ಶಿವಶಕ್ತಿಸಂಪುಟವಿಹೀನ ಲಿಂಗ ಹಾನಿವೃದ್ಧಿಯಿಲ್ಲದುದೆ ಜಂಗಮ. ಜಾಗ್ರದಲ್ಲಿ ಕುರುಹು ಸ್ವಪ್ನದಲ್ಲಿ ಆಕೃತಿ. ನೆರೆ ಅರಿತ ಅರಿವು ಹಿರಿದುಕಿರಿದೆನ್ನದ ಸಜ್ಜನ ಶುದ್ಧಶಿವಾಚಾರ ಕೂಡಲಚೆನ್ನಸಂಗಾ ಲಿಂಗೈಕ್ಯವು.