದೇ ಬಣ್ಣ, ನುಣುಪಾದ ಕೇಶ 'ರಾಶಿಯೊಂದು, ಮಾಟವಾಗಿ, ನಡುವಿನಿಂದಲೂ ಕೆಳಕ್ಕೆ ಇಳಿದಿತ್ತು. ಆಕೆ ನನ್ನನ್ನು ನೋಡಿ, "ನಿನ್ನ ವಿಷಯ ಕೇಳಿ ಬಲ್ಲೆ” ಎನ್ನುವ ಹಾಗೆ ಮುಗುಳ್ನಕ್ಕಳು. ನಾನು ಸುಮ್ಮನಿರಲಾರದೆ, ನನ್ನ ಹಣೆಯ ಕೆಳಕ್ಕೆ ಇಳಿದು ಬರುತಿದ್ದ ಕಾಪನ್ನು ಬದಿಗೆ ತೀಡುತ್ತಾ ಕುಳಿತೆ.

ಚಲಂ ಬಟ್ಟೆ ಬದಲಾಯಿಸಿದ.

ಆ ಮೇಲೆ ಚಹಾ ಬಂತು.

ಅಲ್ಲಿಂದ ಇಬ್ಬರೂ ಜತೆಯಾಗಿಯೇ ಹೊರಟೆವು. ಹಾದಿ ನಡೆ

ಯುತ್ತಾ ಚಲಂ, ತನ್ನ ಮತ್ತು ಸಾವಿತ್ರಿಯ ಕತೆ ಕೇಳಿದ.

"ಹೆಸರೂ ಸಾವಿತ್ರಿ, ಗುಣದಲ್ಲೂ ಸಾವಿತ್ರಿ, ನಿನಗೆ ಗೊತ್ತಾ

ಶೇಖರ್?"

ಮದರಾಸಿನ ಸೂಳೆಗೇರಿಯೊ೦ದರಿಂದ ಮೂರು ವರ್ಷಗಳ ಹಿಂದೆ

ಅವಳನ್ನು ಚಲಂ ರಕ್ಷಿಸಿ ತಂದು, ತನ್ನ ರಕ್ಷಣೆಯ ಆಶ್ರಯ ನೀಡಿದ್ದ. ಆಗಬಾರದ ಜಾಡ್ಯ ಅವಳಿಗೆ ಅಂಟಿಕೊಂಡಿತ್ತಂತೆ. ನೀರಿನಂತೆ ಹಣ ಸುರಿದು ಚಲಂ ಚಿಕಿತ್ಸೆ ಮಾಡಿದ. ಆ ಮೇಲೆ ಈ ಸಂಸಾರ, ಇಲ್ಲಿ, ನೆರೆ ಮನೆಯವರ ದೃಷ್ಟಿಯಲ್ಲಿ ಚಲಂ, ರಾತ್ರೆ ಹೊತ್ತು ಯಾವುದೋ ಫ್ಯಾಕ್ಟರಿಯಲ್ಲಿ ದುಡಿಯುವ ಮೇಸ್ತ್ರಿ: –ಊರಲ್ಲಿ ಇಲ್ಲದೆ ಇದ್ದಾಗ, ಫ್ಯಾಕ್ಟರಿಯ ಪರವಾಗಿ ಸಂಚಾರ ಹೋಗಿರುವ ವ್ಯಾಪಾರ ಪ್ರತಿನಿಧಿ.....

ಆ ದಿನದ ಕಾರ್ಯಕ್ರಮ ಯಶಸ್ವಿಯಾಗಿಯೆ ನಡೆಯಿತು.

ಆಭರಣವನ್ನೆಲ್ಲ ಸರಾಫರ ಬೀದಿಯಲ್ಲಿದ್ದ ನನ್ನ ಪರಿಚಯದ ಅಂಗಡಿ ಗೊಯ್ದೆ, ಸಾವಿರ ಚಿಲ್ಲರೆ ಹಣವನ್ನು ನಾವು ಹಂಚಿಕೊಂಡೆವು.

........ಗುಂಪಿನವರಲ್ಲಿ ಒಬ್ಬನನ್ನು ಟ್ಯಾಕ್ಸಿ ಡ್ರೈವರಾಗಿರುವಂತೆ

ಚಲಂ ಏರ್ಪಾಟು ಮಾಡಿದ.

ಅದರ ಬಗ್ಗೆ ಸಮ್ಮತಿ ಸೂಚಿಸುತ್ತಾ, "ಅದೇನೋ ಸರಿ. ಆದರೆ

ನನಗೊ೦ದು ಸೈಕಲ್ ಬೇಕು,"ಎಂದೆ.

ಅವರಲ್ಲೊಬ್ಬ ಕೇಳಿದ:

"ಶೇಖರ್, ನಿನ್ನ ಹುಟ್ಟಿದ ಹಬ್ಬ ಯಾವತ್ತು?"

"ನಿನ್ನದು?"

"ಯಾವ ದಿನ ಹುಟ್ಟಿದೆನೋ ನೆನಪಿಲ್ಲ."

"ನನ್ನದೂ ಅಷ್ಟೆ."

"ಎಂಥಾ ಅನ್ಯಾಯ! ಹುಟ್ಟು ಹಬ್ಬದ ದಿವಸ ನಿನಗೊಂದು ಸೈಕಲ್

ಉಡುಗೊರೆ ಕೊಡೋಣಾಂತಿದ್ರೆ..."

"ಓ! ಅದಕ್ಕೇನು? ಇವತ್ತು ಕೊಡೋ ಹಾಗಿದ್ರೆ ಇವತ್ತೇ ನನ್ನ ಹುಟ್ಟು

ಹಬ್ಬ"

ಎಲ್ಲರೂ ನಕ್ಕರು.

ಆ ದಿನವನ್ನಲ್ಲ, ಮರು ದಿನವನ್ನು ನನ್ನ ಹುಟ್ಟು ಹಬ್ಬವನ್ನಾಗಿ

ಆಚರಿಸಿದೆವು. ಕಳವು ಮಾಡಿದ್ದ ಮೂರು ಸೈಕಲುಗಳನ್ನು ಮಾರಿ ಹೊಸದೊಂದನ್ನು ಕೊಂಡು ತಂದು ನನಗೆ ಉಡುಗೊರೆ ಕೊಟ್ಟರು.

ನನ್ನನ್ನು ಬಾಷಾ ಎಂದು ಕರೆಯುತ್ತಿದ್ದವನು ಹೇಳಿದ:

"ಹುಟ್ಟು ಹಬ್ಬಕ್ಕೆ ಇಷ್ಟಾಯಿತು. ಬಾಷಾ ಏನಾದರೂ

ಉಸ್ತಾದ್ ಹಾಗೆ ಸಂಸಾರ ಗಿಂಸಾರ ಮಾಡ್ಕೊಳ್ಳೋ ಹಾಗಿದ್ದರೆ ಒಂದು ಮೋಟಾರ್ ಕಾರ್ನೇಯ--"

"ಓ!ಹಾಗಾದರೆ ಈಗಲೇ ಯಾರನ್ನಾದರೂ ಕರ್ಕೆಂಡು

ಬರ್ತೀನಿ."

......ಅಂತಹ ಮಾತು ಹಗುರವಾಗಿತ್ತು. ಅದಕ್ಕೆ ಅರ್ಥವಿರ

ಲಿಲ್ಲ. ಆದರೂ ನಾನು ಒಬ್ಬನೇ ಉಳಿದಾಗ ಮನಸ್ಸು ಎಲ್ಲೆಲ್ಲೋ ಅಲೆಯುತಿತ್ತು. ಆ ಚಲಂ ಸಂಗಡಿಗರು ಕುಡಿಯುತ್ತಲಿದ್ದರು. ಸೊಳೆ ಗೇರಿಗೆ ಹೋಗಿ ಬರುತಿದ್ದರು. ಬಾಯಾರಿದಾಗ ಬೀದಿ ಕೊಳಾಯಿಗೆ ಕೈಯೊಡ್ಡಿದ ಹಾಗಿರುತಿತ್ತು--ಅವರು ಹೆಣ್ಣನ್ನು ಬಯಸುತ್ತಿದ್ದ ರೀತಿ.

ಆದರೆ, ಚಲಂ ? ಅವನೇ ಹೇಳಿದಂತೆ ಹಿಂದೆ ಆತ,

ಯಾವುದೋ ಸಮಾಧಾನಕ್ಕಾಗಿ, ದೊರೆಯದ ಯಾವುದೇ ತೃಪ್ತಿ ಗಾಗಿ, ಸ್ತ್ರೀಯನ್ನು ಬಯಸುತಿದ್ದ. ಹಲವು ವರ್ಷಗಳ ಅಂತಹ ಜೀವನ ಅವನಿಗೆ ಸಮಾಧಾನವನ್ನೂ ತಂದಿರಲಿಲ್ಲ, ತೃಪ್ತಿಯನ್ನೂ ತಂದಿರಲಿಲ್ಲ. ಅದರ ಫಲವಾಗಿಯೇ, ನಂಬಿ ಬಂದ ಸಾವಿತ್ರಿಯೊಡನೆ ಆತ ಸಂಸಾರ ಹೂಡಿದ.

ನನಗೆ ಅಂತಹ ಬಯಕೆಗಳಾಗುತ್ತಿರಲಿಲ್ಲ. ಆದರೆ ಪೂರ್ಣತೆಯ

ಕಡೆಗೆ ಮಾನವ ಹೋಗುವುದೆಂದರೇನು? ಜೀವನದಲ್ಲಿ ಆತನಿಗೆ ಇರ ಬೇಕಾದ ಗುರಿ ಯಾವುದು? ಈ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದಾಗ ಹೆಣ್ಣು ಗಂಡಿನ ಸಮಸ್ಯೆ ನನ್ನನ್ನು ಕಾಡುತ್ತಿತ್ತು.ಆದರೆ ನನಗೊಂದೂ ಅರ್ಥವಾಗುತ್ತಿರಲಿಲ್ಲ. ನಾನು ಆ ಯೋಚನೆಯನ್ನೇ ಬಿಟ್ಟು ಕೊಡು ತ್ತಿದ್ದೆ.

ಬಿಡುವಿನ ಅವಧಿಯೆಲ್ಲಾ ಪುಸ್ತಕಗಳ ಸಂಗದಲ್ಲಿ ಕಳೆದು

ಹೋಗುತ್ತಿತ್ತು. ಹೆಚ್ಚು ಚೆಚ್ಚಾಗಿ ಬರೆತೊಡಗಿದ್ದ ಕನ್ನಡ ಪುಸ್ತಕ

ಗಳು, ಎಷ್ಟು ಓದಿದರೂ ಮುಗಿಯದಂತಹ ಇಂಗ್ಲಿಷ್ ಪುಸ್ತಕಗಳು....

ಒಂದು ದಿನ ಹಾಗೆ ಪುಸ್ತಕ ಹಿಡಿದು ಕುಳಿತಿದ್ದಾಗ ಆ ಮಹಾನು

ಭಾವ ನಮ್ಮ ಮನೆಯ ಮೆಟ್ಟಲೇರಿ ಬಂದ. ತೀರ ಅಪರಿಚಿತವಾಗಿದ್ದ ಮುಖ.

"ಯಾರು?ಏನು ಬೇಕಾಗಿತ್ತು?"

"ತಮ್ಮ ಸಹವಾಸ ಲಾಭ.ಬಹಳ ದಿನಗಳಿಂದ ನಿಮ್ಮನ್ನ ಭೇಟಿ

ಯಾಗ್ಬೇಕೊಂತಿದ್ದೆ."

"ನನ್ನ ಭೇಟಿ?"

"ತಾವು ಚಂದ್ರಶೇಖರ ಅಲ್ವೇ?"

"ಹೌದು."

"ತಮ್ಮ ಭೇಟಿಯೇ."

"ತಾವು ಯಾರೋ ಗೋತ್ತಾಗಲ್ಲಿಲ್ಲವೇ!"

ಅವನು ತನ್ನ ಪರಿಚಯ ಹೇಳಿದ. ಪೋಲೀಸು ಖಾತೆಯ

.

ಸ್ಪೆಷಲ್ ಬ್ರಾಂಚೈನಲ್ಲಿ ಅವನೊಬ್ಬ ಸಬ್ ಇನ್ಸ್ಪೆಕ್ಟರು. ಎಳೆ ವಯಸ್ಸಿನ ಹೊಸ ಉದ್ಯೋಗಿ.ಹಾಗೆ ಪರಿಚಯ ಮಾಡಿಕೊಡು ತಿದ್ದಾಗಲೇ,ಅವನ ಸ್ವರದೊಳಕ್ಕೆ ಅಧಿಕಾರದ ದರ್ಪ ನುಸುಳಿ ಕೊಂಡಿತು.ನನ್ನ ಬಳಿ ಅರೆತೆರೆದು ಬೋರಲಾಗಿ ಬಿದ್ದಿದ್ದ ಡಿಕ್‌ನ್ಸನ ಕಾದಂಬರಿಯೊಂದನ್ನು ಎತ್ತಿಕೊಂಡ.

"ಓ!The Great Expectations!!ನಾನು ಕೂಡ

ಇದನ್ನು ತುಂಬ ಮೆಚ್ಚುಕೊಂಡಿದೀನಿ......ಐ ಸೀ.......ನೀವು ತುಂಬ ಸಾಹಿತ್ಯ ಓದ್ತೀರಿ ಹಾಗಾದರೆ

ನಾನು ಎಚ್ಚರವಾಗಿದ್ದೆ.ಈ ಬೆಸ್ತರವನು ಬಲೆ ಬೀಸಲು ನೀರಿನ

ಅಳ ನೋಡುತಿದ್ದ ಹಾಗೆ ತೋರಿತು.

"ಚಂದ್ರಶೇಖರ್, ನಾನು ಹಳೇ ರೀತಿಯವನಲ್ಲ. ನೀವೇನೂ

ಯೋಚಿಸ್ಬೇಕಾದ್ದಿಲ್ಲ, ನನ್ನಿಂದ ನಿಮಗೆ ಯಾವ ತೊಂದರೇನೂ ಆಗದು."

ಆ ಮಾತುಗಳಲ್ಲಿ ಕಪಟವಿತ್ತು. ಆ ಕಪಟವನ್ನು ಮರೆಸುವ ನಯನಾಜೂಕಿನ ಆಟ ನನ್ನದುರು ನಡೆಯುವ ಹಾಗಿರಲಿಲ್ಲ.

"ಸಾರ್,ನನ್ನ ವಿಷಯ ನಿಮಗೆ ಹ್ಯಾಗೆ ತಿಳೀತು?"

"ಅದೇನು ಮಹಾ ವಿಷಯ.ನಿಮ್ಮ ಪೈಲು ಬಂದಿತ್ತು.

ಓದ್ಕೊಂಡೆ."

""ನನ್ನಿಂದ ನಿಮಗೆ ಏನಾಗ್ಬೇಕಾಗಿದೆ?"

ಆ ಶನಿ ತೊಲಗಿದರೆ ಸಾಕು ಎನಿಸಿತು. ಮತ್ತೆ ಸ್ವರ ಬದಲಿ ಸುತ್ತು ಆತ ಹೇಳಿದ.

"" ನೋ ನೋ ಮಿಸ್ಟರ್ ಚಂದ್ರಶೇಕರ್. ಆ ರೀತಿ ನೀವು ನನ್ನ ನೋಡ್ಬಾರ್ದು. ನಿಮ್ಮ ಸ್ವತ: ಕಂಡ ಹಾಗಾಯ್ತು. ನಿಮ್ಮ ಸ್ಟಡಿ, ನಿಮ್ಮ ಕಲ್ಚರು, ಪರಿಚಯವಾಯ್ತು. ನೀವು ನಿಜವಾಗ್ಲೂ ಸದ್ಗ್ರಹಸ್ಥರು."

"ಅವನ ಹೊಗಳಿಕೆ! ನಾನು ಮುಗಳ್ನಕ್ಕೆ. ಸಿಗರೇಟಿನ ಕೇಸ ನ್ನೆತ್ತಿಕೊಂಡೆ.

""ನಿಮ್ಮದು ಯಾವ ಬ್ರಾಂಡು? ಪ್ಲೇಯರ್ಸ್ ಆಗುತ್ತೇನು?"

""ಓ ಥ್ಯಾಂಕ್ಸ್. ನನ್ನದು ಬೇರೆಯೇ ಬ್ರಾಂಡಿದೆ."

"ಸಭ್ಯ ಗೃಹಸ್ಥನಾಗಿ ನಾನು ಸಿಗರೇಟು ಕೊಡ ಹೋಗಿದ್ದೆ.

ಆದರೆ ಆ ಖದೀಮನಿಗೆ ಅದನ್ನು ಮುಟ್ಟುವ ಧೈರ್ಯವಿರಲಿಲ್ಲ. ನಾನು ಸಿಗರೇಟು ಎಲ್ಲ್ಲಿ ವಿಷ ಮಿಶ್ರಿತವಾಗಿರುತ್ತದೋ ಎಂಬ ಭಯ ಅವನಿಗೆ! ಅಗ್ಗದ ಸೆಕ್ಸ್‌ಟನ್ ಬ್ಲಾಕ್ ಪತ್ತೇದಾರಿ ಕಾದಂಬರಿಗಳನೋದಿ ಆತ ದೊಡ್ಡ ವಿದ್ವನ್ ಮಣಿಯಾಗಿದ್ದ.

"ಬಲು ಪ್ರಾಮಾಣಿಕ ಹಾಗೆ ಆತ್ಮೀಯತೆಯನ್ನು ನಟಿಸುತ್ತಾ ಗೋಪ್ಯವಾಗಿ ಮಾತನಾಡ ಬಯಸಿದವನಂತೆ ಸ್ವರವಿಳಿಸುತ್ತಾ, ಆತ ಹೇಳಿದ.

""ಮಿಸ್ಟರ್ ಚಂದ್ರಶೇಖ್ರ್, ನಾನು ನಿಜ ಹೇಳೋದೇ ವಾಸಿ. ಉದೇಶವಿಲ್ದೆ ಇಲ್ಲಿಗೆ ಬಂದಿಲ್ಲ......."

"ನಾನು ಹೊಗೆಯುಗುಳುತ್ತಾ ಸೂಕ್ಸ್ಸ್ಮವಾಗಿ ಆತನನ್ನೇ ನಿರೀಕ್ಶಿ ಸುತ್ತಾ ಕುಳಿತೆ:"

... ಇತ್ತೀಚೆಗೆ ಇಲ್ಲಿ ಹೈದರಾಬಾದಿನ ಶ್ರೀಮಂತರೊಬ್ಬರ

ಮನೇಲಿ ಲೂಟಿ ಆದ ವಿಷಯ ನಿಮಗೆ ಗೊತ್ತಿರ್ಬೆಕು. ಪತ್ರಿಕೇಲಿ ನೀವು ವಿವರ ಓದಿರ್ಬೆಕು."

"ಓದಿರೋ ಹಾಗೆ ನೆನಪು.

"ದಟ್ಸಟ್. ನೋಡಿದಿರಾ? ನೀವು ಓದಿರ್ತಿರಿ ಅಂತ ನನಗೆ

ಗೊತ್ತಿತ್ತು.....ಅದೇ ಆ ಸಂಬಂಧದಲ್ಲಿ ನಿಮ್ಮಿಂದೇನಾದರೂ ನಮಗೆ ಸಹಾಯ_"

"ಬಹುಮಾನ ಜಾಹೀರು ಮಾಡಿದೀರ?"

"ಬಹುಮಾನ ಇದ್ದೇ ಇದೆ. ಅದಕ್ಕಿಂತಲೂ ಹೆಚ್ಚು, ನಿಮ್ಮನ್ನ

ನಮ್ಮ ಶಾಖೆಗೇ ಸೇರಿಸ್ಕೋತೀವಿ. ಪ್ರಾಯೋಗಿಕ ಜ್ಣಾನ ಇರೋರು ನಮಗೆ ಬೇಕು."

"ಏನು ನಿಮ್ಮ ಊಹೆ?"

"ಒಂದು ದೊಡ್ಡ ಗ್ಯಾಂಗೇ ಇಲ್ಲಿ ಕೆಲಸ ಮಾಡ್ಟೀರೋ ಹಾಗಿದೆ.

ಮದರಾಸಿಗೂ ಇಲ್ಲಿಗೂ ನೇರವಾದ ಸಂಬಂಧ ಇರೋ ಹಾಗಿದೆ."

"ಇಷ್ಟರಲ್ಲೇ ಏನಾದರೂ ಕಂಡು ಹಿಡಿದಿದೀರಾ?"

"ಇನ್ನೂ ಇಲ್ಲ.ಅದಕ್ಕೇ ನಿಮ್ಮಿಂದೇನಾದರೂ ಸಹಾಯ-"

ಅವನ ಮುಖಕ್ಕೆ "ಥೂ" ಎಂದು ಉಗುಳಿ ಅಲ್ಲಿಂದ ಅವನನ್ನು

ಹೊರ ಹಾಕಬೇಕು ಎಂದು ತೋರಿತು. ನಾನು ಎದ್ದು ನಿಂತೆ. ಮನಸ್ಸಿಲ್ಲದಿದ್ದರೂ ಆತನೂ ಏಳಬೇಕಾಯಿತು.

"ದಯವಿಟ್ಟು ಹೊರಹೋಗಿ.ನನಗೆ ಈ ಕೊಲೆ ದರೋಡೆ

ವಿಷಯಗಳಲ್ಲಿ ಆಸಕ್ತಿ ಇಲ್ಲ.ಶಾಂತಿಯಿಂದ ಒಂದಿಷ್ಟು ಕಾದಂಬರಿ ಗೀದಂಬರಿ ಓದೋಕೆ ಅವಕಾಶ ಕೊಡಿ."

" ಆ ಹಾ!"

"ಹೌದು;ಈಗ ಹೊರಟೋಗಿ."

ಎಲ್ಲಾ ಯತ್ನಗಳೂ ವಿಫಲವಾದುವೆಂದು ತಿಳಿದು ಆತ ಕಿಡಿಕಿಡಿ

ಯಾದ.ಜೇಬಿನಿಂದ ಕೈಬೇಡಿಗಳನ್ನು ಹೊರಗೆತೆದು,"ನೋಡಿ ದೀರಾ?"ಎಂದ.

"ಕಾಣಿಸ್ತಿದೆ.ವಾರಂಟ್ ಇದ್ದರೆ, ನಿಮಗೆ ಧೈರ್ಯವಿದ್ದರೆ,

ಮುಂದಿನ ಕೆಲಸ ಮಾಡಬಹುದು."

