ಷಡುದರುಶನ ಜ್ಞಾನವಲ್ಲದೆ ನಮತ್ತೆ ಇಲ್ಲೆಂಬ ಜ್ಞಾನಿಗಳೆಲ್ಲರೂ ಚಾಂಡಾಲಿಗಳು ಬ್ರಹ್ಮಚಾರಿಗಳೆಲ್ಲರೂ ಉದ್ದೇಶಿಗಳು ಶಿವಯೋಗಿಗಳೆಲ್ಲರು ಅಂಧಕರು ಇಷ್ಟಲಿಂಗಸಂಬಂಧಿಕರೆಲ್ಲರೂ ಅವಿಚಾರಿಗಳು. ಅವರಿವರ ಪರಿಯಲ್ಲ ಗುಹೇಶ್ವರಾ ನಿಮ್ಮ ಶರಣರ ಪರಿ ಬೇರೆ !