ಸಂಗದಿಂದಲ್ಲದೆ ಅಗ್ನಿ ಹುಟ್ಟದು ಸಂಗದಿಂದಲ್ಲದೆ ಬೀಜ ಮೊಳೆದೋರದು ಸಂಗದಿಂದಲ್ಲದೆ ದೇಹವಾಗದುಸಂಗದಿಂದಲ್ಲದೆ ಸರ್ವಮುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಅನುಭಾವ ಸಂಗದಿಂದಾನು ಪರಮಸುಖಿಯಾದೆನಯ್ಯಾ.