ಆತ ಮುಂದಿನ ಕೆಲಸ ಮಾಡಲಿಲ್ಲ.

ನಾನೂ ನಗುತ್ತಾ ಹೇಳಿದೆ.

"ಹೀಗೆ ಮಾಡಿದರೆ ನೀವು ಇನ್ಸ್ ಪೆಕ್ಟರ್ ಪದವಿಗೇರೋದು

ಬಹಳ ನಿಧಾನವಾಧೀತು.ಹತ್ತು ನಿಮಿಷಗಳಲ್ಲೇ ಎಷ್ಟೊಂದು ಬದ ಲಾಯಿಸ್ಬಿಟ್ಟರಿ......!"

ಅವನು ಮರುಮಾತನಾಡದೆ ಬೀದಿಗಿಳಿದು ಹೋದ. ನನ್ನ

ಸಿಗರೇಟನ ಹೊಗೆ ಮೆಟ್ಟಲು ತನಕವೂ ಆತನನ್ನು ಹಿಂಬಾಲಿಸಿತು.

ಆ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಮತ್ತೇನನ್ನೂ

ಮಾಡಲು ಸಮರ್ಥರಾಗಲಿಲ್ಲ.ಆದರೆ ನನ್ನ ಚಟುವಟಿಗಳನ್ನು ಮಾತ್ರ ಹೆಚ್ಚು ಎಚ್ಚರದಿಂದ ಮಾಡಬೇಕಾಗುತ್ತಿತ್ತು. ಬಳಗದವರು ಯಾರನ್ನೂ ಹಗಲು ಹೊತ್ತು ಭೇಟಿಯಾಗುವುದು ಸಾಧ್ಯವಿರಲಿಲ್ಲ.

ಈ ಅವಧಿಯಲ್ಲಿ,ಹೆಚ್ಚು ಹೆಚ್ಚಾಗಿ ಸಿಗರೇಟು ಸೇದುವುದು ನನ್ನ

ಗೊಂದು ಚಟವಾಯಿತು.ಪುಸ್ತಕಗಳು ಮತ್ತು ಸಿಗರೇಟು.ಚಲಂ, ನನ್ನ ಓದುವ ಹವ್ಯಾಸದ ಬಗ್ಗೆ ಗೇಲಿ ಮಾಡುತ್ತಿರಲಿಲ್ಲ. ಆದರೆ ಹಲವೊಮ್ಮೆ ಮಾಡಬೇಕಾದ ಕೆಲಸವನ್ನೂ ಮರೆತು ನಾನು ಓದು ವುದರಲ್ಲೇ ತಲ್ಲೀನನಾದಾಗ ಮಾತ್ರ, ಅವನಿಗೆ ಕಸಿವಿಸಿಯಾಗುತಿತ್ತು. ಹೀಗಿದ್ದರೂ ಒಮ್ಮೆಯೂ ಕೆಟ್ಟ ಮಾತನ್ನು ಅವನು ಆಡಿದವನಲ್ಲ.

"ಶೇಖರ್,ಆಗಾಗ್ಗೆ ಮನೆಗೆ ಬರುತ್ತಿರು,"ಎಂದು ಆತ

ಆಹ್ವಾನಿಸುತಿದ್ದ. ಆದರೆ ನಾನು,ಆತನ ಮತ್ತು ಸಾವಿತ್ರಿಯ ಸಂಸಾರದೊಳಕ್ಕೆ ಪ್ರವೇಶಿಸಲು ಇಚ್ಚಿಸಲಿಲ್ಲ.ಮುಂಬಯಿಯಲ್ಲಿ ಆಮೀರ ಮತ್ತು ಶೀಲರ ಜೀವನದಲ್ಲಿ ನಾನೊಬ್ಬ ಪಾಲುಗಾರನಾಗಿ ಮಾನವೀಯ ಪ್ರೇಮದ ರುಚಿಯನ್ನು ಕಂಡಿದ್ದೆ.ಆದರೆ ಇನ್ನು ನನ್ನ ಬಗ್ಗೆ ಬೇರೆಯವರ ಅಂತಹ ಒಲವನ್ನು ನಾನು ಅಪೇಕ್ಷಿಸಲಿಲ್ಲ. ಬಾಳ್ವೆ ನನ್ನ ಬಗ್ಗೆ ಕಟುವಾಗಿ ವರ್ತಿಸಿಕೊಂಡೀತ್ತು. ಆ ಭಾವನೆ ಸರಿ ಯಲ್ಲವೆಂದು ತೋರಿಸುವಂತಹ ಯಾವ ಸಂಬದಕ್ಕು ನಾನು ಸಿದ್ಧ ನಿರಲಿಲ್ಲ......

....ನನ್ನ ಆ ರೀತಿಯ ಮನೋವೃತ್ತಿಗೆ ಇನ್ನೂ ಒಂದು

ಕಾರಣವಿದ್ದಿರಬೀಕೂ. ಪ್ರಾಯಶಃ ಬಾಳಿನ ಜತೆಗಾತಿಯೊಬ್ಬಳಿಗಾಗಿ ನಾನು ಹಂಬಲಿಸುತಿದ್ದೆನೇನೊ. ಚಲಂ ನಡೆಸುತ್ತಿದ್ದ ಕುಟುಂಬ ಜೀವನ ನನ್ನಲ್ಲಿ ಅವ್ಯಕ್ತವಾದ ಆಗ ಹೇಳಿದ್ದರೆ, ನಾನು ಖಂಡಿತ ವಾಗಿಯೂ ನಕ್ಕುಬಿಡುತಿದ್ದೆ. ಸೋದರನಂತಿದ್ದ್ದ ಚಲಂ ವಿಷಯವಾಗಿ ನಾನು ಅಸೂಯಾಪರನಾಗುವುದೆಂದರೇನು? ನನಗಿಂತಲೂ ವಯಸ್ಸಿನಲ್ಲಿ ಬಲು ದುಡ್ದವನಾದ ಆತನ ಬಗ್ಗೆ ನಾನು ಇಂತಹ ಕಾರಣಕ್ಕಾಗಿ ಅಗೌರವ ಸೂಚಿಸುವುದೆಂದರೇನು?

ಆ ಸಂಜೆ ಮೋಡ ಕವಿದಿತ್ತು. ಮಳೆ ಬರುವ ಮುನ್ ಸೂಚನೆ.

ಹೊರಗೆ ಹೋಗಲೊ ಬೇಡವೊ ಎಂದು ಹಿಂದುಮುಂದು ನೋಡಿದೆ. ಅಂತೂ ಬಾಹ್ಯ ಜಗತ್ತಿನ ಆಕರ್ಷಣೆಗೇ ಜಯವಾಯಿತು. ಬಟ್ಟೆ ಹಾಕಿಕೊಂಡೆ.

ಹೊಸತಾಗಿ ಹೊಲಿಸಿಕೊಂಡಿದ್ದ ಆ ಗ್ಯಾಬರ್ಡೀನ್ ಸೂಟು

ನನಗೆ ಚೆನ್ನಾಗಿ ಒಪ್ಪುತಿತ್ತೆಂದು ಚಲಂ ಮತ್ತು ಉಳಿದವರೆಲ್ಲಾ ಹೇಳಿ ದ್ದರು.

"ನೀನು ನಿಜವಾಗ್ಲೂ, ಅಂದವಾದ ಬಟ್ಟೆ ಉಡೋಕೇ

ಹುಟ್ದೋನು ಶೇಖರ್. ಏನೋ ಅಪ್ಪಿತಪ್ಪಿ ಬಡವರ ಹಟ್ಟೇಲಿ ಮುಖ ತೋರಿಸ್ದೆ."

ಆ ರೀತಿ ಹೇಳಿ ಚಲಂ ನನ್ನನ್ನು ಪರಿಹಾಸ್ಯ ಮಾಡುವುದಿತ್ತು.

ಆ ಪರಿಹಾಸ್ಯದ ಜತೆಯಲ್ಲೇ ಪ್ರಾಯೋಗಿಕವಾದ ಇನ್ನೊಂದು ಮಾ ತನ್ನೂ ಅವನು ಹೇಳುತ್ತಿದ್ದ.

"ನಿನಗಿರೋ ಈ ರೂಪು ನಮ್ಮ ವೃತ್ತಿಗೆ ಎಷ್ಟೊಂದು ಅನು

ಕೂಲ ಗೊತ್ತಾ? ನೀನು ಹೀಗೆ ನಡೆದು ಹೋಗ್ತಾ ಇದ್ರೆ, ನಿನ್ಮೇಲೆ

ಕಳ್ತನದ ಆರೋಪ ಹೊರಿಸೋ ಎದೆಗಾರಿಕೆ ಯಾವನ್ಗಿದೆ? ನೀನು ಷಾಪಿಂಗ್ ಹೋದರೂ ಅಷ್ಟೆ, ದುಡ್ಡು ಆ ಮೇಲೆ ಕೊಡ್ರೀನೀಂತ ಸಾಮಾನು ಹೊರಿಸ್ಕೊಂಡು ಬಂದ್ರೂ ನಿನ್ನ ತಡಿಯೋರಿಲ್ಲ."

ಅಷ್ಟೇ ಆಗಿರಲಿಲ್ಲ, ಕೊನೆಯಲ್ಲಿ ಅವನಿಗೆ ಪ್ರಿಯವಾಗಿದ್ದ

ಇನ್ನೊಂದು ಮಾತಿತ್ತು.

"ಹುಷಾರಾಗಿರ್ಬೇಕಪ್ಪಾ ಶೇಖರ್, ಕಾರು ನಿಲ್ಸಿ, ನಿನ್ನ

ಸೈಕಲ್ನಿಂದ ಇಳಿಸಿ, ಆ ದೊಡ್ಮನುಷ್ಯರ ಹುಡುಗೀರು ನಿನಗೆಲ್ಲಾದರೂ ತೊಂದರೆ ಕೊಡಬಹುದು !"

ಆಗ ನನಗೆ ನಗು ಬರುತಿತ್ತು.

"ಅದೆಲ್ಲಾ ಸಿನಿಮಾದಲ್ಲಿ ಚಲಂ. ಜೀವನದಲ್ಲಿ ಅಂಥಾದ್ದೆಲ್ಲಾ

ಎಲ್ಲಿ ಸಾಧ್ಯ?"

"ಯಾರು ಕಂಡೋರು?"

ಯಾರೂ ಕಾಣದ ಹಾಗೆಯೇ ಆ ದಿನ ಘಟನೆ ನಡೆಯಿತು.

ಆಕಾಶದ ಮೋಡಗಳು ಬೇರೆ ಊರಿಗೆ ತೇಲಿ ಹೋದುವು, ನಗರದ ಉದ್ಯಾನದತ್ತ ನಾನು ಸೈಕಲ್ ತುಳಿದೆ. ಉದ್ಯಾನದ ಹೋಟೆಲಿನಲ್ಲಿ ಅದನ್ನಿರಿಸಿ ಬೀಗ ತಗುಲಿಸಿದೆ. ಕಾಫಿ ಕುಡಿದು ಹೊರ ಬಂದು, ಸುತ್ತಮುತ್ತಲೂ ಇದ್ದ ಜನರನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಾ ನಿಂತೆ.

ಉದ್ಯಾನದ ಒಂದು ಮೂಲೆಯಲ್ಲಿ, ಎಳೆಯ ಹುಡುಗನ ಹಾಗೆ

ತೋರುತಿದ್ದ ಆ ಯುವಕ ಸಿಮೆಂಟಿನ ಒರಗು ಬೆಂಚಿನ ಮೇಲೆ ಕುಳಿತಿದ್ದ, ನಾನು ನಿರ್ದಿಷ್ಟವಾದ ಯಾವ ಯೋಚನೆಯೂ ಇಲ್ಲದೆ ಅವನ ಬಳಿ ಸಾರಿದೆ.

"ಇಲ್ಲಿ ಕೂತ್ಕೋಬಹುದಾ?"

"ಅದಕ್ಕೇನಂತೆ?"

"ಅಲ್ಲ, ಬೇರೆ ಯಾರಾದ್ರೂ ಬರ್ತಾರೇನೋಂತ."

"ಯಾರೂ ಇಲ್ಲ, ನೀವು ಕೂತ್ಕೋಳ್ಳಿ."

ಆ ಸ್ವರ ಕ್ಷೀಣವಾಗಿತ್ತು, ನನ್ನ ದೃಷ್ಟಿಯ ಕ್ಷ-ಕಿರಣ ಅವನ

ಅಂಗಾಂಗಗಳನ್ನು ಪರೀಕ್ಷಿಸಿತು.

"ಮೈ ಚೆನಾಗಿಲ್ಲಾಂತ ತೋರುತ್ತೆ.

"ಹೌದು; ಡ್ರೈವರ್ ಇಲ್ಲಿಯವರೆಗೆ ಕರಕೊಂಡು ಬಂದ

.

ಎಂಟು ಘಂಟೆಗೆ ಬಾ ಅಂತ ಹೇಳ್ವಿಟ್ಟು, ಅವನ್ನ ಕಳಿಸ್ಕೊಟ್ಟೆ."

ಕಾರಿನ ಬಗ್ಗೆ ಮಾತನಾಡಿದಾಗ, ತನ್ನ ಅಂತಸ್ತನ್ನು ಸೂಕ್ಷ್ಮ

ವಾಗಿ ತೋರಿಸುವ ಉತುಕತೆ ಅವನಲ್ಲಿತ್ತು, ಒಂದು ತುತು ಅನ್ನ ಹೆಚ್ಚು ಸಂಪಾದಿಸುತ್ತಿರುವ ಮೇಲಿನ ಮಧ್ಯಮ ವರ್ಗದವರಿರಬೇಕು. . ...ಹಿರಿಯ ಶ್ರೀಮಂತಿಕೆ ಅವನಲ್ಲಿ ಒಡಿದು ತೋರುತ್ತಿರಲಿಲ್ಲ. ಅದರ ಬದಲು ತಮ್ಮ ಆಂತಸ್ತಿನ ಬಗ್ಗೆ ಕೇಳುವವರು ಸಂದೇಹ ವ್ಯಕ್ತಪಡಿಸ ಬಹುದೇನೊ ಎಂಬ ಶಂಕೆ ಆ ತುಟಗಳ ಮೇಲೆ ತೇಲುತಿತ್ತು.

ಕನಿಕರ ಸೂಚಿಸುವ ಧ್ವನಿಯಲ್ಲಿ ನಾನು ಕೇಳಿದೆ:

"ಏನಾಗಿತ್ತು ? ಜ್ವರವಾ ?"

ನ್ಯುಮೋನಿಯಾ. ಇದೇ ಈಗ ಹತ್ತು ದಿವಸಗಳಿಂದ ಓಡಾ

ಡ್ತಿದೀನಿ."

"ಓದ್ತಾ ಇದೇರ?"

"ಹೂಂ. ಈ ಸಾರೆ ಬಿ.ಎ.ಗೆ ಕಟ್ಬೇಕು. ಆದರೆ ಏನಾ

ಗುತ್ತೊ ಏನೊ. ಈ ಕಾಹಿಲೆ ಬಹಳ ಸತಾಯಿಸ್ಟಿಟ್ಟಿದೆ.”

ಬಹಳ ಸತಾಯಿಸುವ ನುಮೋನಿಯ. ಆ ವಿಷಯ ನನಗೆ

ಗೊತ್ತಿರಲಿಲ್ಲವೆ? ತನಗೇ ಧೈರ್ಯ ಉಂಟಾಗುವಂತೆ ಆತ ಹೇಳಿದ:

"ಇನ್ನೇನು ಗುಣವಾದ ಹಾಗೇ. ಸ್ವಲ್ಪ ದಿವಸದಲ್ಲೇ ಪುನಃ

ಶಕ್ತಿ ಬರತ್ತೆ, ನ್ಯೂಮೋನಿಯಾ ಹೆದರೊಬೇಕಾದ ಜ್ವರವೇನೂ ಅಲ್ಲ."

ಜ್ವರಕ್ಕೆ ಹೆದರದೇ ಇದ್ದ ಆ ಧೈರ್ಯವಂತನಲ್ಲಿ, ಬಂದವರನ್ನು

ದೂರವಿಡುವ ಮನೋವೃತ್ತಿ ಇರಲಿಲ್ಲ. ಇನ್ನೊಂದು ಜೀವದೊಡನೆ ಮಾತನಾಡಲು ಆತ ಆತುರನಾಗಿದ್ದ.

"ಸಿಗರೇಟು?"

ಆತ ಮೌನವಾಗಿ ನನ್ನನ್ನೆ ನೋಡಿದ.

ನಾನೆಂದು:

"ಸಾರಿ, ಕಾhiಲೆಯಿಂದ ಎದ್ದಿರೋರು ಸೇದಬಾರು ಅನ್ನೋ

ದನ್ನ ಮರೆತ್ನಿಟ್ಟೆ."

"ಅದ್ದರಿ. ಅಲ್ದೆ ,ನನಗೆ ಸಿಗರೇಟು ಸೇದೋ ಅಭ್ಯಾಸವೂ

ಇಲ್ಲ."

"ಈವರೆಗೆ ಒಂದೂ ಸೇದಿಲ್ಲ ಅಂತೀರಾ ?"

ಈ ಪಾಟೀ ಸವಾಲಿಗೆ ಆತನ ಬಿಳುಪೇರಿದ್ದ ಮುಖ ಸ್ವಲ್ಪ ಕೆಂಪಗಾಯಿತು.

"ಹಾಗೆ ಒಂದೂ ಸೇದ್ದೆ ಇರ್ತಾರ ? ನನಗೆ ಅಭ್ಯಾಸವಿಲ್ಲ ಅಷ್ಟೆ .

ನಮ್ಮನೇಲಿ ನಮ್ತಂದೇನೂ ಸೇದೋದಿಲ್ಲ."

"ನಾನೂ ಅಷ್ಟೆ. ನನಗೂ ಅಭ್ಯಾಸವಿಲ್ಲ. ಎಲ್ಲೋ

ಒಂದೊಂದು..."

–ಆ ಮಾತು ಸುಳಾಗಿತ್ತು, ಆದರೆ ಆ ಸರಳ ಹೃದಯದ

ಹುಡುಗನೆದುರು ನಾನು ಸಿಗರೇಟು ಚಟದ ಅಪರಾಧಿಯೆಂದು ತೋರಿ ಸಿಕೊಳ್ಳಲು ಇಷ್ಟಪಡಲಿಲ್ಲ. ನನಗೂ ಆತನಿಗೂ ವಯಸ್ಸಿನಲ್ಲಿ ಎರಡು ಮೂರು ವರ್ಷಗಳ ಅಂತರವಿತ್ತೇನೊ. ಆದರೂ ಆತ ಎಷ್ಟೊಂದು ಚಿಕ್ಕ ಹುಡುಗನಾಗಿ ಕಾಣುತಲಿದ್ದ!

ಸ್ವಲ್ಪ ಹೊತ್ತಾದ ಮೇಲೆ ಆತನೆ ಮೌನವನ್ನು ಮುರಿದ.

"ನೀವೇನು ಮಾಡ್ಕೊಂಡಿದೀರ?"

ಇದೇ ಈಗ ಕೊರ್ಸು ಮುಗಿತು ಬೊ೦ಬಾಯಿನ ಒಂದು

ಇಂಪೋರ್ಟ್ ಫರ್ಮಿಗೆ ಪ್ರತಿನಿಧಿಯಾಗಿದೀನಿ."

"ಓ! ಬಿಸಿನೆಸ್ಸು! ನೋಡೋಕೆ ನೀವಿನ್ನೂ ಹುಡುಗರ ಹಾಗೆ

ಇದ್ದೀರಾ!"

ಅಂತೂ ಆ ಹುಡುಗ, ನಾನೂ ಹುಡುಗನೇ ಎಂದು ಪ್ರಮಾಣ ಪತ್ರ

ಕೊಟ್ಟಿದ್ದ!

ಸಂಜೆ, ಕತ್ತಲಿನೊಡನೆ ಕಚಕುಳಿ ಆಡುತ್ತಿತ್ತು, ಘಂಟೆ ಏಳು.

ಅಲ್ಲಿಂದೆದ್ದು, ಸಿಗರೇಟು ಸೇದುವ ಸ್ವಾತಂತ್ರವನ್ನಾದರೂ ಸಂಪಾದಿ

ಸೋಣವೆಂದುಕೊಂಡೆ. ಆ ಮಬ್ಬು ಬೇಳಕಿನಲ್ಲಿ ಆತನ ಮುಖ ಮತ್ತಷ್ಟು ರಕ್ತ ಹೀನವಾಗಿ ಕಾಣುತಿತ್ತು ಸುಮ್ಮನಿರು ಎಂದು ಬೆದರಿಸಿ, ಅಲ್ಲೇ ಅಪನ ಜೇಬುಗಳನ್ನು ನಾನೂ ಶೋಧಿಸಿದ್ದರೂ ಆತ ಪ್ರತಿಭಟಿಸುವ ಸ್ಥಿತಿಯಲ್ಲಿರಲಿಲ್ಲ. ಅಂತೂ ಅವನನ್ನು ಕಂಡು ನನಗೆ ತಿರಸ್ಕಾರ ಹುಟ್ಟಿತು. ಮನಸ್ಸಿನ ಬೇಸರವನ್ನು ಮತ್ತಷ್ಟು ಹುಟ್ಟಿ ಸುವ ನಿತ್ರಾಣ ಜೀವಿಗಳು !

"ಸಾರ್, ಒಂದುಪಕಾರ ಮಾಡ್ರೀರ?"

ಆತನ ಸ್ವರ, ಕೇಳಿಸದಷ್ಟು ಕ್ಷೀಣವಾಗಿತ್ತು.

"ಏನು? ಏನಾದರೂ ಬೇಕಿತ್ತೇನು?"

