ಶಿವಭಕ್ತಿಯೆ ಶಿವಾನುಗ್ರಹಕ್ಕೆ ಕಾರಣವಾಗಿರ್ಪುದು


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಶಿವಭಕ್ತಿಯೆ ಶಿವಾನುಗ್ರಹಕ್ಕೆ ಕಾರಣವಾಗಿರ್ಪುದು ನೋಡಾ. ಶಿವಾನುಗ್ರಹವೆ ಇಹಪರ ಸುಖಕ್ಕೂ ಪರಮಾನಂದ ಪ್ರಾಪ್ತಿಗೂ ಕಾರಣವಾಗಿರ್ಪುದು ನೋಡಾ. `ಯೋಗೇನ ತು ಪರಾಭಕ್ತಿಃ ಪ್ರಸಾದಸ್ತದನಂತರಂ ಪ್ರಸಾದಾನ್ಮುಚ್ಯತೇ ಜಂತುರ್ಮುಕ್ತಶ್ಶಿವಸಮೋ ಭವೇತ್ ಎಂದಿಹುದನಾರಯ್ಯದೆ
ಎನ್ನ ನಂಬುಗೆ ಎನ್ನ ಕಟ್ಟು ಕ್ರಿಯಾದಿಗಳಿಂದ ಸರ್ವಸುಖ ಪಡೆವೆನೆಂಬ ಜೀವಭಾವದ ಹಮ್ಮಿನ ಬಿಮ್ಮುಹತ್ತಿ ಮುಂದುಗಾಣದ ಮಂದಮತಿಗೆ ಮೆಚ್ಚುವರೆ ಕೂಡಲಚೆನ್ನಸಂಗಯ್ಯನ ಶರಣರು ?