ವೇದಾಂತಿಗಳಂತೆ ಜ್ಞಾನಬದ್ಧರಲ್ಲ ಮುನಿಗಳಂತೆ ಕ್ರಿಯಾಬದ್ಧರಲ್ಲ ಸಾಧಕರಂತೆ ಕಾರ್ಯಬದ್ಧರಲ್ಲ. ಜ್ಞಾನಕ್ರಿಯಾಕಾರ್ಯಗಳಲ್ಲಿ ಕೂಡಲಚೆನ್ನಸಂಗನ ಶರಣರು ನಿರತರು ಕಾಣಾ ಸಿದ್ಧರಾಮಯ್ಯಾ.