"ನೋಡಿ......ಇಲ್ಲಿ ಕೂತಿರೋಕೆ ಆಗಲ್ಲ, ವನಜ ಬರ್ತೀನಿ

ಅಂತಂದ್ಲು. ನಾನೇ ಬೇಡ ಅಂತ ಒಟ್ನೇ ಹೊರಟೆ... ಡ್ರೈವರ್ ಬರೋದು ಇನ್ನೂ ತಡ. ನಂಗೆ ಇಲ್ಲಿ ಈ ಗಾಳಿ ಈ ಕತ್ತಲೆ ಇದೆಲ್ಲಾ" '"ಮನೆಗೇ ಹೋಗ್ತಿರೇನು?" "ಹೌದು......ನಿಮ್ಗೆ ತೊಂದರೆ ಆಗ್ದೇ ಇದ್ರೆ ದಯವಿಟ್ಟ ಒಂದು ಟ್ಯಾಕ್ಸಿ-" ಅದಕ್ಕೇನಂತೆ...ಇಲ್ಲೇ ಕೂತಿರಿ. ಬಂದೆ.' ನಾನು ಫೆರೋಪಕಾರಿಯಾದ ಒಳ್ಳೆಯ ಮನುಷ್ಯನಾಗಿ ಟ್ಯಾಕ್ಸಿ ಹುಡುಕಿಕೊಂಡು ಹೊರಟೆ. ಅದೆಲ್ಲವೂ ದೊಡ್ಡ ತಮಾಷೆಯಾ ಗಿತ್ತು .. ಮೇಲಿನ ಬೀದಿಯಲ್ಲಿ ಎರಡು ಟ್ಯಾಕ್ಸಿಗಳು ಗಿರಾಕಿಗಳ ಹಾದಿ ನೋಡುತಿದ್ದುವು. ಒಂದರಲ್ಲಿ ಕುಳಿತು ಉದಾನದ ಬೀದಿಗೆ ಬಂದೆ. ನಾನು ಟ್ಯಾಕ್ಸಿಯಿಂದಿಳಿದು ಸಮಿಪಿಸುದ್ದಂತೆ ಆತ ಕೇಳಿದ: "ಟ್ಯಾಕ್ಸಿ ಸಿಗ್ತೆ?" "ಸಿಗ್ತು, ಬನ್ನಿ," ಇನ್ನೊಂದುಪಕಾರ ಮಾಡ್ರೀರ?................ದಯವಿಟ್ಟು ನೀವು ನಮ್ಮನೇತನಕ-" ಯೋಚನೆ ಮಾಡಲು ಅಲ್ಲಿ ಸಮಯವಿರಲಿಲ್ಲ. ನನಗಾಗಿ ಕಾದಿದ್ದ ಹೊಸ ಸಾಹಸವನ್ನು ಇದಿರ್ಗೊಳ್ಳಲು ನಾನು ಮುಂದಾದೆ.

ಹೋಟೆಲಿನ ಬಳಿ ಹೋಗಿ, ಸೈಕಲನ್ನು ಅಲ್ಲೇ ಇರಿಸುವ

ಏರ್ಪಾಟು ಮಾಡಿ, ಆ ಹುಡುಗನೊಡನೆ ಟಾಕ್ಸಿ ಏರಿದೆ.

ಆತ ಮನೆಯ ವಿಳಾಸ ಹೇಳಿದ. ನನ್ನ ತೋಳಿನ ಆಧಾರ

ಅವನಿಗೆ ಬಲು ಹಿತಕರವಾಗಿತ್ತು.

"ಸಾರ್, ನೀವು ನಿಮ್ಮ ಹೆಸರು ಹೇಳಲೇ ಇಲ್ಲ."

"ನೋಡಿ, ನಾವಿಗ ಸಾಕಷ್ಟು ಸ್ನೇಹಿತರಾಗಿದ್ದೇವೆ. ಒಂದೇ

ಓರಗೆಯವರು ಬೇರೆ. ಸಾರ್-ಸಾರ್ ಅನ್ಬಾರ್ದು."

"ಸರಿ ಸಾರ್."

"ಮತ್ತೆ ಅದೇ !... ಹುಂ..ನನ್ನ.... ಹೆಸರು ರಾಧಾಕೃಷ್ಣ.....

ಸ್ನೇಹಿತರು ಕೂಗೋದು ರಾಧಾ ಎಂತ."

ಆ ಕಾಹಿಲೆಯ ಮನುಷ್ಯ ನಕ್ಕ

.

"ನಗ್ತೀನಿ ಅಂತ ಕೋಪಿಸ್ಕೋಬೇಡಿ, ವನಜಾ ಸ್ನೇಹಿತೆ

ಒಬ್ಳಿದಾಳೆ. ಅವಳ ಹೆಸರೂ ರಾಧಾ ಎಂತ.”

"ವನಜ ? ಯಾರು ವನಜ ?"

"ವನಜ ಬರ್ತಿನಿಂತಂದ್ಳು ಅಂತ ಆಗಲೇ ಹೇಳಿದ್ದೆಲ್ಲ...ವನಜ

ನನ್ತಂಗಿ, ಈ ವರ್ಷ ಇಂಟರ್'ಗೆ ಕಟ್ಟಿದ್ದಾಳೆ. ಆ ಮೇಲೆ ಬಾಟನಿ ಆನರ್ಸ್ ತಗೋತಾಲಂತೆ, ಇಂಗ್ಲೆಂಡಿಗೆ ಹೋಗ್ಬಂದು ವಿಜ್ಞಾನಿ ಆಗ್ತಾಳಂತೆ !"

ಎರಡು ನಿಮಿಷ ಸುಮ್ಮನಿದ್ದೆ. ಟ್ಯಾಕ್ಸಿ ಮನೆ ಸೇರಿದಾಗ ನಾನು

ಕಾಣಲಿದ್ದ ವನಜಳನ್ನು ಚಿತ್ರಿಸಿಕೊಂಡೆ. ಪುಟ್ಟ ಹುಡುಗಿ.. ಫೂ ಎಂದು ಊದಿದರೆ ಗಾಳಿಗೆ ಹಾರಿ ಹೋಗುವಂತಹ ಶರೀರ. ಬಿಳಿಚಿ ಕೊಂಡ ಮುಖ. ಕುರುಚಲು ಜಡೆ. ಕಣ್ಣುಗಳು? .....ಕೊರಳಿನ ಸರದ ಲಾಕೆಟಿನಲ್ಲಿ ಮೇಡಂ ಕೂರಿಯ ಚಿತ್ರ ಬೇರೆ!.

ಕಲ್ಪನೆ ಸಾಕೆಂದು, ವನಜಳ ಅಣ್ಣನನ್ನು ಮಾತನಾಡಿಸಿದೆ:

"ನಿಮ್ಮ ತಂದೆ—"

"ವಕೀಲರು, ಶ್ರೀನಿವಾಸಯ್ಯ ಎಂತ ಕೇಳಿದೀರಾ?"

ನಾನು ಕೇಳಿರಲಿಲ್ಲ. ಆದರೆ ಹಾಗೆಂದು ಅವನೆದುರು ಹೇಳುವು

ದುಂಟೆ ?

"ಓಹೋ! ಕೇಳಿದೀನಿ.ಅವರೇ ಏನು?... ನಿಮ್ಮ ಹೆಸರು?"

"ನನ್ನದು ಹೇಳೇ ಇಲ್ಲವೆ? ಎಂಥ ಮರೆವು! ನಾನು ಮುರಲಿ

—ಮುರಲೀಧರ್."

"ಮುರಲೀಧರ ರಾವ್ ಏನೋ ?"

"ಇಲ್ಲ, ನಾವೀಗ ರಾವ್ ಅಂತ ಸೇರಿಸ್ಕೊಳ್ಳಲ್ಲ."

"ಐ ಸೀ"

ಟ್ಯಾಕ್ಸಿ ಆ ಮನೆಯ ಬಳಿಗೆ ಬರುತಲಿತ್ತು. ಮುರಲಿ ನಿರ್ದೆಶ

ಗಳನ್ನು ತೊಟ್ಟಂತೆ ಟ್ಯಾಕ್ಸಿ ನಿಂತಿತು.

"ತಗೊಳ್ಳಿ ಪರ್ಸು. ಟಾಕ್ಸಿದು ದಯವಿಟ್ಟು ಕೊಟ್ಟಿಡಿ."

ನಾನು ಆತನ ಹಣದ ಪಾಕೀಟನ್ನು ಮುಟ್ಟಲಿಲ್ಲ. ನನ್ನದನ್ನು

ತೆಗೆಯಲೂ ಇಲ್ಲ. ಟ್ಯಾಕ್ಸಿಯವನಿಗೆ , "ಇಲ್ಲೇ ನಿಂತಿರು,"ಎಂದೆ.

"ನೋಡಿದಿರಾ...... ವಾಪಸು ಹೋಗೇಕೆ ನಿಮಗೆ ಟಾಕ್ಸಿ

ಯಾತಕ್ಕೆ? ನಮ್ಯನೇ ಕಾರಿದೆ."

"ಇರಲಿ ಮುರಲೀಧರ್, ಬನ್ನಿ ಒಳಕ್ಕೆ ಹೋಗೋಣ.”

ಮಹಡಿ ಇಲ್ಲದ ವಿಶಾಲವಾದ ತಾರಸಿ ಮನೆ. ಹೊರಗೆ ಕ್ರೋ

ಟನ್ ಗಿಡಗಳ ಉದಾನ. ಬಚಭಾಗದ ಮೂಲೆಯಲ್ಲಿ ಗ್ಯಾರೇಜು.

"ಪಪ್ಪ ಇನ್ನೂ ಬಂದೇ ಇಲ್ಲ, ವನೂ ಏ ವನೂ—?

ಮುರಲಿ ಕಾಲ್ ಬೆಲ್ಲನ್ನು ಒತ್ತುವುದಕ್ಕೆ ಮುಂಚೆಯೇ ಯಾರೋ

ಬಾಗಿಲು ತೆರೆದರು. ಅವರ ಮುಖವನ್ನು ಸರಿಯಾಗಿ ನೋಡದೆ, ಆ ಭುಜಗಳಾಚೆ ಮರೆಯಾಗಿರಬಹುದಾದ ಪುಟ್ಟ ವನಜಳನ್ನು ಹುಡು ಕಿದೆ. ಆದರೆ ಮುರಲಿ ನನ್ನನ್ನು ದಿಗ್ಭ್ರಮೆಗೊಳಿಸಿದ.

"ಇವಳೇ ನೋಡಿ ವನಜ.. ನೋಡಮ್ಮ ವನೂ, ಇವರು

ಮಿಸ್ಟರ್ ರಾಧಾಕೃಷ್ಣ, ಒಂದು ದೊಡ್ಡ ಫರ್ಮಿಗೆ ಸೇರೊದ್ದೀರು.”

ನಾನು ಕ್ಷಣ ಕಾಲ ತಬ್ಬಿಬಾದೆ. ನೀಳದೇಹದ ವಿಶಾಲನೇತ್ರೆ

ಯೊಬ್ಬಳು ನೆಟ್ಟ ದೃಷ್ಟಿಯಿಂದ ನನ್ನನ್ನೆ ನೋಡುತ್ತಿದ್ದಳು. ಸುಧಾರಿಸಿ ಕೊಂಡು ನಾನೂ ನೆಟ್ಟ ದೃಷ್ಟಿಯಿಂದ ನೋಡಿದೆ. ಅದು ತಬ್ಬಿಬ್ಬಾಗಲು ಆಕೆಯ ಸರದಿ. ಆಕೆ ಮುಗುಳ್ನಕ್ಕಳು.

"ಬನ್ನಿ. ಒಳಕ್ಕೆ ಬನ್ನಿ. ಮುರಲಿ ಎಲ್ಲಿ ಸಿಕ್ದ?"

ಮುರಲಿ ಮಾತನಾಡಲು ನನಗೆ ಅವಕಶ ಕೊಡಲಿಲ್ಲ.

"ವನೂ, ಇವರಿಂದ ಎಷ್ಟೊಂದು ಉಪಕಾರವಾಯ್ತೊಂತ....

ಬಹಳ. ಒಳ್ಳೇವರು. ಅವರು ಇಲ್ಲ್ದೇ ಇದಿದ್ರೆ. ಪಾರ್ಕ್ನಲ್ಲೇ ನಾನು ಬಿದ್ದಿರ್ತಿದ್ದೆ. ಆ ಮೇಲೆ ನೀನು, ಟಾರ್ಚ್ ತಗೊಂಡು, ಹುಡುಕೋಕೆ ಬರಬೇಕಾಗ್ತಿತ್ತು."

"ಶುದ್ದ ಸಿಲ್ಲಿ!" ಎಂದಳು ವನಜ

ನನ್ನೆಡೆಗೆ ನೋಡಿ, "ಇರಿ, ಬಂದೆ" ಎನ್ನುತಾ ಆಕೆ ಒಳ

ಹೋದಳು.

ಆ ನೋಟ--

ಆಕೆ ಇಲ್ಲದ ಆ ಅವಧಿಯಲ್ಲಿ ಮುರಲಿ ಮತ್ತಷ್ಟು ಮಾಹಿತಿ

ಒದಗಿಸಿದ. ಐದು ವರ್ಷಗಳ ಹಿಂದೆ ಅವರ ತಾಯಿ ತೀರಿ ಹೋದ ವಿಷಯ ನಿಜವಾದ ಒಡತವಲ್ಲಾ ಅವನ ತಂಗಿಯದು.

"ಇನ್ನೂ ನಿಮಗೆ ವನಜಾ ಪರಿಚಯ ಸರಿಯಾಅಗಿ ಇಲ್ಲ ಮಿಸ್ಟರ್

"ರಾಧಾ ಎನ್ನಿ"

"ಸಿರಿಯಪ್ಪಾ, ಮಿಸ್ಟ್ರರ್ ರಾಧಾ."

"ಉಹೂಂ. ಬರೇ ರಾಧಾ."

"ಓ. ಕೆ.--ರಾಧಾ."

ಬೆಳ್ಳಿಯ ತಟ್ಟಿಯಲ್ಲಿ ಮಾವಿನ ಹಣ್ಣಿನ ಹೋಳುಗಳನ್ನು

ಹೊತ್ತು ವನಜ ಬಂದಳು: ಮುರಲಿಯನ್ನು ಕುರಿತು ಗದರಿಕೆಯ ಮಾತನ್ನಾಡುತ್ತಲೇ ಬಂದಳು.

"ಏನೋ ಅದು? ಅದೇನೊ ರಾಧಾ ಅಂತಿದ್ದೀಯಾಅ?"

ಮುರಲಿ ನಗುನಗುತ್ತ ಚೇತರಿಸಿ ಕೊಳ್ಳುತ್ತಿದ್ದ.

"ನೋಡಿದಿರಾ ರಾಧಾ? ಹ್ಯಾಗಿದೆ ತಮಾಷೆ?"

ವನಜಳಿಗೆ ತನ್ನ ತಪ್ಪು ತಿಳಿದು ಆಕೆಯ ಮುಖ ಕೆಂಪಗಾ

ಯಿತು. ನಿರ್ಲಜ್ಞನಾಗಿ ಅವಳನ್ನೆ ನೋಡಿದೆ. ಆ ಮುಖ ನಿಜವಾ ಗಿಯೂ ಸುಂದರವಾಗಿತ್ತು. ಮೇಕಪ್ ಮಾಡಿಕೊಂಡಿರಲಿಲ್ಲ. ಮುಂಗುರುಳಿನ, ಸೀರೆಯ ಸೆರಗಿನ, ಜಡೆಯ ಬಗ್ಗೆ, ಅವಳು ತೋರು. ತಿದ್ದ ಅಲಕ್ಷ್ಯ ,ಆ ಸೊಬಗಿನ ತೂಕವನ್ನು ಹೆಚ್ಚಿಸಿತ್ತು.

"ಹೊತ್ತಲ್ಲದ ಹೊತ್ತು, ಆದರೂ ಒಂದಿಷ್ಟು ಹಣ್ಣು ತಗೊಳ್ಳಿ."

ವನೂ, ಅವರಿಲ್ಲೇ ಊಟಕ್ಕೇಳ್ತಾರೆ ಕಣೇ."

ಒಲ್ಲೆ ನೆನ್ನ ಬೇಡ–ಎನ್ನುವ ಒತ್ತಾಯದ ಭಾವ ಆಕೆಯ ಕಣ್ಣು

ಗಳಲ್ಲಿತ್ತು. ಆದರೆ ನಾನೊಪ್ಪಲಿಲ್ಲ.

"ಇಲ್ಲ, ಇಲ್ಲ, ಕ್ಷಮಿಸಿ. ನಾನು ಹೋಗ್ವೇಕು."

ವನಜ ಕತ್ತು ಕೊಂಕಿಸುತ್ತ ಕೇಳಿದಳು.

ಮನೇಲಿ ಕಾದಿರ್ತಾರೇನೊ?

ನನ್ನ ಇರುವಿಕೆಯನ್ನು ತಿಳಿದುಕೊಳ್ಳುವ ಸೂಕ್ಷ್ಮ ಯತ್ನ ಅದು.

'ಕಾದಿರೋರು ಯಾರೂ ಇಲ್ಲ, ನಾನೊಬ್ನೇ ಇದೀನಿ.

ಆದರೂ ಎಂಟು ಘಂಟೆಗೆ ಬರ್ತೀನಿ ಆಂತ ಸ್ನೇಹಿತರಿಗೆ ಮಾತು ಕೊಟ್ಟಿದ್ದೆ.'

'ಒಬ್ಬನೇ ಇದ್ದ ' ನನ್ನನ್ನು ವನಜ ಅರಳುಗಣ್ಣಗಳಿಂದ

ನೋಡಿದಳು. ಊಟಕ್ಕೇಳಲಿಲ್ಲವೆಂದು ಅವಳಿಗೆ ನಿರಾಸೆಯಾಗಿತ್ತು ನಿಜ.ಆದರೂ—

“ಹೋಗ್ಲಿ, ಹಣ್ಣನಾದರೂ ತಗೊಳ್ಳಿ."

ಸೋಫದ ಮೇಲೆ ಕುಳಿತಿದ್ದ ನಾನು, ಎದುರಿಗಿದ್ದ ಆಣ್ಣ ತಂಗಿ

ಯರನ್ನು ನೋಡುತ್ತ, ನಿಧಾನವಾಗಿ ಒಂದೊಂದೆ ಹೋಳನ್ನು ತೂಗಿ. ನೋಡುತ್ತ, ತಿಂದೆ ಹಣ್ಣು ಬಲು ಸಿಹಿಯಾಗಿತ್ತು.

"ಹುಳಿಯೇನೊ? ಇಂಥ ಹಣ್ಣ ನಿಮಗೆ ಅಭ್ಯಾಸವಿದೆಯೊ

ಇಲ್ಲವೊ?"

“ಪರವಾಗಿಲ್ಲ. ತಕ್ಕ ಪಟ್ಟಿಗೆ ಚೆನ್ನಾಗಿಯೇ ಇದೆ,” ಎನ್ನುತ್ತ

ನಾನು ಇನ್ನೂ ರುಚಿಕರವಾದ ಹಣ್ಣುಗಳನ್ನಷ್ಟೆ ತಿನ್ನುವವನ೦ತೆ ಮಾತ

ನಾಡಿದೆ ನಾಲ್ವಾರು ಹೋಳುಗಳಾದ ಮೇಲೆ ಕರವಸ್ತ್ರದಿ೦ದ ಕೈ ಒರೆಸಿದೆ

"ಯಾಕೆ, ಬಿಟ್ಬಿಟ್ರಲ್ಲ?"

"ಇಲ್ಲ ಥ್ಯಾ೦ಕ್ಸ್. ಇಷ್ಟು ಸಾಕು"

ಹೊರಡಲೆ೦ದು ನಾನು ಎದ್ದು ನಿ೦ತೆ. ಮುರಲಿ ಏಳಳು

ಪ್ರಯತ್ನಿಸಿದ. "ಬೇಡಿ ಆಯಸವಾಗುತ್ತೆ. ಇಲ್ಲೇ ಕೂತಿರಿ" ಎ೦ದೆ. ವನಜ ನನ್ನನ್ನು ಹಿ೦ಬಾಲಿಸಿಕೊ೦ಡು ಗೇಟಿನವರೆಗೂ ಬ೦ದಳು.

"ಹೊರಡ್ತೀರಾ ಹಾಗಾದರೆ?"

ಹೌದು, ಆತಿಥ್ಯಕ್ಕೆ ಥ್ಯಾಂಕ್ಸ್. ನಿಮ್ತಂದೆ ಬಂದ ಮೇಲೆ

ನನ್ನ ನಮಸ್ಕಾರ ತಿಳಿಸಿ."

"ಅದ್ಸರಿ....ನೀವೇ ಬಂದು ಅವರ್ನ್‍ ಕಾಣಬಹುದಲ್ಲ?"

ದೀಪದ ಬೆಳಕಿನಲ್ಲಿ ಆ ಕಣ್ಣುಗಳು "ಬಾ" ಎಂಬ ಆಹ್ವಾನ

ನೀಡುತ್ತ ಜ್ವಲಿಸುತಿದ್ದುವು.

"ಆಗಲಿ, ಬರ್ತಿನಿ."

"ನಾಳೆ?"

"ಎಷ್ಟು ಹೊತ್ತಿಗೆ?"

"ಸಂಜೆ ಐದು ಘಂಟೆಗೆ ಬರ್ತೀರ?"

"ಬರ್ತೀನಿ"

....ಮಾಯೆಯ ಬಲೆ ಬೀಸಿದ್ದಳು ಆ ಹುಡುಗಿ. ಮಂಕಾದ

ಮನಸ್ಸಿನೊಡನೆ ನಾನು ಹಿಂತಿರುಗಿದೆ.

