ವೇದ ಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸಂಗಳ ಓದಿ ಕೇಳಿ ಹೇಳುವಾತ ಜಾಣನೆ ? ಅಲ್ಲಲ್ಲ. ಜಾತಿಗೊಂದು ಮಾತು ಕಲಿತು ಸರ್ವರಿಗೆ ನೀತಿ ಹೇಳುವಾತ ಜಾಣನೇ ? ಅಲ್ಲಲ್ಲ. ಮತ್ತಾರು ಜಾಣರೆಂದಡೆ : ಮತ್ತಮತಿಯೆಂಬ ಕತ್ತಲೆಯ ಕಳೆದು
ತಥ್ಯಮಿಥ್ಯ ರಾಗದ್ವೇಷವನಳಿದು ನಿತ್ಯ ಲಿಂಗದಲ್ಲಿ ಚಿತ್ತವಡಗಿರ್ಪ ಚಿನ್ಮಯಶರಣನೇ ಜಾಣನಯ್ಯಾ ಅಖಂಡೇಶ್ವರಾ.