Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ವಿಷಯವೆಂಬ ಕಾಳಗಿಚ್ಚಿನ ಜ್ವಾಲೆಯಲ್ಲಿ ಈರೇಳುಲೋಕವೆಲ್ಲ ಹತವಾಗುತಿರ್ಪುದು ನೋಡಾ ! ಅದೆಂತೆಂದೊಡೆ : ಕುಂಡಲಿಯೆಂಬ ಮಾಯಾಸರ್ಪನು ತನ್ನ ಬಾಲವ ಬ್ರಹ್ಮರಂಧ್ರಕ್ಕೇರಿಸಿ
ನಾಭಿಚಕ್ರವ ಸುತ್ತಿಕೊಂಡು
ಅಧೋಮುಖವಾಗಿ ಇಂದ್ರಿಯವಿಷವ ಕಾರುತಿಪ್ಪುದು ನೋಡಾ ! ಆ ವಿಷದ ನಂಜು ತಲೆಗೇರಿದಲ್ಲಿ ಅಸಿಯಜವ್ವನೆಯರ ಸಂಗಸುಖ ಬಹುಸವಿಯೆಂದು ತಲೆದೂಗುತ್ತಿಪ್ಪುದು ನೋಡಾ ಸಕಲ ಪ್ರಾಣಿಗಳು. ಇದು ಪಶುಪತಿಯುಮಾಡಿದ ಮಾಯದ ವಿಧಿಯೆಂದು ತಿಳಿಯದೆ ಹಸಗೆಟ್ಟುಹೋಯಿತ್ತು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.