...ಟ್ಯಾಕ್ಸಿಯಲ್ಲೆ ಉದ್ಯಾನದ ಹೋಟೆಲಿಗೆ ಹೋಗಿ ಸೈಕಲನೇರಿ

ನಾನು ಮನೆಗೆ ಮರಳಿದೆ. ಬಹಳ ಹೊತ್ತು ನನಗೆ ನಿದ್ದೆ ಬರಲಿಲ್ಲ. ನನ್ನ ಜೀವನದಲ್ಲಿ ನಾನು ಅನುಭವಿಸದ ಎಷ್ಟೊಂದು ವಿಷಯಗಳಿರ ಲಿಲ್ಲ! ನನ್ನ ಪಾಲಿಗೆ, ಸಂಸಾರವಂದಿಗರ ಅಣ್ನ ತಂಗಿಯರ ತಾಯಿ ತಂದೆ ಮಕ್ಕಳ ಒಲವು ನಲುವಿನ ಲೋಕವೆಲ್ಲ ಬರಿಯ ಭ್ರಮೆಯಾಗಿತ್ತು. ಆ ಲೋಕದೊಳಗಿನ ವ್ಯವಹಾರಗಳನ್ನು ಕಾಣಲು—ಕ್ಷಣ ಕಾಲ
ವಾದರೂ ಕಾಣಲು–ನನಗೆ ಅವಕಾಶ ದೊರೆತಾಗ, ಹೃದಯ ನೋವಿ
ನಿಂದ ತತ್ತರಿಸುತಿತ್ತು. ಚಲಂ ಬಳಗದ ಆ ಸದಸ್ಯರೇ ವಾಸಿ. ಅವ
ರಿಗೆ ಯಾವ ಚಿಂತೆಯೂ ಇರಲಿಲ್ಲ. ಅವರಲ್ಲಿಬ್ಬರು ಸಂಸಾರಗಳನ್ನೇ
ಬಿಟ್ಟು ಬಂದಿದ್ದರು. ಅಂದ ಮೇಲೆ, ನಾನು ಯಾಕೆ ಈರೀತಿ ಸಂಕಟ
ಅನುಭವಿಸಬೇಕು? ಇದು, ನನಗೆ ದೊರೆತಿರುವ ಸಂಸಾರದ ಫಲವೆ?
ಸ್ವಯಂಪ್ರೇರಣೆಯಿಂದ ನಾನು ಸಂಪಾದಿಸಿದ ವಿದ್ಯೆಯ ಫಲವೆ?
ಆಕಸ್ಮಿಕವಾಗಿ ಆ ಮುರಲಿ ಕಾಣಲು ದೊರೆತ ಬಳಿಕ ಅನಿರೀಕ್ಷಿತ
ವಾಗಿ ನಡೆದ ಘಟನೆಗಳು........ ವನಜಳ ಭೇಟಿ........ ನಾಳೆ ಮತ್ತೆ....
ಸಂಜೆ ಐದು ಘಂಟೆಗೆ ಬರ್ತೀರ?"........ “ ಬರ್ತೀನಿ ”........
ನನ್ನ ಯೋಚನೆಗಳು ಸರಾಗವಾಗಿ ಏಕ ಪ್ರಕಾರವಾಗಿ ಹರಿಯು
ತ್ತಿರಲಿಲ್ಲ. ನಿದ್ದೆ ಬಲು ಪ್ರಯಾಸದಿಂದ ನನ್ನೆಡೆಗೆ ಬಂತು.
ಮರು ದಿನ ಹೊತ್ತಾರೆ ಚಲಂ ನಮ್ಮ ಮನೆಗೆ ಬಂದ.
"ಶೇಖರ್, ಒಂದು ಹತ್ತು ದಿನ ಮದ್ರಾಸಿಗೆ ಹೋಗಿರ್ತೀನಿ....
ನನ್ನಲಿರೋ ಚಿಲ್ಲರೆ ಹಣ ಖರ್ಚಿಗೆ ಸಾಲದು. ಏನಾದರೂ
ನಿಸಲಿಲ್ಲ
... ಆ ಮನೆಯ ಗೇಟಿನ ಬಾಗಿಲು ತೆರೆದು ಸೈಕಲನ್ನ ಒಳ
ತಳ್ಳಿದಾಗ, ಐದು ಘಂಟೆಗಿನೂ ಮೂರು ನಿಮಿಷಗಳಿದ್ದುವು. ಬಾಗಿಲ
ಬಳಿ ಸಾರಿ, ದೀರ್ಘವೆಂದು ಕಂಡ ಎರಡು ನಮಿಷಗಳನ್ನು ಕಳೆದು
ಕಾಲ್ ಬೆಲ್ಲನ್ನು ಒತ್ತಿದೆ. ಬಾಗಿಲು ತೆರೆದವಳು ವನಜ.. ಅವಳ
ಹಿಂದಿನಿಂದ ಗೋಡೆಯ ಗಡಿಯಾರ ಐದು ಹೊಡೆಯುತ್ತಿತ್ತು.
ಬಾಗಿಲು ತೆರೆದವಳು ಕ್ಷಣ ಕಾಲ ಅದಕ್ಕೊರಗಿ ನಿಂತಳು. ಈ
ದಿನ ಸಿಂಗರಿಸಿಕೊಂಡು ಸಿದ್ಧವಾಗಿದ್ದ ಬಿನ್ನಾಣಗಿತ್ತಿ ಆಕೆ, ಹುಬ್ಬು
ಗಳು ಬಾಗಿದ್ದುವು. ಹಿರಿದಾದ ಕಣ್ಣುಗಳು ಮಂದಗಮನ
ದಿಂದ ಅತ್ತಿತ್ತ ಚಲಿಸುತ್ತಿದ್ದುವು, ಪೌಡರು ಆ ಗೌರಾಂಗಕ್ಕೆ ಅವ
ಮಾನ ಮಾಡಿತ್ತು, ಆ ತುಟಿಗಳು... ಏರಿಳಿಯುತಿದ್ದ ವಕ್ಷಸ್ಥಳ...
ನಾನು ಆಕೆಯ ದೃಷ್ಟಿಯನ್ನು ಇದಿರಿಸುತಿರಲಿಲ್ಲ ನನಗೆ
ತಿಣಿಸುತಿದ್ದವಳು ಆಕೆ–ಅವಳೆ ದೃಷ್ಟಿಯಲ್ಲ.

"ಬನ್ನಿ ರಾಧಾ. ಬಹಳ ಕ್ಷೀಣ. ಅದಕ್ಕೋಸ್ಕರ ಮಲಕೊಂಡಿ

ದೀನಿ. ಹ್ಯಾಗ್ಬಂದ್ರಿ? ಟಾಕ್ಸೀಲೆ ?"

"ಇಲ್ಲ ಸೈಕಲ್ ಮೇಲ್ಬಂದೆ."

"ನೋಡಿದಿಯಾ ವನೂ? ನಾನು ಹೇಳಿರ್ಲಿಲ್ವ? ಸೈಕಲ್ ಇದೆ

ಇವರಿಗೆ. ಇಲ್ನೋಡಿ ರಾಧಾ, ನನಗೂ ಸೈಕಲ್ ಸವಾರಿ ಮಾಡ್ಬೇ ಕೊಂತ ಆಸೆ. ಆದರೆ ನಮ್ತಂದೆ ಒಪ್ಪೋದಿಲ್ಲ."

"ಹೋಗಲಿ ಬಿಡಿ. ನಿಮ್ತಂದೆ ತಿಳೀದ ಹಾಗೆ ನಾನು

ಕಲಿಸ್ತೀನಿ."

ವನಜ ಒಳಹೋಗಿ ಅಡಗೆಯ ಹುಡುಗನಿಗೆ ನಿರ್ದೇಶಗಳನ್ನು

ಕೊಟ್ಟು ಬಂದಳು. ಸ್ವಲ್ಪ ಹೊತ್ತು ಮೌನವಾಗಿಯೇ ಕಳೆಯಿತು. ಆ ಮೌನದಿಂದ ಗಮನವನ್ನು ಬೇರೆ ಕಡೆಗೆ ಸೆಳೆಯಲೆಂದು ವನಜ

ರೇಡಿಯೋ ಹಾಕಿದಳು. ಯಾವುದೋ ಕೇಂದ್ರದಿಂದ ಸಿತಾರ

ವಾದನ

ಕೇಳಿಸುತ್ತಿತು.

ರೇಡಿಯೋದ ಧ್ವನಿಯನ್ನು ಕಿರಿದು ಗೊಳಿಸುತ್ತಾ ವನಜ

ಕೇಳಿದಳು.

" ನೀವು ಸಿನಿಮಾ ನೋಡೋಕೆ ಹೋಗಲ್ವ ?"

"ಹೋಗ್ತೀನಿ. ಇಂಗ್ಲಿಷ್ ಫಿಲಂಸ್ ಗೇ ಹೋಗೋದು

ಜಾಸ್ತಿ."

"ನಾವೂ ಅಷ್ಟೆ ."

"ನಿನೋಚ್ಕಾ ನೋಡಿದಿರಾ ?"

"ಓ ! ಗ್ರೆಟಾ ಗಾರ್ಬೊ ನಟಿಸಿರೋದು ! ಚೆನ್ನಾಗಿದೆ !"

ಅಲ್ಲಿಂದ ಮಾತು ಪತ್ರಿಕೆ ಪುಸ್ತಕಗಳ ಕಡೆಗೆ ತಿರುಗಿತು. ಮುರಲಿ

ತಮ್ಮ ಮನೆಯ ಪುಸ್ತಕ ಸಂಗ್ರಹದ ಬಗ್ಗೆ ಅಭಿಮಾನಪಡುತ್ತಾ ಹೇಳಿದ:

"ನಮ್ತಂದೆಗೆ ಪುಸ್ತಕ ಅಂದರಾಯ್ತು . ಎರಡು ಬೀರು

ತುಂಬಾ

ಲಾ ಜರ್ನಲ ಗಳು , ನಾಲ್ಕು ಬೀರು ಜನರಲ್ ಬುಕ್ಸು."

ತಿಂಡಿ ಬಂತು-ಸಿಹಿ ಖಾರದ ತಿಂಡಿ. ಕಾಫಿ ಬಂತು - ಸೊಗ

ಸಾದ ಕಾಫಿ. ಮುರಲಿ ಕಾಫಿಯನ್ನು ಕುಡಿದ.

"ಬನ್ನಿ, ಲೈಬ್ರೆರಿ ತೋರಿಸ್ತೀನಿ," ಎಂದು ವನಜ ಕರೆದಳು.

ನಾನು ಅವಳನ್ನು ಹಿಂಬಾಲಿಸಿದೆ.

ಪುಸ್ತಕಗಳಿಗೋಸ್ಕರವೇ ಸಿಂಗರಿಸಿದ್ದ ವಿಶಾಲವಾದೊಂದು

ಕೊಠಡಿ. ಒಂದೇ ಒಂದು ದೊಡ್ಡ ಭಾವ ಚಿತ್ರ ಆ ಗೋಡೆಗಳನ್ನು ಅಲಂಕರಿಸಿತ್ತು. "ನಮ್ಮ ತಾಯಿ," ಎಂದಳು ವನಜ . . ನನಗೆ ತಾಯಿ ಇರಲಿಲ್ಲ ಆಕೆಯ ಭಾವಚಿತ್ರವೂ ನನ್ನಲ್ಲಿರಲಿಲ್ಲ. ತಂದೆಯ ಭಾವ ಚಿತ್ರವೂ ನನ್ನಲ್ಲಿ ಇರಲಿಲ್ಲ. ನಾನಿರುವವರೆಗೂ ನನ್ನ ಕಲ್ಪನೆ ಯಲ್ಲಿ ಅವರನ್ನು ಚಿತ್ರಿಸಿಕೊಳ್ಳಬಹುದು. ಆ ಮೇಲೆ ನನ್ನೊಡನೆ ಅವರ ಕಲ್ಪನೆಯ ಚಿತ್ರಗಳೂ ಮಣ್ಣು ಗೂಡುವುವು .........

" ಏನು ಯೋಚಿಸ್ತಿದೀರಿ ?"

"ತಾಯಿಯ ನೆನಪಾಯ್ತು."

"ಓ, ನೀವೂ ನಮ್ಮ ಹಾಗೇನೆ ಹಾಗಾದರೆ."

"ಅದಕ್ಕಿಂತ್ಲೂ ಸ್ವಲ್ಪ ಹೆಚ್ಚು. ನನಗೆ ತಂದೆಯೂ ಇಲ್ಲ."

"ಅವರೇನು ಕೆಲಸದಲ್ಲಿದ್ರು?

"

ಅವರೇನು ಕೆಲಸದಲ್ಲಿದ್ದರು? ನನ್ನ ತಂದೆಗೆ ಏನು ಕೆಲಸವಿತ್ತು ?

"ಕೆಲಸ ? ಬೊಂಬಾಯಿಯ ಒಂದು ದೊಡ್ಡ ಫರ್ಮ ನಲ್ಲಿ

ಪಾರ್ಟ್ನ‌ರ್ ಆಗಿದ್ರು. ನಾನು ಚಿಕ್ಕ ಮಗುವಾಗಿದ್ದಾಗ್ಲೇ ಆ ಊರಿಗೆ ಹೊರಟು ಹೋಗಿದ್ವಿ."

"ಸೋ ಸಾರಿ,"

ಹಾಗೆ ಸಹಾನುಭೂತಿ ತೋರಿಸಿದಳು ವನಜ. ಮೌನವಾಗಿಯೇ ಹಲವು ನಿಮಿಷಗಳು ಕಳೆದುವು. ಆದರೆ ಆ ಮೌನಕ್ಕೆ ಅರ್ಥವಿತ್ತು. ನಮ್ಮಿಬ್ಬರ ಯೋಚನೆಗಳನ್ನು ಪರಸ್ಪರ ಸಮೀಪಕ್ಕೆ ತರುವ ಸಾಮರ್ಥ್ಯ ವಿತ್ತು.

"ನಿಮ್ಮ ತಂದೆ ಒಳ್ಳೊಳ್ಳೆ ಪುಸ್ತಕಗಳನ್ನು ಕೂಡಿಸಿಟ್ಟಿದಾರೆ."

"ಅವರಿಗಿನ್ನೇನು ಕೆಲಸ ಹೇಳಿ ? ತಾಯಿ ತೀರ್ಕೊಂಡ್ಮೇಲೆ

ಹೆಚ್ಚಾಗಿ ಈ ಕೊಠಡೀಲೇ ಇರ್ತಾರೆ."

"ನೀವು ಪುಸ್ತಕಗಳ್ನ ಓದಲ್ವೆ?"

"ಓದ್ತೀನಿ. ಕಾದಂಬರಿಗಳಾದರೆ ಓದ್ತೀನಿ.

ಇಂಗ್ಲಿಷು ಕನ್ನಡ ಎರಡಲ್ಲೂ ಓದ್ತೀನಿ."

ಮತ್ತೆ ಮೌನ.

"ನೀವು-ಇಲ್ನೋಡಿ–

ಯಾವುದೋ ಪುಸ್ತಕ ಓದುತಿದ್ದ ನಾನು, ವನಜಳ ಮಾತು

ಕೇಳಿಸದವನ ಹಾಗೆ ನಟಿಸಿದೆ.

"ಕೇಳಿಸ್ಲಿಲ್ವಾ?"

"ನನಗೊಂದು ಹೆಸರಿದೆ.”

ಅವಳು ನಕ್ಕಳು.

"ಮಿಸ್ಟರ್ ರಾಧಾಕೃಷ್ಣ—"

"ಮಿಸ್ಟರ್ ಬೇಡಿ"

ಲಜ್ಜೆಯಿಂದ ಅವಳ ಮುಖ ಕೆಂಪೇರಿತು. ಆಕೆ ಮಾತು

ಮುಂದುವರಿಸಲಿಲ್ಲ, ನಾನು ಸುಮ್ಮನೆ ಪುಟಗಳನ್ನು ತಿರುವಿ ಹಾಕು

ತಿದ್ದರೆ, ನನ್ನನೇ ನುಂಗುವವರ ಹಾಗೆ ಅವಳು ನೋಡುತಿದ್ದಳು.

"ವನಜ, ನಿಮ್ಮ ಲೈಬ್ರೆರಿಯಿಂದ ಪುಸ್ತಕ ಇಸಕೊಂಡು

ಹೋಗ್ಲೇನು ?"

"ಅದನ್ನೇ ಹೇಳೋಣಾಂತ ನಾನು ಬಾಯಿ ತೆರೆದಿದ್ದು."

ಮುರಲಿ ನಮ್ಮನ್ನು ಕೂಗಿ ಕರೆದ.

ಈ ದಿವ್ಸ ನೀವಿಬ್ಬರೂ ಇಷ್ಟು ಮಾತನಾಡಿದ್ದು ಸಾಕು.

ಉಳಿದದ್ದೆಲ್ಲಾ ಆ ಮೇಲೆ ಮುಗಿಸ್ಕೊಳ್ಳಿ. ಇವತ್ತು ರಾಧಾ ನನ್ನ

ಸಮಿಾಪವೇ ಇರ್ಬೇಕು."

ನಾನು ನಗುತ್ತಾ ಒಪ್ಪಿಕೊಂಡೆ. ಅಷ್ಟರಲ್ಲೆ ಅವರ ತಂದೆ

ಬಂದರು ಎತ್ತರವಾಗಿದ್ದ ತೆಳ್ಳಗಿನ ದೇಹ.. ಅವರು ರುಮಾಲನ್ನೆತ್ತಿ

ಸ್ಟ್ಯಾಂಡಿನ ತಗಲು ಮೊಳೆಯ ಮೇಲಿರಿಸಿದಾಗ, ನುಣ್ಣಗೆ ಬೆಳ್ಳಗೆ

ತಲೆಯ ಇಕ್ಕೆಲಗಳಿಗೂ ಚಾಚಿಕೊಂಡಿದ್ದ ಅವರ ಸೊಗಸಾದ ಕ್ರಾಪನ್ನು

ಕಂಡೆ.

ಪಪ್ಪಾ, ಇವರೇ ರಾಧಾಕೃಷ್ಣ......ಇವರೇನೆ ಮುರಲೀನ

ಪಾರ್ಕಿನಿಂದ ಕರೆದು ತಂದೋರು."

ಮಿಸ್ಟರ್ ರಾಧಾಕೃಷ್ಣ, ಇವರೇ ನಮ್ತಂದೆ."

ತಂದೆಯ ಪರೀಕ್ಷಕ ದೃಷ್ಟಿ ನನ್ನನ್ನು ತೂಗಿ ನೋಡುತಿತ್ತು.

ನನ್ನ ಸುತ್ತಲೂ ನಿಶ್ಚಲಭಾವಮುದ್ರೆಯ ಭದ್ರವಾದ ಕೋಟೆಯನ್ನು ರಚಿಸಿ ನಾನು ಎದ್ದು ನಿಂತು ಮುಗುಳ್ನಕ್ಕು ವಿನಯದಿಂದ ವಂದಿಸಿದೆ.

"ಕೂತಿರಿ, ಕೂತಿರಿ ಮಿಸ್ಟರ್ ರಾಧಾಕೃಷ್ಣ. ನಿಮ್ಮಿಂದ

ಬಹಳ ಉಪಕಾರವಾಯ್ತೂಂತ ಹುಡುಗರು ಆಗ್ಲೇ ವರದಿ ಮಾಡಿ ದಾರೆ."

ಲಜ್ಞೆಯಿಂದ ಮುಖ ಕೆಂಪೇರಿಸಿಕೊಂಡವರಂತೆ, “ ಅಯ್ಯೋ!

ಅದೇನು ಮಹಾ ! ಎಂದೆ.

ಅವರು ಮಗಳ ಕಡೆಗೆ ತಿರುಗುತ್ತಾ, "ಏನಮ್ಮಾ ಅತಿಥಿಗೆ

ಕಾಫಿ ತಿಂಡಿ ಆಯ್ತೋ?" ಎಂದರು.

ಓಹೋ, ಆಗಲೇ ಆಯ್ತು."

"ನನಗೇನಾದರೂ ಇಟ್ಟಿದೀರೊ?"

"ಬಾ ಪಪ್ಪ. ಬಟ್ಟೆ ಬದಲಾಯಿಸ್ಕೊ. ಕ್ಲಬ್ಬಿಗೆ ಹೋಗಲ್ವ?"

ಅವರ ತಂದೆ ಕ್ಲಬ್ಬಿಗೆ ಹೋದರು......

....ಕತ್ತಲಾಗುವ ತನಕವೂ ಅಲ್ಲಿದ್ದೆ. ಎರಡು ಪುಸ್ತಕಗಳನ್ನು

ಎತ್ತಿಕೊಂಡು ಹೊರಟ ನನ್ನನ್ನು ಬೀಳ್ಕೊಡಲು ವನಜ ಬಂದಳು. ಗೇಟಿನ ಬಳಿ ಮತ್ತೂ ಒಂದಷ್ಟು ಹೊತ್ತು ಮಾತನಾಡಿದೆವು. ಮೂರು ನಾಲ್ಕು ದಿನಗಳ ಬಳಿಕ ಮತ್ತೊಮ್ಮೆ ಬರುವ ಆಶ್ವಾಸನೆ ಯನ್ನಿತ್ತೆ.

"ಪುಸ್ತಕ ವಾಪಸು ಕೊಡೋಕೋಸ್ಕರ ಬರ್ತೀನಿ."

"ಹುಂ.....ಪುಸ್ತಕಕ್ಕೋಸ್ಕರ ಬರ್ತಿರಿ ಅಂತನ್ನಿ."

ನಾನು ನಕ್ಕೆ. ಪ್ರತ್ಯುತ್ತರವಾಗಿ ಅವಳೂ ನಕ್ಕಳು .

......ನಿಮ್ಮ ಜೀವಮಾನದಲ್ಲಿ ಎಂದಾದರೂ ನಿಮಗೆ ಈ ಹುಡುಗ-

ಹುಡುಗಿ ಪ್ರೇಮದ ಅನುಭವವಾಗಿದೆಯೊ ಇಲ್ಲವೊ ನನಗೆ ತಿಳಿಯದು. ಪ್ರೇಮದ ವಿಷಯ ನಾನು ಪುಸ್ತಕಗಳಲ್ಲಿ ಓದಿದ್ದೆ, ಪ್ರೇಮ, ಎಷ್ಟೊಂದು ಸಾಹಿತ್ಯ ಸೃಷ್ಟಿಗೆ ಪ್ರೇರಕವಾಗಿಲ್ಲ! ಆ ಸಾಹಿತ್ಯ ದೊಳಗಿನ ಪ್ರೇಮ, ನನ್ನ ಪಾಲಿಗೆ ಕಲ್ಪನೆಯ ಲೋಕದ ಕೈಗೆಟಕದ ವಸ್ತುವಾಗಿತ್ತು—ಚಲಚ್ಚಿತ್ರದೊಳಗಿನ ಆದರ್ಶ ಜೀವನದ ಹಾಗೆ. ನನ್ನ ಜೀವನದಲ್ಲಾ ಆ ಪ್ರೇಮದೊಂದು ಪ್ರಕರಣ ಆಗಿಯೇ ತೀರುವು ದೆಂದು— ಹಾಗೆ ಆಗಿಯೇ ತೀರುವುದೆಂದು–ಯಾರು ಊಹಿಸಿದ್ದರು ?

ಆ ಪ್ರಕರಣ-

ವನಜ ಎಂತಹ ಹುಡುಗಿಯೆಂದು ತಿಳಿಯಲು ನಾನು ಯತ್ನಿಸ ಲಿಲ್ಲ, ಅವರ ಮನೆಗೆ ಸಂಬಂಧಿಕರಾದ ಸ್ನೇಹಿತರಾದ ಬೇರೆ ಬೇರೆ ಯುವಕರು ಬರುತ್ತಿದ್ದರು. ಹೀಗಿದ್ದೂ ನನ್ನನ್ನು ಅವಳು ಪ್ರೀತಿಸಿ ದಳು. ನನಗೆ ಅಷ್ಟೇ ಸಾಕಾಗಿತ್ತು, ಜೀವನದಲ್ಲಿ ಹೆಣ್ಣಿನ ಪ್ರೀತಿ ಎಂದರೇನೆಂಬುದನ್ನು ತಿಳಿಯದೇ ಇದ್ದ ನಾನು, ವನಜಳ ತೇವ ತುಂಬಿದ ಕಣ್ಣುಗಳಿಗೆ, ನಡುಗುವ ಸ್ವರಕ್ಕೆ, ತುಟಿಗಳ ಕಂಪನಕ್ಕೆ, ಮನೋವಿಕಾರದ ಅರ್ಥ ಹೀನ ಮಾತುಗಳಿಗೆ ಮಾರುಹೋದೆ.

