ವಿಶ್ವವಿನೂತನ ವಿದ್ಯಾಚೇತನ

ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ

ಜಯಭಾರತಿ, ಕರುನಾಡ ಸರಸ್ವತಿ

ಗುಡಿಗೋಪುರ ಸುರಶಿಲ್ಪ ಕಲಾಕೃತಿ

ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ.

ವಿಶ್ವವಿನೂತನ||೧||


ಗಂಗ, ಕದಂಬಾ, ರಾಷ್ಟ್ರಕೂಟ ಬಲ

ಚಲುಕ್ಯ, ಹೊಯ್ಸಳ,ಬಲ್ಲಾಳ

ಹಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ

ಚೆನ್ನಮ್ಮಾಜಿಯ ವೀರಶ್ರೀ.

ವಿಶ್ವವಿನೂತನ||೨||


ಆಚಾರ್ಯತ್ರಯ ಮತಸಂಸ್ಥಾಪನ

ಬಸವಾಲ್ಲಮ ಅನುಭಾವ ನಿಕೇತನ

ಶರಣ, ದಾಸ, ತೀರ್ಥಂಕರ ನಡೆ-ನುಡಿ ವಿಶ್ವತಮೋಹಾರಿ.

ವಿಶ್ವವಿನೂತನ||೩||


ಪಂಪ, ರನ್ನ, ನೃಪತುಂಗ, ಹರೀಶ್ವರ

ರಾಘವಾಂಕ, ಸರ್ವಜ್ಞ, ಪುರಂದರ

ಕುವರವ್ಯಾಸ, ರತ್ನಾಕರ, ಜನಪದ ಕಾವ್ಯ ಸಮುದ್ರವಿಹಾರಿ.

ವಿಶ್ವವಿನೂತನ||೪||


ಸಾಯಣ, ವಿದ್ಯಾರಣ್ಯ, ಭಾಸ್ಕರ

ಮಹಾದೇವಿ, ಮುಕ್ತಾಯಿ ಮಹಂತರ,

ಕಂತಿ-ಹಂಪ, ಸುಮನೋರಮೆ-ಮುದ್ದಣ

ಸರಸ ಹೃದಯ ಸಂಚಾರಿ.

ವಿಶ್ವವಿನೂತನ||೫||


ತ್ಯಾಗ-ಭೋಗ-ಸಮಯೋಗದ ದೃಷ್ಟಿ

ಬೆಳುವೊಲ, ಮಲೆ, ಕರೆ, ಸುಂದರ ಸೃಷ್ಟಿ

ಜ್ಞಾನದ, ವಿಜ್ಞಾನದ, ಕಲೆಯೈಸಿರಿ,

ಸಾರೋದಯ ಧಾರಾನಗರಿ.

ವಿಶ್ವವಿನೂತನ||೬||


ಅರಿವೇ ಗುರು, ನುಡಿ ಜ್ಯೋತಿರ್ಲಿಂಗ,

ದಯವೇ ಧರ್ಮದ ಮೂಲ ತರಂಗ

ವಿಶ್ವಭಾರತಿಗೆ ಕನ್ನಡದಾರತಿ,

ಮೊಳಗಲಿ ಮಂಗಲ ಜಯಭೇರಿ.

ವಿಶ್ವವಿನೂತನ||೭||

Title
Author ಚೆನ್ನವೀರ ಕಣವಿ
Source _empty_
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])

ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ವಿಶ್ವವಿನೂತನ…………………….|