ಶಿವ
ಗುರುವೆಂದು ಬಲ್ಲಾತನೆ ಗುರು. ಶಿವ
ಲಿಂಗವೆಂದು ಬಲ್ಲಾತನೆ ಗುರು. ಶಿವ
ಜಂಗಮವೆಂದು ಬಲ್ಲಾತನೆ ಗುರು. ಶಿವ
ಪ್ರಸಾದವೆಂದು ಬಲ್ಲಾತನೆ ಗುರು. ಶಿವ
ಆಚಾರವೆಂದು ಬಲ್ಲಾತನೆ ಗುರು._ ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾ ಮಹಿಮ ಸಂಗನಬಸವಣ್ಣನು
ಎನಗೆಯೂ ಗುರು
ನಿನಗೆಯೂ ಗುರು
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.