ಪ್ರಥಮಾಶ್ವಾಸ. ಪೊಡವಿಪರಿವರಾರಲ್ಲಿಗೆ | ನಡೆದೊಯ್ಯನೆ ತಿಳಿವುದೆಂದು ಹನುಮಗೆ ಪೇಳ್ತಂ 11 ೨೯ ) ಧರೆಗಿಳಿದರೊ ರವಿಶಶಿಗಳ್ | ಸುರಪನ ಸುತನೆನ್ನನೈದೆ ಕೊಲ್ಲೊಡೆ ಭಟರಂ ! ಕರಸಿರ್ಪನೊ ತನಗೆ ಭಯಂ | ಭರಿತಮದಾಗುತ್ತಮಿರ್ಪುದೇನೈ ಹನುಮಾ | || ೩೦ } ಶರಚಾಪಗಳಿವೆ ಕಯೋಳ್ || ಧರಿಸಿರ್ಪಜ್ರಡೆಯನಿರ್ವರುರೆ ಜವ್ವನಿಗರ್ || ನರರಲ್ಲಿವರೀ ಭೂಮಿಯ | ಪೊರೆಯಂ ಕಳೆಯಲ್ಲಿ ಬಂದ ಹರಮಾಧವರೋ || ೨೫೦ | ತಿಳಿಯದಿದೆನಗನಿಲಾತ್ಮಜ 1 ತಿಳಿವೊಡೆ ವಟುರೂಪನಾಂತು ಮೊದಲವರಿರವಂ || ತಿಳಿದುಂ ಮತ್ತವನುರೆ || ತಿಳಿಸುಗುಮವರೊಡನೆ ಮಿತ್ರರಾದೊಡೆ ಭರದಿಂ ! ೩೨ | ಇಂತೆನೆ ರವಿಜಂ ಮಾರುತಿ || ಸಂತಸಮಂ ತಾಳು ಮಾನುಷಾಕೃತಿಯಿಂದಂ || ಕಂತುಸಮಾನರ ಪೊರೆಗಂ | ತಾಂ ತಳುವದೆ ಬಂದು ನಿಂದು ನೋಡಿದನವರಂ || ೩೩ || ರಾಮನೆ ಪರದೈವವಲಾ ! ಸೌಮಿತ್ರಿಯೆ ಶೇಷನಲ್ಲೆ ಮನುಜಾಕೃತಿಯಿಂ || ಭೂಮಿಯ ಪೊರೆಯಂ ತಿರ್ದ್ದುವೊ | ಡೀ ಮಹಿಗಂ ಬಂದರೆಂದು ತಿಳಿದಂ ಹನುಮಂ \\ ೩೪ {| ಮಾತೆಯ ನುಡಿ ದಿಟವಾದುದು | ಪೂತಾತ್ಮಕನಾದೆನಿವರ ದರುಶನದಿಂದಂ || ಧಾತಂ ರಾಮನೆನುತ್ತಂ || ವಾತಸುತಂ ರಾಮನಂಘ್ರಗಾನತನಾದಂ \ ೩೫ | ಮಗುಮಗುಳೆ ತುಳಿಲ್ಗೆಯ್ಯುಂ || ಜಗದುದರ ಜಗನ್ನಿವಾಸ ಜಗದಧಿನಾಥಾ || ತ್ರಿಗುಣಾತ್ಮಕ ತ್ರಿದಶಾರ್ಚಿತ | ಖಗವಂಶಲಲಾಮ ರಾಮ ಶರಣಾಗೆಂದಂ &೬
ಪುಟ:ಹನುಮದ್ದ್ರಾಮಾಯಣಂ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.