ಶ್ರೀ ಗುರುಲಿಂಗ ತ್ರಿವಿಧ:ದಿಕ್ಷಾಗುರು,


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಶ್ರೀ ಗುರುಲಿಂಗ ತ್ರಿವಿಧ:ದಿಕ್ಷಾಗುರು
ಶಿಕ್ಷಾಗುರು
ಜ್ಞಾನಗುರು. ಶಿವಲಿಂಗ ತ್ರಿವಿಧ:ಕ್ರಿಯಾಲಿಂಗ
ಜ್ಞಾನಲಿಂಗ
ಭಾವಲಿಂಗ. ಜಂಗಮಲಿಂಗ ತ್ರಿವಿಧ:ಸ್ವಯ ಚರ ಪರ-ಇಂತು ಆಚಾರಲಿಂಗ ಸ್ಥಲ 9. ಆಗಮಲಿಂಗ ತ್ರಿವಿಧ:ಕ್ರಿಯಾಗಮ
ಭಾವಾಗಮ
ಜ್ಞಾನಾಗಮ ಕಾಯಲಿಂಗ ತ್ರಿವಿಧ:ಸಕಾಯ
ಆಕಾಯ
ಪರಕಾಯ. ಆಚಾರಲಿಂಗ ತ್ರಿವಿಧ:ಧರ್ಮಾಚಾರ
ಭಾವಾಚಾರ
ಜ್ಞಾನಾಚಾರ. ಇಂತು ಗುರುಲಿಂಗ ಸ್ಥಲ 9 _ಉಭಯಸ್ಥಲ 18. ಅನುಗ್ರಹಲಿಂಗ ತ್ರಿವಿಧ:ಕಾರ್ಯಾನುಗ್ರಹ
ಇಂದ್ರಿಯಾನುಗ್ರಹ
ಪ್ರಾಣಾನುಗ್ರಹ. ಅರ್ಪಿತಲಿಂಗ ತ್ರಿವಿಧ:ಕಾಯಾರ್ಪಿತ
ಕರಣಾರ್ಪಿತ
ಭಾವಾರ್ಪಿತ. ತನುಗುಣಲಿಂಗ ತ್ರಿವಿಧ:ಶಿಷ್ಯ
ಶುಶ್ರೂಷ
ಸೇವ್ಯ. ಇಂತು ಸ್ಥಲ 9 _ತೃತೀಯ ಸ್ಥಲ 27. ಒಲವುಲಿಂಗ ತ್ರಿವಿಧ:ಜೀವಾತ್ಮ
ಅಂತರಾತ್ಮ
ಪರಮಾತ್ಮ. ನಿರೂಪಲಿಂಗ ತ್ರಿವಿಧ:ನಿರ್ದೇಹಾಗಮ
ನಿರ್ಭಾವಾಗಮ
ನಷ್ಟಾಗಮ. ಪ್ರಸಾದಲಿಂಗ ತ್ರಿವಿಧ:ಆದಿ ಪ್ರಸಾದಿ
ಅಂತ್ಯ ಪ್ರಸಾದಿ
ಸೇವ್ಯ ಪ್ರಸಾದಿ. ಪಾದೋದಕಲಿಂಗ ತ್ರಿವಿಧ:ದೀಕ್ಷಾಪಾದೋದಕ
ಶಿಕ್ಷಾಪಾದೋದಕ
ಜ್ಞಾನಪಾದೋದಕ. ಇಂತು ಸ್ಥಲ 12_ ಚತುರ್ಥಸ್ಥಲ 39. ಮೀರಿದ ಕ್ರಿಯಾ ದೀಕ್ಷಾಕ್ರಮದಿಂದತ್ತತ್ತಲು ನಿಃಪತಿಲಿಂಗ ತ್ರಿವಿಧ:ಕ್ರಿಯಾ ನಿಃಪತಿ
ಭಾವನಿಃಪ
ಜ್ಞಾನನಿಃಪತಿ. ಆಕಾಶಲಿಂಗ ತ್ರಿವಿಧ:ಪಿಂಡಾಕಾಶ
ಬಿಂದ್ವಾಕಾಶ
ಮಹದಾಕಾಶ. ಪ್ರಕಾಶಲಿಂಗ ತ್ರಿವಿಧ:ಕ್ರಿಯಾಪ್ರಕಾಶ
ಭಾವಪ್ರಕಾಶ
ಜ್ಞಾನಪ್ರಕಾಶ. ಇಂತು ಸ್ಥಲ 9
ಪಂಚಮಸ್ಥಲ 48. ಆ ಲಿಂಗೈಕ್ಯ ಕೊಂಡುದು ಪ್ರಸಾದ
ನಿಂದುದೋಗರ
ಚರಾಚರನಾಸ್ತಿ_ ಇಂತು ತ್ರಿವಿಧ. ಭಾಂಡ
ಭಾಜನ
ಅಂಗಲೇಪ_ ಇಂತು ತ್ರಿವಿಧ. ಸ್ವಯ ಚರ ಪರವರಿಯ[ದ]
ಭಾವಾಭಾವನಷ್ಟ
ಜ್ಞಾನಶೂನ್ಯ_ ಇಂತು ಸ್ಥಲ 9. ಷಡುಸ್ಥಲ 57. ಇಂತಿವೆಲ್ಲ ಸ್ಥಲಂಗಳನೊಳಕೊಂಡ ಮಹಾಮಹಿಮನು ಜ್ಞಾನಿಯಲ್ಲ ಅಜ್ಞಾನಿಯಲ್ಲ
ಶೂನ್ಯನಲ್ಲ. ಅಶೂನ್ಯನಲ್ಲ
ಉಭಯಕು? ತಾನೆಂದರಿದ ಪರಮಜ್ಞಾನಿಗೆ ಕೊಳುಕೊಡೆಯಿಲ್ಲ. ಸಾಕಾರ ಸಂಬಂಧವನರಿಯ
ನಿತ್ಯಮುಕ್ತ
ನಿರವಯ
ಉಭಯಾತ್ಮಕ ತಾನು ಕೂಡಲಚೆನ್ನಸಂಗನೆಂದು ಎನ್ನದ ಸುಯಿಧಾನಿ.