ಶೂನ್ಯವ ನುಡಿದು ದುರ್ಗತಿಗಿಳಿದವರ ಅದ್ವೈತವ ನುಡಿದು ಅಹಂಕಾರಿಗಳಾದವರ ಬ್ರಹ್ಮವ ನುಡಿದು ಭ್ರಮಿತರಾದವರ ತ್ರಿಕಾಲ ಲಿಂಗಪೂಜೆಯ ಮಾಡದವರ ಬ್ರಹ್ಮದ ಅನವರತ ಮಾತ ಕೇಳಿ ಹಿಡಿದ ವ್ರತನೇಮಗಳ ಬಿಡುವವರ_ ಈ ದುರಾಚಾರಿಗಳ ಮೆಚ್ಚ ಕೂಡಲಚೆನ್ನಸಂಗಾ ನಿಮ್ಮ ಶರಣ.