ಶಿವಭಕ್ತರ ರೋಮನೊಂದಡೆ, ಶಿವನು


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಶಿವಭಕ್ತರ ರೋಮನೊಂದಡೆ
ಶಿವನು ನೋವ ನೋಡಾ. ಶಿವಭಕ್ತರು ಪರಿಣಾಮಿಸಿದಡೆ
ಶಿವನು ಪರಿಣಾಮಿಸುವ ನೋಡಾ. ಭಕ್ತದೇಹಿಕದೇವನೆಂದು ಶ್ರುತಿ ಹೊಗಳುವ ಕಾರಣ
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು ನೋಡಾ. ತಾಯಿನೊಂದಡೆ ಒಡಲಶಿಶು ನೋವತೆರನಂತೆ
ಭಕ್ತರು ನೊಂದಡೆ ತಾ ನೋವ ನೋಡಾ ಚೆನ್ನಮಲ್ಲಿಕಾರ್ಜುನ.