ವೀರಧಾರುಣಿಯೊಳಗೆ ನಾರಿ ಶೃಂಗಾರವ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ವೀರಧಾರುಣಿಯೊಳಗೆ
ನಾರಿ
ಶೃಂಗಾರವ
ಮಾಡಿ
ಈರೇಳು
ಭುವನವ
ಅಮಳೋಕ್ಯವ
ಮಾಡಿ
ಬಿಂದು
ಶಕ್ತಿಯ
ಭೇದ
ಸಂದ
ಯೋಗದ
ಸುಖವ
ತಂದು
ಮೂರ್ತಿಗೊಳಿಸಿದವರಾರು
?
ಒಂದೆರಡರ
ನುಡಿಯ
ಮತ್ತೊಂದು
ಗ್ರಹಿಸಿತ್ತ
ಕಂಡೆ.
ಬಿಂದುವಿನ
ರಸದ
ಪರೀಕ್ಷೆಯ
ಭೇದವ
ಚಂದ್ರಕಾಂತದ
ಗಿರಿಗೆ(ಯ?)
ಅರುಣ
ಚಂದ್ರರೊಡನೆ
ಇಂಬಿನಲ್ಲಿಪ್ಪ
ಪರಿಯ
ನೋಡಾ
!
ಅಂಗೈಯ
ತಳದೊಳು
ಮೊಲೆ
ಕಂಗಳಲ್ಲಿ
ಕರಸನ್ನೆ
ಇಂಬಿನಲ್ಲಿ
ನೆರೆವ
ಸುಖ
ಒಂದೆ
!
ಆದಿ
ಅನಾದಿಯ
ಪ್ರತಿಬಿಂಬ
ಇಂದೆನಗೆ
ತೋರಿತ್ತು.
ಗುಹೇಶ್ವರನ
ಶರಣ
ಚೆನ್ನಬಸವಣ್ಣಂಗೆ
ಶರಣೆನುತಿರ್ದೆನು.