ಶೃಂಗಾರಾದಿ ನವರಸ ರಸಿಕನಾದಹೆನೆಂಬವ ನವಖಂಡಮಂಡಲಾಧಾರದಲ್ಲಿ ಕರ ಚಂಡನಾಗದೆ ನವವಿಧ ಬಂಧನಕ್ಕೊಳಗಾಗದೆ ನವನಾಳದಲ್ಲಿ ಕಳಾಹೀನನಾಗದೆ ಇಂತೀ ನವಸಂಪಾದನೆ ಮೂವತ್ತಾರು ಪ್ರಕಾರಂಗಳು ಪ್ರಾಣಲಿಂಗಕ್ಕೆ ಸಲುವರನರಿತು ಸಲಿಸುವದು ಸಲ್ಲದಿದ್ದಡೆ ತನಗಾಗಿ ಚಿಂತಿಸಲಾಗದು ಕೂಡಲಚೆನ್ನಸಂಗಮದೇವಾ