ಶೀಲಶೀಲವೆಂದೇನೊ
ಪಿಂಡ ಬ್ರಹ್ಮಾಂಡ ಸಂಯೋಗವಾಗದನ್ನಕ್ಕರ ? ಅಷ್ಟತನುವಿನ ಗುಣಧರ್ಮವನರಿದು ಬಿಡದನ್ನಕ್ಕರ ? ಅಕ್ರೋಧ ಸತ್ಯವಚನ ಸಾವಧಾನ ವ್ರತಾನುಗ್ರಹವಾಗದನ್ನಕ್ಕರ ? ``ಅಕ್ರೋಧಃ ಸತ್ಯವಚನಂ ಸಾವಧಾನೋ ದಮಃ ಕ್ಷಮಾ ಅನುಗ್ರಹಶ್ಚ ದಾನಂ ಚ ಶೀಲಮೇವ ಪ್ರಶಸ್ಯತೇ ' ಎಂದುದಾಗಿ
ಕೂಡಲಚೆನ್ನಸಂಗಮದೇವಯ್ಯಾ
ಶೀಲವೆಂಬುದು ಅಪೂರ್ವ.