ಶಂಕಿನಿನಾಡಿಯ ಸಪುರನಾಳದೊಳಗಣ ಸಣ್ಣ ಬಣ್ಣದ ಹೊಲಬ ಅಣ್ಣಗಳೆತ್ತ ಬಲ್ಲರು ? ಲಿಂಗದ ಹಂಗಿನ ಪ್ರಾಣ ಪ್ರಾಣದ ಹಂಗಿನ ದೇಹ ದೇಹದ ಹಂಗಿನ ಲಿಂಗವ ಲಿಂಗವೆಂದು ಪೂಜಿಸಲು;_ ಆಳಿನಾಳಿನ ಕೀಳಾಳು ಪಟ್ಟಕ್ಕೆ ಸಲುವನೆ ? ಗುಹೇಶ್ವರನೆಂಬ ಸಹಜದ ನಿಲವು ಸಂತೆಯ ಪಸರಕ್ಕೆ ಬಂದಡೆ ನಾಚಿತ್ತೆನ್ನ ಮನವು !