ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ ಏನೆಂಬೆನಯ್ಯ ಎರಡಿಲ್ಲದ ಘನವ ? ಏನೆಂಬೆನಯ್ಯ ಎರಡೊಂದಾದ ಘನವ ! ಕೂಡಲಚೆನ್ನಸಂಗನಲ್ಲಿ ಗುರುಶಿಷ್ಯಸಂಬಂಧವಪೂರ್ವ.