ಷೋಡಶದಳಕಮಲದಲ್ಲಿ ನೋಡಬಾರದ ವಸ್ತುವ ಕಂಡೆ; ಅದು ಶತಕೋಟಿ ಸೋಮಸೂರ್ಯರು ಉದಯವಾದಂತಿದೆ ನೋಡಾ. ನೋಡಬಾರದ ವಸ್ತುವ ಕೂಡಿ ಅಬ್ಥಿನವ ಶಿವಪ್ರಸಾದಿಯಾಗಿರ್ದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.