ನನ್ನ ಇರುವಿಕೆಯ ವೆಚ್ಚಕಾಗಿ ಅಲ್ಲಿಂದ ಇಲ್ಲಿಂದ ಅಷ್ಡಿಷ್ಟು

ಹಣ ನನ್ನ ರೀತಿಯಲ್ಲೆ ನಾನು ದೊರಕಿಸಿಕೊಳ್ಳಬೇಕಾಗುತಿತ್ತು. ಹಾಗೆ ಮಾಡುವಾಗ ವನಜಳ ನೆನಪಾಗುತಿತ್ತು.

ಊರಿಗೆ ಹಿಂತಿರುಗಿದ ಚಲಂ ನನ್ನನ್ನು ಕಂಡು, ಹಾದಿ ತಪ್ಪಿದ

ಎಳೆಯ ತಮ್ಮನಿಗೆ ಹಿತ ವಚನಗಳನ್ನು ಆಡಿದ ಹಾಗೆ ನನ್ನೊಡನೆ ಮಾತನಾಡಿದ.

"ಇಲ್ಲ. ನನಗೇನೂ ಆಗಿಲ್ಲ ಚಲಂ. ಇಲ್ಲದ ಚಿಂತೆ

ಹಚ್ಚಿಕೊ

ಬೇಡ.....ನನಗೇನೂ ಆಗಿಲ್ಲ.'

"ಶೇಖರ್, ಯಾಕೆ ಸುಳ್ಳು ಮಾತು? ಸುಳ್ಳು ಹೇಳಿ ನನ್ನನ್ನು

ಯಾಕೆ ನೀನು ನೋಯಿಸ್ಬೇಕು ?"

ನಾನು ನೋಯಿಸುವುದು ಹಾಗಿರಲಿ. ನನಗೇ ವಿಚಿತ

ರೀತಿಯ ನೋವಿನ ಅನುಭವವಾಗುತಿತ್ತು.

ಚಲಂ, ನನಗೆ ಮೈ ಚೆನಾಗಿಲ್ಲ."

"ಕಾಹಿಲೆ ಏನು ಅನ್ನೋದು ನನಗೆ ಗೊತ್ತಿದೆ.”

"ಗೊತ್ತಿದ್ದೂ ಯಾಕೆ ಹಿಂಸೆ ಕೊಡ್ತೀಯಾ?"

"ಹಿಂಸೆ?

ಅಲ್ಲಿಗೆ ಮಾತು ನಿಂತಿತು.

ಆ ಸಂಜೆ ನಾನು ವನಜಳನ್ನು ನೋಡಬೇಕಾಗಿತ್ತು, ಆದರೆ

ಮನಸ್ಸಿನ ಯಾತನೆ ನನ್ನನ್ನು ನಿಜವಾಗಿಯೂ ಕಾಹಿಲೆಯವನಾಗಿ ಮಾಡಿತು. ಈ ಪ್ರೀತಿ-ಪ್ರೇಮ-ಬಲು ಕಠಿನವಾಗಿತ್ತು. ಕತೆ ಕಾದಂಬರಿಗಳಲ್ಲಿ ನಾನು ಓದಿದ್ದ ಪ್ರೇಮದ ಪ್ರಕರಣಗಳಿಗಿಂತಲೂ ವಾಸ್ತವ ಜೀವನದ ಪ್ರೇಮ ಹೆಚ್ಚು ಕಠಿನವಾಗಿತ್ತು.

ವನಜಳನ್ನು ನಾನು ಪ್ರೀತಿಸುತಿದ್ದೆ, ಅವಳಿಗೋಸ್ಕರ ಎಂತಹ

ತ್ಯಾಗ ಮಾಡುವುದಕ್ಕೂ ಸಿದ್ಧವಾಗಿದ್ದೆ..ನನ್ನ ಬಾಳ್ವೆಯ ಕರ್ಮ ಕಥೆ ಅವಳಗೆ ತಿಳಿದಿರಲಿಲ್ಲ. ತಿಳಿಸುವ ಇಚ್ಛೆಯೂ ನನಗಿರಲಿಲ್ಲ. ಅದು ತಿಳಿದರೆ ಏನಾಗುವುದೋ ಯಾರಿಗೆ ಗೊತ್ತಿತ್ತು? ಯಾರ ಆತಂಕವೂ ಇಲ್ಲದೆ ಕನಸಿನಲ್ಲೆ ಕಟ್ಟುತಿದ್ದ ಸುಂದರ ಸೌಧವನ್ನು ನಿಷ್ಕಾರಣವಾಗಿ ಕುಸಿದು ಕೆಡವಲು ನಾನು ಬಯಸಲಿಲ್ಲ.ಆದರೂ ಅದೊಂದು ಪ್ರಶ್ನೆ ನನ್ನನ್ನು ಕಾಡುತಿತ್ತು, ಮುಂದೇನಾಗುವುದು? ಮುಂದೇನು ? ವನಜ ಹೆಚ್ಚಿನ ವಿದ್ಯಾಭ್ಯಾಸದ ಮಾತನ್ನೆ ಬಿಟ್ಟಿದಳು. ಬೇಸಗೆಯ ರಜ ಬಂದ ಮೇಲೆ ನಾವಿನ್ನು ಅಗಲಿರುವುದು ಸಾಧ್ಯವಾಗ ದೆಂದು ಅಂತಿಮ ನಿರೂಪ ಕೊಟ್ಟಿದ್ದಳು. ಆ ಅಗಲಿಕೆ ದುಸ್ಸಾಧ್ಯ ವಾಗಿದುದು ಅವಳಿಗೊಬ್ಬಳಿಗೆ ಅಲ್ಲ, ಪ್ರತಿ ದಿನವೂ ಆಕೆಯನ್ನು ಕಾಣದೇ ಇದ್ದರೆ, ಪರಸ್ಪರ ಆತುಕೊಂಡು ಕ್ಷಣ ಕಾಲ ನಿಲ್ಲದೇ ಇದ್ದರೆ, ನಾನು ಹುಚ್ಚನಾಗುತಿದ್ದೆ ....... ನಾನು ಮತ್ತು ವನಜ ಜತೆಯಾಗಿ ಜೀವನ ಮಾಡುವುದು ಸಾಧ್ಯವೆ ? ನನ್ನ ಸಹಪಾಠಿ ಶ್ರೀಕಂಠನ ಹಾಗೆ ಸಾನು ವಿವಾಹಿತನಾಗುವುದು ಸಾಧ್ಯವೆ? ಅಮಿಾರ-ಶೀಲರ ಹಾಗೆ, ಚಲಂ-ಸಾವಿತ್ರಿಯರ ಹಾಗೆ, ನಾನು ಮತ್ತು ವನಜ ಬಾಳ್ವೆನಡೆಸುವುದು ಸಾಧ್ಯವೆ?....ಇಲ್ಲ,ವನಜ ಎಂದೆಂದಿಗೂ ಶೀಲಳಾಗುವುದು ಸಾಧ್ಯ ವಿರಲಿಲ್ಲ; ಸಾವಿತ್ರಿಯಾಗುವುದು ಸಾಧ್ಯವಿರಲಿಲ್ಲ. ವನಜ ಸಂಭಾವಿತ ಸದ್ಗೃಹಸ್ಥನ ಮಡದಿಯಾಗಬೇಕು-ಮಿಸೆಸ್ ಸೋ ಅಂಡ್ ಸೋ. ಹಾಗಾದರೆ, ನಾನು ಮೊದಲು ಸಂಭಾವಿತನಾಗಬೇಕು ,ಸದ್ಗೃಹಸ್ಥ ನನಾಗನಬೇಕು. ಅಂದರೆ?

....ಯೋಚನೆಗಳಿಂದ ನನ್ನ ಮೆದುಳು ಸಿಡಿಯುತಿತ್ತು. ಇದು

ಎಂದಾದರೂ ಸಧ್ಯವೆ? ನನ್ನ ಜೀವನದ ಈವರೆಗಿನ ಆಧ್ಯಾಯ ಗಳನ್ನು ಕೊನೆಗಾಣಿಸಿ, ಮತ್ತೆ ಹೊಸ ಪುಸ್ತಕದಲ್ಲಿ ಓಂ ಶ್ರೀ ಎಂದು ಆರಂಭಿಸುವುದು ಸಾಧ್ಯವೆ?

ಇದು ಆಸಂಭವವಾದುದೆಂದೇ ನನಗೆ ಹಲವೂಮ್ಮೆ ತೋರು

ತಿತ್ತು .ಆದರೆ, ಯಾಕಾಗಬಾರದು- ಈ ರೀತಿ ಯಾಕಾಗಬಾರದು -ಎಂಬ ಸಾಧ್ಯತೆಯ ಸಂದೇಹವು ಕೆಲವೊಮ್ಮೆ ನನ್ನನ್ನು ಕಾಡಿಸು ತಿತ್ತು....ಆದರೆ , ಎಂದಾದರೊಮ್ಮೆ ನನ್ನ ಗತಜೀವನ ವನಜಳಿಗೆ ತಿಳಿದಾಗ ? ನನ್ನ ಜಾತಿ ಕುಲ ಗೋತ್ರಗಳ ವಿಷಯ ತಿಳಿದಾಗ? ಹೈಸ್ಕೂಲಿನ ನಿದ್ಯಾಭ್ಯಾಸವನ್ನು ಅರ್ಧದಲ್ಲೆ ಬಿಟ್ಟು ನಾನು ಕೈ ಕೊಂಡ್ ವೃತ್ತಿಯ ಸ್ವರೂಪದ ಪರಿಚಯ ಅವಳಿಗೆ ಆದಾಗ? ಈ ಬೆಲೆ ಬಾಳುವ ಪೋಷಾಕಿನ ಒಳಗೆ ಗ್ರಹಣ ಹಿಡಿದ ಮಾನವ ಹೃದಯ ಇದೆ ಎಂಬುದು ಅವಳಿಗೆ ಅರಿವಾದಾಗ?

ಒಮ್ಮೊಮ್ಮೆ ಆ ಆಸೆಯೂ ತಲೆದೋರುತಿತ್ತು . ಈ ಪ್ರಪಂಚ

ಹುಟ್ಟದಂದಿನಿಂದ ಪ್ರೇಮಕ್ಕಾಗಿ ಪ್ರಣಯಿಗಳು ಎಷ್ಟೊಂದು ತ್ಯಾಗ ಮಾಡಿಲ್ಲ? ನನ್ನ ನಿಜ ಸ್ಥಿತಿ ತಿಳಿದ ಮೇಲು ವನಜ ನನ್ನನ್ನು ಪ್ರೀತಿಸಲಾರಳು ಎನ್ನುವುದಕ್ಕೆ ಆಧಾರವೇನಿದೆ? ನನ್ನ ಕನಸು ಆಗ ಒಡೆದು ಚೂರಾಗಬಹುದೆಂದು ನಾನು ಶಂಕಿಸುತ್ತಿರುವುದು ಪ್ರಾಯಶಃ ತಪ್ಪಲ್ಲವೆ?

ಆದರೆ ಚಲಂ ನನ್ನನ್ನು ಸುಲಭವಾಗಿ ಬಿಟ್ಟುಕೊಡುವ ಹಾಗಿರ

ಲಿಲ್ಲ. ಮಂತ್ತೊಂದು ಸಂಜೆ ಅವನು ನನ್ನನ್ನು ತಡೆ ಹಿಡಿದ

"ಶೇಖರ್, ನಿನಗೆ ಹಿತವಾಗ್ಬೇಕೂಂತ್ಲೇ ನನ್ನ ಮನಸ್ನಲ್ಲಿ

ರೋದು . ನೀನು ಹೆಣ್ಣಿನ ಸಮೀಪ ಹೋಗಕೂಡದು ಅಂತ ಹೇಳೋ ದಿಕ್ಕೆ ನಾನು ಯಾರು? ನಾವು ಸನ್ಯಾಸಿಗಳು ಅಂತ ನಾನು ಯಾವತ್ತೂ ತಿಳಕೊಂಡಿಲ್ಲ. ಆದರೆ ನೀನು ಈಗ ಮಾಡ್ತಿರೋದು ಸರಿಯಾದ್ದು ಮಾತ್ರ ಅಲ್ಲ. ಇದರಿಂದ ನಿನಗೆ ಖಂಡಿತ ಸುಖ ಸಿಗೋದಿಲ್ಲ"

"ಚಲಂ,ನೀನು ಹಾಗನ್ಬಾರ್ದು?"

ನೀನು ಸಂಪಾದಿಸ್ತಿರೋ ರೀತಿ ಅವಳಿಗೆ, ಅವಳ ತಂದೆಗೆ,

ಗೊತ್ತ?"

"ಇಲ್ಲ"

"ಮತ್ತೆ? ಈ ವೃತ್ತಿ ಬಿಟ್ಟಡ್ಬೇಕು ಆಂತಿದೀಯೊ?"

"......"

"ಶೇಖರ್, ನಾನು ಆ ಹುಡುಗೀನ ನೋಡ್ಬೇಕು. ಅವಳ

ಜತೇಲಿ ಮಾತಾಡ್ಬೇಕು."

ಓ___ಆದು ಸಾಧ್ಯವಿಲ್ಲ."

ಸಿಡುಬಿನ ಕಲೆಗಳ ಕಪ್ಪಗಿನ ಕುರೂಪ ಮುಖದ ಚಲಂನನ್ನು

ನನ್ನ ಆಪ್ತನೆಂದು ವನಜಳಿಗೆ ಪರಿಚಯ ಮಾಡಿಕೊಡುವ ಚಿತ್ರವನ್ನು ಕಲ್ಪಿಸಿಕೊಂಡೇ ನಾನು ತಣ್ಣಗಾಗಿ ಹೋದೆ.

"ಸರಿ ಹಾಗಾದರೆ...." ಎಂದ ಚಲಂ.

ವನಜಳನ್ನು ಕಾಣ ಹೊರಟಾಗ ನನ್ನ ಮನಸ್ಸು ಕಸಿವಿಸಿ

ಗೊಂಡು ಕೇಳುತ್ತಿತ್ತು. ಏನಾದರೊಂದು ತೀರ್ಮಾನವಾಗಬೇಕು; ಬೇಗನೆ ಏನಾದರೂ ತೀರ್ಮಾನವಾಲೇಗಬೇಕು...

ಒಂದು ಘಂಟೆಯಿಂದಲೂ ಆಕೆಯೊಬ್ಬಳೇ ನನಗಾಗಿ ಕಾದಿ

ದ್ದಳು. ನಾನು ಬಂದೊಡನೆ,ನೊಂದ ಧ್ವನಿಯಲ್ಲಿ ಕೇಳಿದಳು.

"ಯಾಕೆ ರಾಧಾ--ಯಾಕೆ ಹೀಗೆ? ನೀನು ಇಷ್ಟು ನಿರ್ದಯಿ

ಆಂತ ನನಗೆ ಗೊತ್ತಿರಲಿಲ."

ನಮ್ಮೊಳಗೆ ನಾನು ನೀನುಗಳ ಆತ್ಮೀಯತೆ ಬೆಳೆದಿತ್ತು. ಅವಳ

ಮಾತಿಗೆ ನಾನು ಉತ್ತರ ಕೊಡಲಿಲ್ಲ.

ಇಷ್ಟರಲ್ಲೇ ವನಜಾ, ಸಹವಾಸ ಬೇಸರ ಬಂತೇನು?"

ವನಜ, ಸಿಲ್ಲಿ ಸಿಲ್ಲಿಯಾಗಿ ಮಾತನಾಡಬೇಡ"

" ಮೈ ಚೆನ್ನಾಗಿಲ್ವೆ ರಾಧಾ ?"

" ಹೂಂ. ಅದಕ್ಕೇ ನಾಲ್ಕು ದಿವಸ್ದಿಂದ ಬರಲಿಲ್ಲ."

ಆಕೆ ನನ್ನ ಕೈ ಮುಟ್ಟಿ ನೋಡಿದಳು; ಹಣೆಯ ಮೇಲೆ ತನ್ನ

ಕೈಯನ್ನಿಟ್ಟಳು.

"ಇಲ್ಲ ವನಜ, ಈಗ ಚೆನ್ನಾಗಿದೀನಿ."

"ನಾನೊಂದು ಪ್ರಶ್ನೆ ಕೇಳಲಾ ರಾಧಾ?"

"ಕೇಳು."

"ನೀನು ನಿಜವಾಗ್ಲೂ ನನ್ನ ಪ್ರೀತಿಸ್ತೀಯಾ?"

"ನೀನು ನಿಜವಾಗ್ಲೂ ನನ್ನ ಪ್ರೀತಿಸ್ತೀಯಾ?"

"ಅದು ನಾನು ಕೇಳಿದ ಪ್ರಶ್ನೆ."

" ಗೊತ್ತು. ನನ್ನ ಉತ್ತರವು ನಿನ್ನ ಪ್ರಶ್ನೇಲೇ ಇದೆ."

ವನಜ ಸೋಲನ್ನೊಪ್ಪಿಕೊಂಡಳು.ಆದರೆ ಆಕೆಯ ಬತ್ತಳಿಕೆ

ಬರಿದಾಗಿರಲಿಲ್ಲ.

"ನೀನು ಯಾತಕ್ಕೋಸ್ಕರ ನನ್ನ ಪ್ರೀತಿಸ್ತೀಯಾ?"

"ನಿನ್ನ ಪ್ರಶ್ನಯೇ ನನ್ನ ಉತ್ತರ."

"ಹೋಗಪ್ಪ."

ಕೃತಕವಾದ ಮುನಿಸು ಅವಳ ರೂಪಕ್ಕೆ ಶೋಭೆ ಕೊಟ್ಟತು.

"ನೀನು ಎಷ್ಟೊಂದು ಸುಂದರಿ ವನಜ !"

ಗಾಳಿಗೆ ಹಾರಾಡುತ್ತಿದ್ದ ಅವಿಧೇಯವಾದ ಮುಂಗುರುಳನ್ನು

ಹತೋಟಿಗೆ ತರುತ್ತಾ ವನಜ ಹೇಳಿದಳು.

"ನಾಳೆ ದಿವಸ ಮುದುಕಿಯಾಗಿ ಕೂದಲು ನರೆತು ಮುಖ

ಸುಕ್ಕು ಗಟ್ಟಿದಾಗ?"

"ಆಗ ಡೈವೋ‍ಸ್‌‌ ಮಾಡ್ಕೊಂಡು ಬಿಡ್ತೀನಿ."

"ಥೂ!"

ಹಾಗೆ ಮಾತನಾಡುತ್ತಾ ಹೃದಯದ ನೋವನ್ನು ಮರೆಯಲು

ನಾನು ಯತ್ನಿಸುತ್ತಿದ್ದೆ. ಆದರೂ ಮನದ ಅವಧಿಯಲ್ಲೆಲ್ಲಾ ನೋವು

ಮರುಕಳಿಸುತ್ತಿತ್ತು.

ಆಳುಕುತ್ತ ಆಳುಕುತ್ತ ನಾನು ಆ ಪ್ರಶ್ನೆ ಕೇಳಿದೆ.

"ವನಜ, ನಾಳೆಯೊಂದು ದಿನ ನಾನು ಭಿಕಾರಿಯಾದರೆ?

ನಿರುದ್ಯೋಗಿಯಾದರೆ?"

"ಎಷ್ಟು ಅಸಹ್ಯವಾದ ಮಾತು ಆಡ್ತೀಯಪ್ಪ!"

ಯೋಚನೆಯಿಂದ ನನ್ನ ಮುಖ ಬಾಡಿತು.ಅಂತಹ ಮಾತು

ಆಕೆಗೆ ಅಸಹ್ಯವಾಗಿತ್ತು---ಅಲ್ಲವೇ? "ನೀನು ಏನೇ ಆದರೂ ನನ್ನ ಪಾಲಿನ ರಾಧಾ," ಎಂಬ ಉದ್ಗಾರ ಅವಳಿಂದ ಹೊರ ಬೀಳಲಿಲ್ಲ-- -ಅಲ್ಲವೇ?

" ಬಾ ರಾಧಾ. ಐಸ್ ಕ್ರೀಮ್ ಮಾಡ್ಸಿದೀನಿ. ನಂದೇ

ಮೇಲ್ವಿಚಾರಣೆ. ಮುರಲಿ ಇನ್ನೂ ಮನೆಗೆ ಬಂದಿಲ್ಲ. ಬಾ."

ನಾವು ಒಳ ಹೋದೆವು ಚಮಚ ಐಸ್ ಕ್ರೀಮನ್ನು ಎತ್ತಿ

ಬಾಯಿಯ ಬಳಿ ತಂದಿತು. ನವುರಾಗಿ ಬರುತ್ತಿದ್ದ ಬಾದಾಮಿಯ ಆ ಸುವಾಸನೆ.....ಇಪ್ಪತ್ತು ವಷ‌‍ಗಳ ಹಿಂದೆ, ತಂದೆಯೂ ನಾನೂ ಯಾರದೋ ಮನೆಯ ಹೊಲಸು ಜಗಲಿಯ ಮೇಲೆ ಮಲಗಿ, ಬಡವರ ಬಾದಾಮಿಯಾದ ಕಡಲೆಕಾಯಿ ತಿಂದಿದ್ದೆವು.

"ಏನು ಯೋಚನೆ ರಾಧಾ?"

ನನ್ನ ಹುಬ್ಬು ಗಂಟಿಕ್ಕಿದ್ದರೂ ಮುಗುಳ್ನಗಲು ಯತ್ನಿಸಿದೆ.

