ಸಂಗ್ರಹದ ಮನೆಯಲ್ಲಿ ಭೃಂಗೀಶ್ವರನೆದ್ದು ಲಿಂಗಲೀಲೆಯಾಡುವುದ ಕಂಡೆನಯ್ಯ. ನಂದೀಶ್ವರ ಮುಖ್ಯರಾದ ಪ್ರಮಥರು ನಲಿದಾಡುತ್ತಿದಾರೆ ನೋಡಾ ಅಯ್ಯ. ಸಂಗ್ರಹದ ಮನೆಯಳಿದು ಭೃಂಗಿ ಸಿಕ್ಕದೆ ಭಂಗಿತರಾದರಲ್ಲಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.