ಪಕ್ಕದಲ್ಲೇ ಕುಳಿತಿದ್ದ ಅವಳು ಕುರ್ಚಿಯನ್ನು ನನ್ನ ಬಳಿಗೆ ಸರಿಸಿದಳು. ಚಮಚವನ್ನು ಕೆಳಗಿಟ್ಟು ಬದ್ರವಾಗಿ ನನ್ನ ಬಲಗೈಯನ್ನು ಹಿಡಿದು ಕೊಂಡಳು. ನನ್ನೆದೆ ಡವಡವನೆ ಹೊಡೆದುಕೊಂಡಿತು. ನಾನು ಈ ವನಜಳಲ್ಲಿ ಅಪಾರ ವಿಶ್ವಾಸವಿಟ್ಟಿದ್ದೆ. ನನ್ನ ಹೃದಯದ ಎಲ್ಲವನ್ನೂ ಅವಳಿಗಾಗಿ ಅಪಿಸಿದೆ. ನಾನಿನ್ನೂ ಏಕಾಕಿಯಾಗಿ ಇರುವುದು ಸಾಧ್ಯ ವಿರಲಿಲ್ಲ. ನನ್ನಲ್ಲಿ ಸುಪ್ತವಾಗಿದ್ದ ಮಧುರ ಭಾವನೆಗಳಿಗೆಲ್ಲಾ ಆಕೆ ಜೀವ ತುಂಬಿದ್ದಳು--ನನ್ನನ್ನು ಹೆಚ್ಚು ಮಾನವೀಯವಾಗಿ ಮಾಡಿದ್ದಳು.

ಕ್ಷಣಕಾಲ ಆಕೆ ಕೈ ಬಿಗಿ ಹಿಡಿದೇ ಇದ್ದಳು. ಅವಳ ಮಡಿಲಲ್ಲಿ

ಮುಖವಿಟ್ಟು ಅಳಬೇಕೆಂದು ತೋರಿತು. ಗಂಟಲು ಗೊರಕ್ ಎಂದು ಸದ್ದು ಮಾಡುತ್ತಿತ್ತು. ಆದರೆ ಸ್ವರ ಹೊರಡುತ್ತಿರಲಿಲ್ಲ. ಕುತ್ತಿಗೆಯ ನರಗಳು ಬಿಗಿದು ಬಂದಿದ್ದುವು.

ಆಕೆ ಒಮ್ಮೆಲೆ ನನ್ನ ಕೈ ಬಿಟ್ಟು ಸ್ವಲ್ಪ ದೂರ ಸರಿದಳು. ಅಂತ

ರ್ಮುಖಿಯಾಗಿದ್ದ ನಾನು ಅವಳ ಭಾವನೆಗಳನ್ನು ತಿಳಿದುಕೊಳ್ಳಲು ಸಮರ್ಥನಾಗಿರಲಿಲ್ಲ. ಮೌನವಾಗಿ ನಾವು ಕುಳಿತೆವು. ಐಸ್ ಕ್ರೀಮ್ ನಮ್ಮನ್ನೆ ಕನಿಕರದಿಂದ ನೋಡುತ್ತಲಿತ್ತು.

"ಇಷ್ಟವಿಲ್ದಿದ್ರೆ ಏಳ್ಬಾರ್ದ ? ... ಲೈಬ್ರೆರಿಗಾದರೂ ಹೋಗೋಣ."

ಆ ಮಾತು, ಆದರಲ್ಲಿದ್ದ ಬೇಸರದ ಆಸೆಯ ಧ್ವನಿ ,ನನಗೆ

ಅರ್ಥವಾದವು.

ಆದರೆ--?

ನನ್ನ ಪಾಲಿಗೆ ಪ್ರೀತಿ ಆಟದ ವಸ್ತುವಾಗಿರಲಿಲ್ಲ. ಪ್ರೀತಿಯ

ಪ್ರೇಮದ ಆಸರೆಯಲ್ಲಿ, ಬರಡಾಗಿದ್ದ ನನ್ನ ಬಾಳ್ವೆಯನ್ನು ಹಸನು ಗೊಳಿಸಲು ನಾನು ಬಯಸಿದ್ದೆ. ಬಹಳ ದಿನಗಳಿಂದ ನಾನು ಇದಿರು ನೋಡುತಿದ್ದ ಪ್ರಥಮ ಚುಂಬನ....ಎರಡು ಹೃದಯಗಳು ಒಂದಾಗಿ ಎರಕ ಗೊಂದುದಕ್ಕೆ ಸಾಕ್ಷ್ಯವಾದ ಪ್ರಥಮ ಆಲಿಂಗನ....ಯಾವ ನಿಮಿಷಬೇಕಾದರೂ ಅದು ನನ್ನದಾಗುತಿತ್ತು. ಆದರೆ ಯೌವನದ ಬರಿಯ ಹುಚ್ಚಾಟವಾಗಿ ಅದನ್ನು ನಾನು ಬಯಸಲಿಲ್ಲ. ಜೀವನದ ನಿರಂತರ ಪಯಣದ ಮೊದಲ ಮಹಾ ಸಂಭವವಾಗಿ ಅದು ನನಗೆ ಬೇಕಾಗಿತ್ತು.

ನಾನು....ನನ್ನ ಬಾಳ್ವೆ....ಭೂತಕಾಲ, ವರ್ತಮಾನ ಕಾಲ

ಮತ್ತು ಭವಿಷ್ಯತ್ಕಾಲ.

ವನಜ ಮತ್ತು ನನ್ನ ಜೀವನ ಪ್ರವಾಹಗಳ ಮಹಾ ಸಂಗಮ

ಸಾಧ್ಯವೆ?

ಮನಸ್ಸಿನ ದೇಹದ ಬಯಕೆಗಳು ವನಜಳಿಗಷ್ಟೇ ಅಲ್ಲ, ನನಗೂ

ಇದ್ದುವು. ಆದರೆ ಅವು ಈಡೇರಬೇಕಾದ ರೂಪುಗೊಳ್ಳಬೇಕಾದ ಬಗೆ?

.........ನಾನು ಮತ್ತು ವನಜ ಲೈಬ್ರೆರಿಗೆ ಹೋದೆವು. ಮುದ್ದಾ

ಗಿದ್ದ ಅವಳ ಎರಡು ಅಂಗೈಗಳನ್ನೂ ಎತ್ತಿ, ಅವುಗಳಿಂದ ನನ್ನ ಮುಖ ಮುಚ್ಚಿಕೊಂಡೆ. ಅಳುವ ಹಂಬಲ....ಮತ್ತೆ ನಾನು ಎಳೆಯ ಹುಡುಗನಾಗುವುದು ಸಾಧ್ಯವೆ?

ವನಜ ನನ್ನ ಭುಜದಮೇಲೆ ತಲೆ ಬಾಗಿಸುತ್ತಾ, ಆಸೆಯ ದೃಷ್ಟಿ

ಯಿಂದ ನನ್ನ ಕಣ್ಣುಗಳನ್ನೆ ನೋಡಿದಳು.

"ನನ್ನ ರಾಧಾ, ನನ್ನ ರಾಧಾ ---ನೀನು ಬರೇ ಮಗು. ನಿನ

ಗೇನೂ ತಿಳೀದು."

ಇದೀಗ ಸರಿಯಾದ ಸಮಯ. ಮಗುವಾದ ನಾನು ಹೃದಯ

ದಲ್ಲಿರುವುದನ್ನು ಈಗಲೆ ತೆರೆದು ತೋರಿಸಬೇಕು....ನನ್ನ ದೇವಿ ನನ್ನನ್ನು ಕ್ಷಮಿಸಲಾರಳೆ?......ನನ್ನನ್ನು ಅರ್ಥಮಾಡಿಕೊಳ್ಳಲಾರಳೆ?...... "

"ವನಜಾ, ನನ್ನ ವನೂ...."

ಒಂದೇ ಸಮನೆ ಕಿರಿಚಿಕೊಂಡ್ ಕಾಲ್ ಬೆಲ್. ಆತ ಬಂದಿದ್ದ

---ಮುರಲಿ.ಏಕಾಂತಕ್ಕೆ ಮತ್ತೆ ಅವಕಾಶವಿರಲಿಲ್ಲ.

ಆ ದಿನವೂ ನಿರ್ಧಾರವಾಗಲಿಲ್ಲ.

ಮುರಲಿ ಮುಖ ತೊಳೆಯಲು ಹೋದಾಗ ಹೇಳಿದೆ.

"ವನಜಾ, ಬಹಳ ಮಾತನಾಡಬೇಕು. ನೀನೊಬ್ಬಳೇ

ಯಾವತ್ತು ಸಿಗ್ತೀಯಾ?"

"ಅಂತೂ ಮಾತನಾಡೋ ಆಶ್ವಾಸನೆಯಾದರೂ ಕೋಡ್ತಾ

ಇದೀಯಲ್ಲ!"

ವನಜ, ನೀನು ಗೇಲಿ ಮಾಡಬಾರದು.ಹೃದಯ ಬಿರಿದು

ಹೋಗುತ್ತೆ."

"..........."

"ಹೇಳು, ಯಾವತ್ತು ಸಿಗ್ತೀಯ?"

"ನಮ್ಮನೇ ವಿಳಾಸ ನಿನ್ನಲ್ಲಿದೆ ಕಾಗದ ಬರೆ. ಪೋಸ್ಟ್

ನನ್ನ ಕೈಗೇ ಬರತ್ತೆ ......ಯಾವಾಗಲೂ".

"ಹಾಗೇ ಆಗ್ಲಿ ವನೂ ........ಬೇಗನೆ ಬರೀತೀನಿ."

ಬೇಗನೆ ಬರೆಯುವೆನೆಂದು ಹೇಳಿ ಬಂದಿದ್ದೆ . ಆದರೆ ಅದು

ಸಾಧ್ಯವಾಗಲಿಲ್ಲ. ನಿರೀಕ್ಷಿಸದೇ ಇದ್ದೊಂದು ಘಟನೆ ಸಂಭವಿಸಿ

ನನ್ನನ್ನು ಕಾತರಕ್ಕೆ ಗುರಿಮಾಡಿತು.

ಒಂದು ಸಂಜೆ, ನಮ್ಮೂರಿನ ಪ್ರಮುಖ ವಜ್ರ ವ್ಯಾಪಾರಿ

ಯೊಬ್ಬನ ಮಗನು ನಾಪತ್ತೆಯಾಗಿರುವನೆಂಬ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಯಿತು.ವಿಹಾರಕ್ಕೆಂದು ಕಾರಿನೊಡನೆ ಹಿಂದಿನ ಸಂಜೆ ಹೋದವನು ವಾಪಸು ಬಂದಿರಲಿಲ್ಲವಂತೆ. ಅದನ್ನು ಕುರಿತು ತುಸು ಯೋಚಿಸಿದೆನಾದರೂ ವನಜಳ ನೆನಪು ಉಳಿದುದೆಲ್ಲವನ್ನೂ ತೊಡೆದು ಹಾಕಿತು.

ಮರುದಿನ ಸಂಜೆ ಅದೇ ಪತ್ರಿಕೆಯಲ್ಲಿ ವಾರ್ತೆ ಬಂತು. ಹುಡುಗ

ಊರ ಹೊರಗೆ ಹತ್ತು ಮೈಲುಗಳಾಚೆ ಗಾಯಗೊಂಡು ಬಿದ್ದಿದ್ದ. ಧಾವಿಸುತ್ತಿದ್ದ ಕಾರಿನಿಂದ ಉರುಳಿಬಿದ್ದು ಗಾಯವಾಗಿತ್ತು. ರಕ್ತ ಕೋಡಿ ಕಟ್ಟಿ ಹರಿದು ಪ್ರಜ್ನಾಹೀನನಾಗಿದ್ದ. ಅವನ ಜೀವ ಆಸ್ಪತ್ರೆ ಯಲ್ಲಿ ಬದುಕು ಸಾವುಗಳ ನಡುವೆ ತೂಗಾಡುತಿತ್ತು.

ಮೂರನೆಯ ದಿನ ಸಂಜೆಯ ಪತ್ರಿಕೆ ನೋಡಿ ನನ್ನ ಹೃದಯ

ಸ್ವಲ್ಪ ಹೊತ್ತು ಹೊಡೆತ ನಿಲ್ಲಿಸಿತು. ಮದರಾಸಿನಲ್ಲಿ ಕಾರನ್ನು ಮಾರಲೆತ್ನಿಸುತಿದ್ದಾಗ ಚಲಂನನ್ನು ಹಿಡಿದಿದ್ದರು. ಇತ್ತ ಆ ಹುಡುಗ ಸತ್ತಿದ್ದ.

ಹಾಗೆಲ್ಲ ಸುಲಭವಾಗಿ ಎಡವಿ ಬೀಳದ ಹಳೆಯ ಹುಲಿ ಚಲಂಗೆ

ಆ ದುರವಸ್ಥೆ ಒದಗಿತ್ತು.

ರಾತ್ರೆ ಕಳೆದು ಬೆಳಗಾಗುವ ಹೊತ್ತಿಗೆ ಚಲಂ ಬಳಗದವನೊಬ್ಬ

ಸಾವಿತ್ರಿಯೊಡನೆ ನಮ್ಮ ಮನೆಗೆ ಬಂದಿದ್ದ. ಕೈ ಹಿಡಿದ ಹೆಣ್ಣಿಗಿಂತಲೂ ಹೆಚ್ಚಾಗಿ ಸಾವಿತ್ರಿ ಅಳುಮೋರೆ ಹಾಕಿದಳು.

"ಏನಾದರೂ ಮಾಡಿ ಅವರ್ನ ಬಿಡಿಸ್ಕೊಂಡು ಬರಬೇಕಪ್ಪ."

"ಹೂನಕ್ಕ."

"ಹಣದ ಯೋಚ್ನೆ ಮಾಡಬಾರ್ದು."

"ಇಲ್ಲಕ್ಕ. ಈಗ್ಲೇ ಹೊರಡ್ತೀನಿ."

ಆಕೆ ಕೊರಳ ಹಾರ ಕೈಬಳೆಗಳನ್ನು, ತೆಗೆದು ಕಟ್ಟಿಕೊಂಡೆ

ಬಂದಿದ್ದಳು.

"ಎಲ್ಲಾದರೂ ಉಂಟೆ ಅಕ್ಕ? ಬೇಡಿ, ಬೇಡಿ."

"ಹಾಗನ್ಬೇಡವಪ್ಪಾ. ಅವರೇ ಇಲ್ಲದ ಮೇಲೆ ಇವು ಯಾವ

ಸೌಭಾಗ್ಯಕ್ಕೆ? ವಕೀಲರ ಖರ್ಚಿಗೆ ಬೇಕಾಗುತ್ತೆ. ತೆಗೆದಿಟ್ಕೊ."

ನಾನು ಸುಮ್ಮನಿದ್ದೆ.

ಹಿಂದೊಮ್ಮೆ ಬಳಗದವನೊಬ್ಬನ ಮೇಲೆ ಒಂದು ಮೊಕದ್ದಮೆ

ಯಾವಾಗ ಚಲಂ ಗೊತ್ತುಮಾಡಿದ್ದ ಯುವಕ ವಕೀಲನ ಬಗ್ಗೆ, ಸಾವಿತ್ರಿಯೊಡನೆ ಬಂದವನು ಹೇಳಿದ. ನಾನು ಆ ವಕೀಲನ ಹೆಸರು ವಿಳಾಸ ತಿಳಿದುಕೊಂಡ.

....ಭವೃಲೋಕವೊಂದರ ಬಾಗಿಲಲ್ಲಿ ನಿಂತು ವನಜ "ಬಾ"

ಎಂದು ಕರೆಯುತ್ತಿದ್ದಳು. ಎಲ್ಲವನ್ನೂ ಬಿಟ್ಟು ಅಲ್ಲಿಗೆ ಹೊರಟು ಹೋಗಲು ಮನಸಾಗುತಿತ್ತು. ಅದಕ್ಕೆ ಮುಂಚೆ, ಜೀವನದ ಅದೊಂದು ಅಧ್ಯಾಯದ ಕೊನೆಯ ಗೆರೆಯನ್ನು ಬರೆದು ಹೊರಡಬೇಕಾಗಿತ್ತು. ಆ ಗೆರೆಯನ್ನು ಬರೆಯುವುದು ಸುಲಭವಾಗಿರಲಿಲ್ಲ. ಚಲಂ ಬಂಧನ ಆ ಕೆಲಸವನ್ನು ಮತ್ತಷ್ಟು ಕಠಿನಗೊಳಿಸಿತ್ತು.

....ಸಂಜೆ ಆ ವಕೀಲರ ಆಫೀಸಿನ ಹೊರನಿಂತಿದ್ದು, ಕಕ್ಷಿಗಾರರೆ

ಲ್ಲ ಹೊರಟು ಹೋಗುವುದನ್ನು ಕಾಯುತಿದ್ದೆ. ಅವರೊಬ್ಬರೆ ಉಳಿ ದಾಗ ನಾನು ಮೆಟ್ಟಲೇರಿ ಒಳಬಂದೆ.

ಪ್ರಶ್ನಾರ್ಥಕ ಚಿಹ್ನೆಯಾಗುವಂತೆ ಅವರು ಹುಬ್ಬುಗಳನ್ನೇರಿಸಿ

ದರು. ನಾನು ನೇರವಾಗಿ ವಿಷಯವನ್ನೇ ಪ್ರಸ್ತಾಪಿಸಿದೆ.

"ನಿನ್ನೆಯ ಪತ್ರಿಕೇಲಿ, ಕಾರಿನ ಕಳವಿಗೆ ಸಂಬಂಧಿಸಿ ಚಲಂ

ಅಂತ ಒಬ್ಬರ್‍ನ ಹಿಡಿದದ್ದು ನೀವು ಓದಿರ್ಬೇಕು."

"ಹೌದು."

"ಆ ಚಲಂ ನಿಮಗೆ ಪರಿಚಿತರು ಅಲ್ವೆ?"

"ಯಾರು ನೀವು?"

"ಅವರ ಸ್ನೇಹಿತ, ಕೇಶವ ಎಂತ."

"ನಿಮಗೇನು ಬೇಕು?"

"ಡಿಫೆನ್ಸ್‌‌ಗೆ ನಿಮ್ಮನ್ನ ಗೊತ್ಮಾಡ್ಭೇಕೂ೦ತ ಚಲ೦ ಹೇಳಿ ಕಳ್ಸಿ

ದಾರೆ."

ಅವರ ಸ್ವರದಲ್ಲಿ ಕೃತಕ ಕಾಠಿನ್ಯ ಬೆರೆತುಕೊ೦ಡಿತು:

"ಪಾತಕಿಗಳ ಡಿಫೆನ್ಸ್ ನಾನು ಮಾಡೋದಿಲ್ಲ."

"ಪೋಲೀಸರಿನ್ನೂ ಆರೋಪ ಕೂಡಾ ಹೊರಿಸಿಲ್ಲ. ನೀವು

ತೀಪೇ೯ ಕೊಡ್ತಾ ಇದೀರಲ್ಲ ಸಾರ್."

ಅವರ ಕಿವಿಗಳು ಕೆ೦ಪಗಾದುವು.

"ಇದ್ದೀತು....ಈಗ ನೀವು ಹೋಗ್ಬಹುದು."

ನಾನೆದ್ದು ನಿ೦ತು, ಕೊನೆಯ ಬಾಣವನ್ನೆ ಸೆದೆ.

"ಡಿಫೆನ್ಸ್ ವೆಚ್ಚಕ್ಕೆಲ್ಲಾ ನಾನೇ ಜವಾಬ್ದಾರ. ಎಷ್ಟಾದರೂ

ಸರಿಯೆ. ನೊಡಿ, ನಿಮಗಿಷ್ಟವಿಲ್ಲವಾದರೆ ಬೇರೆ ಎಲ್ಲಿಗಾದರೂ ಹೋಗ್ತೀನಿ."

ಫೈಲುಗಳನ್ನು ಬದಿಗೆ ಸರಿಸುತ್ತಾ ಅವರೆ೦ದರು;

"ಸೆಷನ್ಸ್ ಮುಗಿಯೋವರೆಗೂ ಹತ್ತು ಸಾವಿರ ಕೊಡ್ತೀರೋ."

"ಆಗಲಿ, ಕ೦ತುಗಳಲ್ಲಿ ಹಣ ತಗೊಳ್ಳಿ. ಚಲ೦ನನ್ನ ಪಾರು

ಮಾಡಿ."

"ಪ್ರಯತ್ನ ಮಾಡೋಣ."

"ಇನ್ನೊ೦ದು ವಿಷಯ. ಬಹಿರ೦ಗವಾಗಿ ನನಗೂ ಈ

ಡಿಫೆನ್ಸ್ ಗೂ ಸ೦ಬ೦ಧವಿಲ್ಲ."

"ಅಥ೯ವಾಯ್ತು."

ಹತ್ತರ ಐವತ್ತು ನೋಟೂಗಳನ್ನು ಅವರ ಮೇಜಿನ ಮೇಲಿಟ್ಟೆ.

ಆಗ ಯುವಕ ವಕೀಲರು ಹಸನ್ಮುಖರಾದರು.

"ಆಗಲಿ ಮಿಸ್ಟರ್ ಕೇಶವ್ ನಾಳೆ ಲಾಕಪ್ನಲ್ಲಿ ಚಲ೦ನ ಭೇಟಿ

ಯಾಗ್ನೀನಿ."

ಬಳಗದವನೊಬ್ಬ ನೋಡಿ ಬ೦ದ. ಬೇಡಿ ತೊಡಿಸಿ ಕಟ್ಟಿ

ಚಲ೦ನನ್ನು ನಮ್ಮೂರಿಗೆ ಕರೆದು ತ೦ದಿದ್ದರು. ಆ ಹಗಲು ಬಲು

ಮೆಲ್ಲನೆ ಕಳೆಯಿತು.

ರಾತ್ರೆ ಆ ವಕೀಲರು ಹೇಳಿದರು:

"ನೋಡಿ ಕೇಶವ್. ನಿಮ್ಮ ಸ್ನೇಹಿತರು ಚೆನ್ನಾಗಿದ್ದಾರೆ. ನೀವು ಬ೦ದಿದ್ದ ವಿಷಯ ಹೇಳ್ಡೆ."

"ಯಾರೂ೦ತ ಅವರಿಗೆ ಗೊತ್ತಾಯ್ತೆ ಸಾರ್?"

"ಯಾಕೆ?"

"ಸುಮ್ನೆ ಕೇಳ್ದೆ,ಅಷ್ಟೆ."

ಕೇಶವ ಎ೦ದರೂ ಚಲ೦ಗೆ ಗೊತ್ತಾಗಿತ್ತು.

ವಕೀಲರು ಇನ್ನೊ೦ದು ವಿಷಯ ಹೇಳಿದರು:

"ಇದು ಚಿಲ್ಲರೆ ಕೇಸಲ್ಲ.ಅದರಲ್ಲಿ ಸೋತರೆ ನನಗೆ ಕೆಟ್ಟ ಹೆಸರು ಬರುತ್ತೆ. ಸೀನಿಯರ್ ಲಾಯರೊಬ್ಬರ ಸಹಾಯ ತಗೋತೀನಿ."

"ಹಾಗೇ ಮಾಡಿ."

"ನಾಳೆ ಇಲ್ಲಿಗೆ ಬರೋ ಬದುಲು ನಮ್ಮನೇಗೆ ಬನ್ನಿ."

ಅವರು ಮನೆಯ ವಿಳಾಸಕೊಟ್ಟರು.

ಆ ಮರುದಿನ,ನನ್ನ ಜೀವನದ ನಾವೆಯನ್ನೇ ತಿರುಗಿಸುವ ಚುಕ್ಕಾಣಿಯಾಗಲಿತ್ತೆ೦ಬ ವಿಷಯ ಯಾರಿಗೆ ಗೊತ್ತಿತ್ತು?

ವಕೀಲರ ಮನೆ ಸಮೀಪಿಸಿದಾಗ ಎ೦ಟು ಘ೦ಟೆ ಹೊಡೆದಿತ್ತು. ಅಲ್ಲಿ ಕಾಲ್ ಬೆಲ್ಲಿರಲಿಲ್ಲ. ಅವರ ಅವಶ್ಯತೆಯೇ ಇಲ್ಲದ೦ತೆ ಆಫೀಸು ಕೊಠಡಿ ತೆರೆದೇ ಇತ್ತು.ಯಾರೋ ಒಬ್ಬರು ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದರು.ಆ ಬಿಳಿಗೂದಲು--ನಾನು ಗಾಬರಿಯಾಗಿ ಹಿ೦ತರು ಗಲು ಅಣಿಯಾಗಿದ್ದೆ.ವನಜಳ ತ೦ದೆಗೆ ಅ೦ಥದೇ ಕ್ರಾಪು ಇತ್ತಲ್ಲವೆ? ಆತ ಈ ಯುವಕ ವಕೀಲರ ಸ್ನೇಹಿತನಾಗಿರಬಹುದೆ೦ಬ ವಿಷಯ ನನ್ನ ಗಮನಕ್ಕೆ ಬರದೇ ಹೋಯಿತಲ್ಲ....ಆದರೆ ಅವರು ತಿರುಗಿನೋಡಿಯೇ ನೋಡಿದರು.ಹೀಗಿದ್ದರೂ ನಾನು ಹೊರಟು ಬಿಡಬಹುದಾಗಿತ್ತು. ನನ್ನ ಹಿ೦ಬದಿಯಿ೦ದ "ಹಲೋ ಬನ್ನಿ" ಎನ್ನುತ್ತ ಯುವಕ ವಕೀಲರು ಬರದೇ ಇದ್ದಿದ್ದರೆ,ನಾನು ಹೊರಟೇ ಬಿಡಬಹುದಾಗಿತ್ತು.

ಉಡುಗಿಹೋಗಿತ್ತು ನನ್ನ ಜ೦ಘಾಬಲ. ನಾನು ತೊದಲಿದೆ:

"ಕಮಿಸಿ ಸಾರ್.ಈಗ ಬಿಡುವಿಲ್ಲ.ನಾಳೆ ಬತೀ೯ನಿ."

ವನಜಳ ತಂದೆ ಶ್ರೀನಿವಾಸಯ್ಯ ಬೆರಗುಗಣ್ಣಿನಿಂದ ನಮ್ಮಿಬ್ಬ

ರನ್ನೂ ನೋಡುತಿದ್ದರು ಆ ನೋಟ ನನ್ನ ನರನಾಡಿಗಳನ್ನು ಇರಿದು ಸುಡುತಿದ್ದಂತೆ ನನಗೆ ಭಾಸವಾಗುತಿತ್ತು.

"ಐದೇ ನಿಮಿಷ.ಇದ್ಬಿಟ್ಟು ಹೋಗಿ. ನಮ್ಮ ಸೀನಿಯರ್ ಲಾಯರು ಬಂದಿದ್ದಾರೆ.ನೋಡ್ಬಿಟ್ಟು ಹೋಗಿ.

"ಎಲ್ಲವೂ ಮುಗಿದುಹೋಗಿತ್ತು. ಚಲಂ ಬಾಂಧವ್ಯದ ಬಂಡೆ ಗಲ್ಲಿಗೆ ತಗಲಿ ನನ್ನ ನಾವೆ ಪುಡಿ ಪುಡಿಯಾಗುವ ಹೊತ್ತು. ಕೊನೆಗೆ ಹೀಗೂ ಆಗಬೇಕಾಯಿತೆ?

......ಜೀವಚ್ಛವದಂತೆ ನಾನು ವಕೀಲರನ್ನು ಹಿಂಬಾಲಿಸಿ, ಕಕ್ಷಿಗಾರರಿಗೋಸ್ಕರವೇ ಇದ್ದ ಮುರುಕು ಕುರ್ಚಿಯೊಂದರ ಮೇಲೆ ಕುಳಿತುಕೊಂಡೆ.

"ನೀವು!" ಎಂದು ಉದ್ಗಾರವೆತ್ತಿದರು ಶ್ರೀನಿವಾಸಯ್ಯ.

"ಈ ವಕೀಲರು ಪರಿಚಯಸ್ಥರು. ನೋಡ್ಕೊಂಡು ಹೋಗೋ ಣಾಂತ ಬಂದೆ.

"ಓ! ನನಗೆ ಗೊತ್ತೇ ಇರಲಲ್ಲಿ. ಮಾಧೂ ಹೇಳಿಯೇ ಇರ ಲಿಲ್ಲ.

"ಯುವಕ ವಕೀಲ ಮಾಧವರಾಯರು ಆಶ್ಚರ್ಯದ ನೋಟದಿಂದ ನಮ್ಮಿಬ್ಬರನ್ನೂ ನೋಡುತಿದ್ದರು. ಅವರೆಂದರು:

"ನೀವಿಬ್ಬರೂ ಪರಿಚಿತರು ಆನ್ನೋದನ್ನ ಮಿಸ್ವರ್ ಕೇಶವ್ ನನಗೆ ಹೇಳಿರಲಿಲ್ಲ."

"ಕೇಶವ--ಯಾರು ಕೇಶವ?"

"ಯಾಕೆ,ಇವರೇ!"

ಮುಳುಗುತಿದ್ದವನು ಹುಲ್ಲುಕಡ್ಡಿಗೆ ಆತುಕೊಳ್ಳುವ ಹಾಗೆ ನಾನೆಂದೆ: "ಆದು ನಮ್ಮನೇಲಿ ಇಟ್ಟಿದ್ದ ಪ್ರೀತಿ ಹೆಸರು ಸಾರ್."

"ಓ!"ಎಂದರು ಮಾಧವರಾಯರು.ಅವರ ನೆಟ್ಟ ದೃಷ್ವಿ ಬೆಂಕಿಯಂತೆ ನನ್ನನ್ನು ಕರಗಿಸತೊಡಗಿತು.

"ನೀವು ಈ ನಾಲ್ಕೈದು ದಿವಸ ನಮ್ಮನೆಗೇ ಬಂದಿಲ್ವಂತೆ

ರಾಧಾಕೃಷ್ಣ. ಮುರಲಿ ಮತ್ತು ವನಜ ನಿಮ್ಮ ಹಾದಿ ನೋಡ್ತಾನೇ ಇದ್ರು."

"ಹೌದು ಸಾರ್, ಬರೋಕಾಗಲಿಲ್ಲ."

ಯಾವುದೋ ಗವಿಯೊಳಗಿಂದ ಪ್ರತಿಧ್ವನಿಸುವಹಾಗೆ ಮಾಧವ ರಾಯರು ಮಾತನಾಡುತಿದ್ದರು:

ಅವಸರವಾಗಿದ್ದರೆ ಈಗ ಹೋಗಿ ಮಿಸ್ಟರ್ ಕೇಶವ್,ನಾಳೆ ಬನ್ನಿ."

ಬುದ್ದಿ ಭ್ರಮಣವಾದವನ ಹಾಗೆ ನಾನೆದ್ದು, "ಬರೀನಿ ಸಾರ್, ಬರ್ತೀನಿ ಸಾರ್," ಎಂದೆ, ಇಬ್ಬರಿಗೂ ನಮಸ್ಕರಿಸುತ್ತಾ.

ಸೈಕಲು ತಂದಿರಲಿಲ್ಲ ಯಾವುದೋ ಹಾದಿ ಹಿಡಿದು ನಾನು ಮುಂದೆ ಸಾಗಿದೆ. ನಡೆಯುತಿದ್ದೆನೋ ಓಡುತಿದ್ದೆನೋ ನನಗೆ ತಿಳಿ ಯದು.ತುಂತುರು ಹನಿ ಬೀಳುತಿತ್ತು ಆಗಲೆ.ಕ್ರಮೇಣ ಆ ಹನಿ ಬಲವಾಯಿತು.ಯಾರದೊ ಮನೆಯ ಮಾಡದ ಆಸರೆಯಲ್ಲಿ ನಿಂತೆ.

ಮಳೆ ಸುರಿಯಿತು ಧಾರಾಕಾರವಾಗಿ. ಆ ಬೀದಿಯ ವಿದ್ಯುದ್ವೀಪ ಗಳೂ ಆರಿ ಹೋದವು.ಗುಡುಗು ಮಿಂಚು ಮಳೆ.ಚರಂಡಿಯಲ್ಲಿ ನೀರು ತುಂಬಿ ಹರಿಯುತಿತ್ತು.ಎಲ್ಲವು ತೇಲಿ ಹೋಗುತಿತ್ತೇನೋ- ತಿಪ್ಪೆ ರಾಶಿ ಎಲ್ಲವೂ.ಆಗಾಗ್ಗೆ ಒಂದೊಂದು ಕಾರು ಆ ಬೀದಿಯಲ್ಲಿ ಧಾವಿಸುತ್ತ ಬಂದು,ಕಣ್ಣು ಕೋರೈಸುವಂತೆ ನನ್ನ ಮೇಲೆ ಬೆಳಕು ಬೀರುತಿತ್ತು...... ಆದಾದ ಮೇಲೆ ಎಲ್ಲವೂ ಕತ್ತಲು, ಗಾಢವಾದ ಕತ್ತಲು.ಮಳೆ ಸುರಿಯಿತು ಅರ್ಧ ಘಂಟೆಯ ಹೊತ್ತು. ನನ್ನ ಹೃದಯ ಹೆಪ್ಪುಗಟ್ಟಿತ್ತು--ದೇಹವೂ ಕೂಡಾ.ಅಂತೂ ಎಲ್ಲಿ ತನಕ ನಾನು ಬಂದ ಹಾಗಾಯಿತು? ಎಲ್ಲಿ ತನಕ? ನನ್ನ ಮುಂದಿದ್ದುದು ತಳ ವಿಲ್ಲದ ಪ್ರಪಾತ--ಪಾರವಿಲ್ಲದ ಪ್ರವಾಹ. ನನಗಿನ್ನು ಉಳಿಗಾಲ ಉಂಟೆ? ಉಂಟೆ?

ಮಳೆ ನಿಂತ ಮೇಲೆ ನಾನು ಬೀದಿಗಿಳಿದು ಮನೆಯತ್ತ ಸಾಗಿದೆ. ಹೊರಗೆ ಎಲ್ಲವೂ ಶಾಂತವಾಗಿತ್ತು. ಆದರೆ ಒಳಗೆ, ನನ್ನೊಳಗೆ, ಗುಡುಗು ಮಿಂಚುಗಳು ಆರ್ಭಟಿಸುತಿದ್ದುವು. ಹೃದಯ ಸೀದು ಹೋಗುತಿತ್ತು ಬಾರಿ ಬಾರಿಗೂ.

ಆ ರಾತ್ರಿ ನನಗೆ ನಿದ್ದೆ ಹತ್ತಲೇ ಇಲ್ಲ. ನಾನು ಮಾಧವ ರಾಯರ ಮನೆ ಬಿಟ್ಟ ಮೇಲೆ ಅಲ್ಲಿ ನಡೆದಿರಬಹುದಾದ ಸಂಭಾಷಣೆ; ಆ ಬಳಿಕ ವನಜಳ ಮನೆಯಲ್ಲಿ ತಂದೆ ಮಕ್ಕಳ ಮಾತುಕತೆ;..... ಇಲ್ಲ, ಯವೂದನ್ನೂ ಊಹಿಸಿಕೊಂಡು ಯೋಚಿಸುದು ನನ್ನಿಂದಾಗ ಲಿಲ್ಲ. ಮೆದುಳು ಚೀಂಯ್ ಗುಡುತಿತ್ತು. ಅದು ಎಚ್ಚರವೊ ನಿದ್ರಾ ವಸ್ಥೆಯೊ ನನಗೆ ತಿಳಿಯದು.

.....ಮತ್ತೆ ಸೂರ್ಯೋದಯ, ಹೊಂಬಿಸಿಲು, ಬಿಸಿಲು.

"ಸಾರ್..."

ನನ್ನ ಸ್ವರ ನಡುಗುತಿತ್ತು. ನಾನು ಮಾಧವರಾಯರ ಮನೆ ಸೇರಿದ್ದೆ.

ಕಂಡೂ ಕಾಣದ ಹಾಗೆ ಮುಗುಳ್ನಗುತ್ತ ಅವರೆಂದರು:

"ನಮಸ್ಕಾರ ಮಿಸ್ಟರ್ ಕೇಶವ್ ಉರುಫ್ ರಾಧಾಕೃಷ್ಣ್. ಆಭಿನಂದನೆಗಳು. ನೀವು ಇಷ್ಟು ಸಾಹಸಿ ಆಂತ ಗೊತ್ತಿರಲೀಲ್ಲ."

ನನಗೆ ಬೇಕಾಗಿದ್ದ ಉತ್ತರಕ್ಕಾಗಿ ನಾನು ಅವರ ಮುಖವನ್ನೆಲ್ಲ ಹುಡುಕುತಿದ್ದೆ.

"ಹೋಗಲಿ ಬಿಡಿ. ಅವರವರ ಕಷ್ಟ-ಸುಖ ಅವರವರಿಗೆ." ತತ್ವಜ್ಜಾನಿಯ ಹಾಗೆ ಅವರು ಆಡಿದ ಮಾತು ಅರ್ಥವಾಗಲಿಲ್ಲ. "ಶ್ರೀನಿವಾಸಯ್ಯ ಏನೆಂದರು ಸಾರ್?" "ಅನ್ನೋದೇನು? ನೀವು ನನ್ನ ಕಕ್ಸಿದಾರರಲ್ಲದೇ ಇರುತಿದ್ದರೆ, ಹಿಡಿದು ಪೋಲೀಸರಿಗೆ ಕೊಡುತ್ತಿದ್ದರು."

"ದಿಗಿಲು ಬೀಳ್ಬೇಡಿ.ನನಗೋಸ್ಕರ ಅವರು ಅಂಥಾದ್ದು ಮಾಡೋಲ್ಲ."

ನನ್ನ ತುಟಿಗಳು ಚಲಿಸುತಿದ್ದುವು. ಅದರೆ ನಾನು ಮಾತನಾ ಡುತ್ತಿರಲಿಲ್ಲ. ಆ ಬಳಿಕ ಮಾಧವರರಾಯರೊಂದು ಮಾತು ಹೇಳಿ ದರು

"ನಿಮ್ಮ ಒಳ್ಳೇದಕ್ಕೆ ಹೇಳ್ತೀನಿ ಕೇಶವ. ಇನ್ನು ನೀವು ಆವರ ಮನೆಗೆ ಕಾಲಿಡ್ಬೇಡಿ."

ನಾನು ಆ ಮೇಲೆ ಶ್ರೀನಿವಾಸಯ್ಯ ನವರ ಮನೆಗೆ ಕಾಲಿಡಲಿಲ್ಲ. ಆದರೆ ವನಜಳನ್ನು ಕಾಣಲು ಯತ್ನಿಸಿದೆ. ನೀರು, ಮೂಗು ಕಿವಿ ಗಳನ್ನು ಹೂಗುತಿದ್ದರೂ ಆಸೆಯಿಂದ ನಾನು ಸಿಳಿಸಿಳಿ ಕಣ್ಣು ಬಿಡು ತಿದ್ದೆ. ನನ್ನ ಪಾಲಿನ ದೇವಿಯಾಗಿ ಬಂದಿದ್ದ ಹೃದಯದ ಸಿರಿಸಂಪತ್ತು ಅಷ್ಟು ಬೇಗನೆ ಮಾಯವಾಗುವುದೆಂದು ನಾನು ನಂಬಿರಲಿಲ್ಲ.

ಆ ಸಂಜೆ ಆರು ಘಂಟೆಗೆ ಅವಳನ್ನು ನಗರದ ಉದ್ಯಾನವನಕ್ಕೆ ಬರಹೇಳಿದೆ. ಎಲ್ಲವನ್ನೂ ಹೃದಯ ತೆರೆದು ಹೇಳಬೇಕು; ನನ್ನ ಬಾಳ್ವೆಯ ಹೊಸ ಆಧ್ಯಾಯದ ಓಂ ಶ್ರೀಯನ್ನು ಆವಳಿಂದ ಬರೆಸ ಬೇಕು; ಅವಳ ಮಡಿಲಲ್ಲಿ ಮುಖವಿಟ್ಟು ಎಲ್ಲ ವನ್ನೂ ಮರೆಯಬೇಕು; ಕತ್ತಲಾದ ಮೇಲೆ ಅವಳ ತೋಳ ತೆಕ್ಕೆಯಲ್ಲಿ ಮೈಮರೆತು ಸಮಾಧಿ ಸ್ಥನಾಗಬೇಕು--ಎಂಬುದು ನನ್ನ ನಿರ್ಧಾರವಾಗಿತ್ತು.

ಆ ಕಲ್ಲು ಬೆಂಚು. ಅಲ್ಲಿಯೇ ಆರು ತಿಂಗಳ ಹಿಂದೆ ನಾನು ಮುರಲಿಯನ್ನು ಕಂಡಿದ್ದೆ. ಆ ಬಳಿಕ ವನಜಳನ್ನು....

ಆದೇ ಬೆಂಚಿನ ಮೇಲೆ ನನು ಕುಳಿತು ಸಿಗರೇಟಿಗೆ ಕೈಹಾಕಿದೆ. ಹಿಂದೊಮ್ಮೆ ವನಜ ಕೇಳಿದ್ದಳು:

"ನೀವು ಪ್ಲೇಯರ್ಸ ಯಾಕೆ ಸೇದ್ತೀರಾ? ಗೋಲ್ಡ್ ಪ್ಲೇಕ್ ಮೇಲಲ್ವಾ?" ಅದು 'ನೀವು' 'ನೀನು' ಆದುದಕ್ಕೆ ಮುಂಚೆ. ಆ ಮೇಲೆ ಅವಳೇ ಹೇಳಿದ್ದಳು:

"ಒಂದ್ಸಾರಿ ನಾನೂ ಸೇದ್ಬೇಕು. ಹೇಗಿರತ್ತೋ ನೋಡ್ಬೇಕು."

ಹಾಗೆ ಹೇಳಿದಾಗ, ಮಾದಕತೆ ಅವಳ ಕಣ್ಣಾಲ್ಲಿಗಳಲ್ಲಿ ತೇಲಿ ಬಂದಿತ್ತು....ಎಷ್ಟು ಕಠಿನ! ಈ ಬಾಳ್ವೆ ಎಷ್ಟೊಂದು ಕಠಿನ!

ನಿರ್ಮಲವಾದ ಆಕಾಶ, ನೆಮ್ಮದಿ ಇಲ್ಲದ ನನ್ನ ಹೃದಯವನ್ನು

ನೋಡಿ ನಗುತಿತ್ತು. ಸದ್ಯಃ ಮಳೆ ಬರಲಾರದು....ಓ ದೇವರೇ, ಸದ್ಯಃ ಮಳೆ ಬಾರದಿರಲಿ....

ದೇವರು ? ಎಲ್ಲವೂ ನನ್ನ ಕೈತಪ್ಪಿ ಹೋಗುತಿದ್ದುವು_ತಾವರೆ ಎಲೆಯ ಮೇಲಿನ ನೀರು ಗುಳ್ಳೆಯ ಹಾಗೆ. ನನಗಿಂತ ಹೆಚ್ಚು ಶಕ್ತಿವಂತರಾದವರು ಯಾರಾದರೂ ಅದನ್ನು ಹಿಡಿದು ನಿಲ್ಲಿಸಬಾರದೆ? ಈ ಲೋಕವನ್ನೆಲ್ಲಾ ತನ್ನ ಇಚ್ಛೆಯತೆ ಕುಣಿಸುತ್ತಿರುವನೆಂದು ಹೇಳ ಲಾದ ಆ ದೇವರು ನನಗೆ ನೆರವಾಗಬಾರದೆ?

ಅವರ ಕಾರು ಬಂತು. ಆದರೆ ವನಜ ಇಳಿದು ಬರಲಿಲ್ಲ. ಮುರಲಿಯೊಬ್ಬನೇ ನಡೆದು ನನ್ನೆಡೆಗೆ ಬಂದ. ಹಿಂದೆ ಅವನು ಆ ಬೆಂಚಿಗೆ ಒರಗಿ ಕುಳಿತಿದ್ದಾಗ ನಾನು ಬಂದಿದ್ದೆ. ಈಗ ಒರಗಿರು ವವನು ನಾನು-ಕಾಹಿಲೆಯವನು ನಾನು.

ಅವನು " ಹಲೋ " ಎನ್ನಲಿಲ್ಲ.

ನನ್ನ ಸಿಗರೇಟು ಸುಟ್ಟುಕೊಂಡು ಹೊಗೆಯ ಎಳೆ ಮೇಲಕ್ಕೆ ಏಳುತಿತ್ತು. ಅದನ್ನು ದೂರವೆಸೆದೆ.

" ಬಾ ಮುರಲಿ......."

ಅವನು ಕುಳಿತುಕೊಂಡು. ಸಾಕಷ್ಟು ರಕ್ತ ಸಂಚಾರವಿಲ್ಲದ ಅವನು ಮುಖದಿಂದ ಎಳೆಯ ಕಣ್ಣುಗಳೆರಡು ನನ್ನನ್ನೆ ದಿಟ್ಟಿಸಿದುವು. ಆ ದೃಷ್ಟಿಯಲ್ಲಿ ಕನಿಕರವಿತ್ತೊ ದ್ವೇಷವಿತ್ತೊ ನನಗೆ ತಿಳಿಯಲಿಲ್ಲ. ಕ್ಷೀಣವಾದ ಸ್ವರದಲ್ಲಿ ನಾನು ಕೇಳಿದೆ.

" ವನಜಾ ಬರಲಿಲ್ವಾ?"

" ಬರೋದಿಲ್ಲ.'

' ನನ್ನ ಕಾಗದ ಬಂತೇನು?"

"ಬಂತು. ವನಜಾ ಬರೋದಿಲ್ಲ. ಅದನ್ನ ಹೇಳೋದಿಕ್ಕೇ ನಾನು ಬಂದೆ."

"ಓ !......"

ಮುಂದೇನು ಹೇಳಬೇಕೋ ತೋಚಲಿಲ್ಲ. ತಡವರಿಸುತ್ತ ಜೇಬಿನೊಳಕ್ಕೆ ಕೈಹಾಕಿ ಇನ್ನೊಂದು ಸಿಗರೇಟು ತೆಗೆದೆ. ಮುರಲಿ ಮೌನವಾಗಿ, ನಡಗುವ ಬೆರಳುಗಳಿಂದ ನಾನು ಕಡ್ಡಿಗೀರಿದುದನ್ನು ನೋಡಿದ ......ನಿಮಿಷಗಳು ಯುಗಗಳಂತೆ ಕಳೆದುವು.

" ವನಜಾಗೆ ಮೈ ಚೆನ್ನಾಗಿಲ್ವೇನು?

ಯಾವುದೋ ಆಸೆಯ ಎಳೆ ಸಿಕ್ಕಿತೆಂಬಂತೆ ನಾನು ಹೇಳಿದೆ.

" ಚೆನ್ನಾಗಿಯೇ ಇದೆ. ಇಲ್ಲದೇನು?"

" ಮತ್ತೇ?"

ಆ ಪ್ರಶ್ನೆಗೆ ಊತ್ತರವಾಗಿ ಅವನಿಂದ ಮಾತುಗಳು ಹೊರಟುವು. ಪಾಠ ಒಪ್ಪಿಸುವವರಂತೆ ಅವನು ಮಾತನಾಡಿದ.

"ರಾಧಾಕೃಷ್ಣ ! ನೀವು ಇಂಥವರೂಂತ ನಮಗೆ ಗೊತ್ತಿರಲಿಲ್ಲ. ನೀವು ಹೇಗೆ ಮಾಡ್ಬಾರ್ದಾಗಿತ್ತು . ನೀವು ದೊಡ್ಡ ತಪ್ಪು ಮಾಡಿದಿರಿ. ನಾವು ಸುಖವಾಗಿಯೇ ಇದ್ದೆವಲ್ಲ? ಎಷ್ಟೊಂದು ಶಾಂತವಾಗಿತ್ತು! ನೀವು ಬಂದು ಎಂಥ ಅನ್ಯಾಯ ಮಾಡಿದಿರಿ! ನಮ್ಮ ವನಜಾ ಗತಿ ಇನ್ನೇನಾಗ್ಬೇಕು? .......ನಾನು ನಿಮ್ಮನ್ನ ಒಳ್ಳೆಯವರೂಂತ ತಿಳಿ ದಿದ್ದೆ_ ನಾಗರಿಕರು, ಸುಸಂಸ್ಕ್ರತರು, ಅಂತ . ಆದರೆ ನೀವು-ನೀವು_ ಹುಂ ! ನಮ್ತಂದೆ ಬಂದು ಹೇಳ್ದಾಗ ಹೇಗಾಯ್ತು ಗೊತ್ತೆ? ಓ ದೇವರೆ! ವನಜಾ ಅದನ್ನ ಸಹಿಸಿಕ್ಕೊಂಡಳು. ನಾನಾಗ್ಗಿದ್ದರೆ ತುಂಬ ಕಷ್ಟವಾಗಿತ್ತು.ಅದನ್ನೆಲ್ಲಾ ಸಹಿಸೋದು ನನ್ನಿಂದಾಗ್ತಲೇ ಇರ್ಲಿಲ್ಲ್ಲ. ನಾನು ಏನಾದರೂ ಮಾಡ್ಕೊಂಡು ಬಿಡ್ತಿದ್ದೆ. ಆದರೆ ವನಜ_"

" ವನಜ ಏನೆಂದಳು?"

ನನ್ನದಲ್ಲದ ಸ್ವರ ಮಾತನಾಡುತಿತ್ತು.

" ವನಜ, ಹುಂ ! ಏನನ್ಬೇಕು? ಇನ್ನು ನಿಮ್ಮ ಮೂಖ ನೋಡೋ ದಿಲ್ಲ ಅಂದಳು. ನಿಮ್ಮನ್ನ_ನಿಮ್ಮನ್ನ_"

" ಹೇಳು ಮುರಲಿ. ಹೇಳು."

" ನಿಮ್ಮನ್ನ ಬ್ರೂಟ್ ಅಂದಳು, ಲೋಫರ ಅಂದಳು. ಇನ್ನು ಮನೆಗೆ ಬಂದರೆ, ಒದ್ದು ಹೊರಹಾಕ್ತೀನಿ ಅಂದಳು!"

" ಓ!"

"ಆಕೆ ಧೈರ್ಯವಂತೆ ರಾಧಾಕೃಷ್ಣ-ನನ್ನ ಹಾಗಲ್ಲ."

"ಅಲ್ಲವೆ?"

"ನೀವು ಇನ್ನೂ ನಾಲ್ಕು ದಿನ ಅವಕಾಶ ಸಿಕ್ಕಿದ್ದರೆ ಅನಾಹುತ ಮಾಡ್ಬಿಡ್ತಿದ್ರಿ.......ಪಾಪ! ನನೂ ನಿಮಗಾಗಿ ಸೈಂಟಿಸ್ಟ್ ಆಗೋ ದನ್ನೂ ಬಿಟ್ಕೊಟ್ಟಿದ್ದಳು...ನಿಮಗೆ ಹೃದಯವಿಲ್ಲ."

"ವನಜಾ ಹಾಗಂದಳೆ?"

"ಇನ್ನು ನಮ್ಮನ್ನು ನೀವು ಏಕವಚನದಲ್ಲಿ ಕರೀಬೇಡಿ. ನಿಮಗೆ ಆ ಅಧಿಕಾರವಿಲ್ಲ."

"ಹೂಂ"

"ಒಂದಲ್ಲ ಒಂದಿವ್ಸ ನಿಮ್ಗೆ ಸರಿಯಾದ ಶಾಸ್ತಿ ಆಗತ್ತೇಂತ ಹೇಳೂಂತಂದ್ಲು. ಮಾಧವರಾಯರಲ್ದೇ ಹೋಗಿದ್ರೆ, ನಮ್ತಂದೆ ನಿಮ್ಮನ್ನ ಜೈಲಿಗೆ ಕಳಿಸ್ತಿದ್ರು.

" ಪುಟ್ಟ ಹುಡುಗೀನ. ಹಾರಿಸ್ಕೊಂಡು ಹೋಗೋಕೆ ಯತ್ನಿಸ್ದೆ ಅಂತಲೋ?"

"ಅದೇನೋ ನಮ್ತಂದೆ ಸಾಮಾನ್ಯರಲ್ಲ ರಾಧಾಕೃಷ್ಣ....."

ಎಲ್ಲವೂ ಕಹಿಕಹಿಯಾಗಿ ತೋರುತ್ತಿತ್ತು-ಎಲ್ಲವೂ! ಆತನ ಮಾತುಗಳೇ ನನಗೆ ಕೇಳಿಸುತ್ತಿರಲ್ಲಿಲ್ಲ. ನಾನು ಕಿವುಡನಾಗುತ್ತಿದ್ದೆ ನೇನೂ-ಕುರುಡನಾಗುತಿದ್ದೆನೇನೊ.

"ನಾನು ಕೂಡ ಬರ್ತಾ ಇರ್ಲಿಲ್ಲ.ವನಜಾನೇ ನನ್ನ ಕಳಿಸಿ ಕೊಟ್ಟವಳು. ಇಷ್ಟು ಹೇಳ್ಬಿಟ್ಟು ಬಾ ಅಂತಂದ್ಲು."

"ಸರಿ ಇನ್ನು.ಹೇಳಿದ್ದಾಯ್ತು ತಾನೆ?"

"ಮಾತೇ ಹೊರಡ್ಪೆ ಸುಮ್ಮನಿದ್ದೀರಲ್ಲ!"

"ಏನು ಹೇಳೋದಕ್ಕೂ ಇಷ್ಟಪಡೋಲ್ಲ."

"ಅಷ್ಟೇನೊ?"

"ಅಷ್ಟೆ, ಮುರಲೀಧರ್......"

ನಾನೆದ್ದು ನಿಂತೆ.ತಲೆ ಗಿರ್ ಎನ್ನುತಿತ್ತು. ಆದರು ಔಡು ಕಚ್ಚಿ ಕೊಂಡು ಕೇಳಿದೆ;

"ಟ್ಯಾಕ್ಸಿ ಗೀಕ್ಸಿ ಬೇಕೇನು ತಮಗೆ?"

ಆತನ ಕಣ್ಣುಗಳಲ್ಲಿ ಬಂಜೆ ಕ್ರೋಧ ಮಿನುಗಿತು.ಕುಳಿತಲ್ಲಿಂದ ಎದ್ದು, ಉತ್ತರವೀಯದೆ ಅವನು ಹೊರಟು ಹೋದ.

ಬಿರುಗಾಳಿಗೆ ಬುಡ ಸಹಿತ ಕಿತ್ತು ಹೋದ ಮರ... ಹರಿತ ವಾದ ಕತ್ತಿಗೆ ಸಿಕ್ಕಿ ಬರಿ ಮುಂಡವಾದ ಬಾಳೆ.....ಯಾರೋ ಕೊಯ್ದು ಹಿಚುಕಿದ್ದ ಬಿಳಿಯಗುಲಾಬಿ.....

ತತ್ತರಿಸುತಿದ್ದರೂ ನಾನು ಉಸಿರಾಡಲು ಯತ್ನಿಸಿದೆ.

ಮನಸಿನ ಕಾಹಿಲೆ ದೇಹದ ಕಾಹಿಲೆಯಾಗಿ ಮಾರ್ಪಟ್ಟ ಆ ಅನುಭವ. ಆಗ ನಾನು ಕೊರಡಿನಂತೆ ಬಿದ್ದಿರುತಿದ್ದೆ,ಘಂಟೆ ಘಂಟೆ ಗಳ ಕಾಲ. ಮೈ ಕಾವೇರುತಿತ್ತು ಆರುತಿತ್ತು. ನಾಲಿಗೆಗೆ ರುಚಿ ಇರಲಿಲ್ಲ.ಬದುಕುವುದರಿಂದ ಏನು ಪ್ರಯೋಜನವಿತ್ತು? ಸಾವು ಸದ್ದಿಲ್ಲದೆ ಬಂದು ಕಣ್ಣೆವೆಗಳನ್ನು ಮೆಲ್ಲನೆ ಮುಚ್ಚಿದ್ದರೆ ನಾನು ಬೇಡ ವೆನ್ನುತ್ತಿರಲಿಲ್ಲ. ಇಪ್ಪತ್ತಾರು-ಎಪ್ಪತ್ತೇಳನೆಯ ಆ ವಯಸ್ಸಿನಲ್ಲಿ ಮೊದಲ ಮರಣ ದಾಹ....

ನಾನು ಸಾಯಲಿಲ್ಲ. ಸಾಯುವುದರಲ್ಲಿ ಅರ್ಥವಿರಲಿಲ್ಲ.

ಹೃದಯ ತೋಡಿಕೊಂಡು ದೀರ್ಘ ಕಾಗದವೊಂದನ್ನು ವನಜ ಳಿಗೆ ಬರೆದೆ. ಆದರೆ ಅದನ್ನು ಅಂಚೆಗೆ ಸೇರಿಸಲಿಲ್ಲ; ಕಳುಹಿಕೊಡಲಿಲ್ಲ. ಅವರ ಅಡುಗೆಯ ಹುಡುಗನನ್ನು ಕಂಡು ಮಾತನಾಡಿಸಬೇಕೆಂದು ತರಕಾರಿಯ ಮಾರುಕಟ್ಟೆಯಲ್ಲಿ ಕಾದುನಿಂತೆ. ಹುಡುಗ ಬರುತಲಿದ್ದ; ನಾನು ಅವನನ್ನು ನೋಡುತ್ತಲೂ ಇದ್ದೆ; ಆದರೆ ಮಾತನಾಡಿಸಲಿಲ್ಲ ಮಾತ್ರ. ಆ ಬಳಿಕ ಸ್ವತಃ ನಾನೇ ವನಜಳನ್ನು ಕಾಣಬೇಕೆಂದು ಎರಡು ಬಾರಿ ಆ ಮನೆಯಿದೆ ಪ್ರದೇಶಕ್ಕೆ ಹೋದೆ. ಆದರೆ ಮನೆಯನ್ನು ಮಾತ್ರ ಸಮಿಪಿಸಲಿಲ್ಲ.

ದಿನವೂ ಬ್ಲೇಡು ಕಾಣುತ್ತಿದ್ದ ಗಲ್ಲಗಳು ದೊರಗು ಗಡ್ಡದಿಂದ ಮುಚ್ಚಿಕೊಂಡುವು. ಕ್ರಾಪು ಅಸ್ತವ್ಯಸ್ತವಾಗಿ ಅಂದಗೆಟ್ಟಿತು. ಬಟ್ಟೆ ಬರೆಗಳು ಮಲಿನವಾದುವು.

ಚಲಂ ಬಳಗದವರು ಕೇಳುತಿದ್ದರು:

"ಏನಾಗಿದೆ ಶೇಖರ್ ? ಏನಾಗಿದೆ ಬಾಷಾ ? ಮೈ ಚೆನಾ

ಗಿಲ್ವಾ__ಏನಾಗಿದೆ?"

ಅದೊಂದು ಕಾಹಿಲೆ; ಏನಾಗಿದೆ ಎಂದು ಬೇರೆಯವರಿಗೆ ವಿವರಿಸ ಲಾಗದಂತಹ ಕಾಹಿಲೆ.

ಪ್ರಾಯಶಃ ಚಲಂ ಮೇಲಿನ ವ್ಯವಹರಣೆಯಲ್ಲದೆ ಹೋಗಿದ್ದರೆ ನನಗೆ ಏನಾಗುತಿತ್ತೋ ಹೇಳಲಾರೆ. ಆದರೆ ಸದ್ಯಃ ನನ್ನ ಹಿರಿಯ ಸೋದರನಂತಿದ್ದ ಒಬ್ಬನ ರಕ್ಷಣೆಯ ಕೆಲಸದ ನಡುವೆ ನಾನು ಬದುಕಿ ಉಳಿದೆ. ಸಾವಿತ್ರಿಯ ಆಭರಣಗಳು ಸರಾ‍ಘಕಟ್ಟೆ ಸೇರಿದುವು. ವಕೀ ಲರ ಕರಿಯ ಕೋಟನ ಚೀಲಗಳು ತುಂಬಿದುವು. ವಿಚಾರಣೆ ನಡೆ ಯಿತು.

ನ್ಯಾಯಾಸ್ಥಾನಗಳ ಈ ವಿಚಾರಣೆಯ ಬಗ್ಗೆ ನಾನು ಬರೆಯ ಬಾರದು. ಆಲ್ಲಿ ವಿಚಾರಣೆ ಎಂಬುದು ಒಂದು ದೊಡ್ಡ ತಮಾಷೆ. ಕರಿಯ ಕೋಟು ಧರಿಸಿದವರು, ತಮ್ಮದು ಬಿಳಿಯ ಕೋಟೆಂದು ಅಲ್ಲಿ ಸಾಧಿಸುತಿದ್ದರು. ಬಿಳಿಯ ರುಮಾಲು ಹೊತ್ತಿದ್ದವರು, ತಮ್ಮ ರುಮಾಲು ಕರಿಯದೆಂದು ಹಟತೊಡುತಿದ್ದರು. ಮಟಮಟ ಮಧ್ಯಾಹ್ನವನ್ನು ನಡುರಾತ್ರೆಯೆಂದು ಪ್ರಮಾಣ ಬದ್ಧವಾಗಿ ಪ್ರತಿಪಾದಿಸುವ ಅವರ ವೈಖರಿ! "ದೇವರಾಣೆಯಾಗಿ ಸತ್ಯ ಹೇಳ್ತೀನಿ" ಸಾಕ್ಷಿಗಳು ಬೇರೆ!.. ....ನಾನು, ಚಲಂ ವಿಚಾರಣೆ ಯಾಗುತ್ತಿದ್ದಾಗ ನ್ಯಾಯಾಸ್ಥಾನಕ್ಕೆ ಹೋಗುತ್ತಿರಲಿಲ್ಲ. ಆದರೆ ಆ ಆಸ್ಥಾನದೊಳಗಿನ ನಾಟಕವೆಲ್ಲ ಇಂಥದೇ ಎಂದು ನನಗೆ ತಿಳಿದಿತ್ತು.

ಆ ಅವಧಿಯಲ್ಲಿ ಚಲಂ ಬಳಗ ಮೆಲ್ಲಮೆಲ್ಲನೆ ಕರಗಿ ಹೋದು ದನ್ನು ನಾನು ಕಂಡೆ.

ಮೂರು ತಿಂಗಳಲ್ಲೆ ತೀರ್ಪು ಹೊರಬಿತ್ತು. ಏಳು ವರ್ಷ ಮತ್ತು ಐದು ವರ್ಷ__ಒಟ್ಟು ಹನ್ನೆರಡು ವರ್ಷಗಳ ಸಶ್ರಮ ಸಜೆಯನ್ನು ಚಲಂಗೆ ವಿಧಿಸಿದ್ದರು

ನಾನ್ನು ವಕೀಲ ಮಾಧವರಾಯರನ್ನು ಕಾಣಲು ಮತ್ತೆ ಹೋಗ ಲಿಲ್ಲ. ಸತ್ಯದ ನ್ಯಾಯದ ಹೆಸರಿನಲ್ಲಿ ಭರ್ಜರಿಯಾಗಿ ದಕ್ಷಿಣೆ ಪಡೆದು ತಮ್ಮ ಕೆಲಸವನ್ನು ಅವರು ಮಾಡಿದ್ದರು.

.......ಚಲಂನನ್ನು ನಂಬಿಕೊಂಡು ನಮ್ಮೂರಿಗೆ ಬಂದಿದ್ದ ಆ ಸಾವಿತ್ರಿಯ ಕೊನೆಯ ಭೇಟಿ....... ಗಂಟು ಮೂಟೆ ಕಟ್ಟಿಕೊಂಡು ಮಗನನ್ನೆತ್ತಿಕೊಂಡು ಕಣ್ಣೀರಿನ ಎರಡು ಕಾಲಿವೆಗಳನ್ನು ಹರಿಯ ಬಿಡುತ್ತಾ ಅವಳು ನಿಂತಿದ್ದಳು....

"ಬರ್ತೀನಪ್ಪಾ..... ಆತ ದೇವರ ಹಾಗಿದ್ದ ....... ಆತನನ್ನೇ ನಂಬಿದ್ದೆ..... ಇದು ಅವನು ಕೊಟ್ಟುಹೋದ ಸಂತಾನ..... ಇನ್ನು ಯಾರು ಗತಿ ನನಗೆ? ಯಾರು ಗತಿ?"

"ಅಮ್ಮಾ ಈ ಊರು ಇಷ್ಟವಾದರೆ ಇಲ್ಲೇ ಇರು. ಚಲಂ ಬರು ವರೆಗೂ ನಿನಗೆ ಯಾವ ತೊಂದರೆಯೂ ಆಗದ ಹಾಗೆ ನೋಡ್ಕೋ ತೀನಿ."

ಅದು ಔಪಚಾರಿಕವಾಗಿ ನಾನು ಹೇಳಿದ ಮಾತು......... ಆದರೆ ಹೃದಯ ಬೇರೆಯೇ ಹೇಳುತಿತ್ತು:

"ನಿನಗೆ ಇದೊಂದೂ ಬೇಡ........... ಹೇಗೋ ಒದಗಿ ಬಂದಿದೆ...... ಇದು ಇಲ್ಲಿಗೇ ಕೊನೆಗಾಣಲಿ....."

ಸಾವಿತ್ರಿ, ಕಣ್ಣೀರೊರೆಸಿಕೊಳ್ಳುತ್ತಾ ಹೇಳಿದಳು:

"ಬೇಡವಪ್ಪಾ........ ಮದರಾಸಿಗೇ ಹೋಗ್ತೀನಿ..... ಗುರುತಿ ನವರಿದ್ದಾರೆ...."

ಮದರಾಸು__ಗುರುತಿನವರು__....ನಾನು ನೆಟ್ಟ ದೃಷ್ಟಿಯಿಂದ ಅರೆಕ್ಷಣ ಅವಳನ್ನು ನೋಡಿದೆ. ಈ ಹೆಣ್ಣು ಧರ್ಮದ ಹಾದಿಯಲ್ಲೆ ಸಾಗಿ ದುಡಿದು ಆ ಮಗನನ್ನು ದೊಡ್ಡವಳಾಗಿ ಮಾಡುವಳೆಂಬುದು ಅರ್ಥವಿಲ್ಲದ ಮಾತು. ಆದರೆ ಧರ್ಮದ ಹಾದಿ ಯಾವುದು? ಧರ್ಮ ವೆಂದರೇನು?

"ನನ್ನ ಮರೀಬೇಡಿ ಅಕ್ಕಾ.....ಅಕ್ಕಾ...."

ಆ ಸಾವಿತ್ರಿ ಹೊರಟುಹೋದಳು.

ಎಲ್ಲವೂ ಬರಿದು ಬರಿದಾಗಿತ್ತು ನನ್ನೆದುರು...... ಹೆಜ್ಜೆಹೆಜ್ಜೆಗೂ ನನ್ನನ್ನು ಇದಿರಿಸುತ್ತಿದ್ದ ಶೂನ್ಯ.

ತಂದೆ ಸತ್ತಾಗಲೊಮ್ಮೆ: ಅಜ್ಜಿ ಸತ್ತಾಗಲೊಮ್ಮೆ: ಆ ಬಳಿಕ

ಈಗ.

ಈ ಸಾರೆ ಬೇರೆ ಯಾರೂ ಸತ್ತಿರಲಿಲ್ಲ. ನಾನೇ ಸತ್ತಿದ್ದೆ.

ನಾನೇ ಸತ್ತು ಬದುಕಿದ್ದೆ.

ಸತ್ತು ಬದುಕಿದ ಮೇಲಿನ ಆ ಜೀವನ................

ನೆನಪುಗಳನ್ನು ಕೊಂದು ಮಣ್ಣು ಮಾಡಿ ತೆರೆದ ಇನ್ನೊಂದು

ಅಧ್ಯಾಯ.................