ಸಕಲ-ನಿಷ್ಕಲ ರೂಪು-ನಿರೂಪು ಮಾಯಾ-ನಿರ್ಮಾಯ ಕಾರಣ-ಅಕಾರಣ ದೇಹ-ನಿರ್ದೇಹದಲ್ಲಿ ಅವಧಾನಿಯಾಗಿ ಸವಾಯ-ನಿರ್ವಾಯ. ಸಂಕಲ್ಪ-ವಿಕಲ್ಪ ಸಂಯೋಗ-ವಿಯೋಗ ಪುಣ್ಯ-ಪಾಪ ಧರ್ಮ-ಅಧರ್ಮಂಗಳೆಂಬ ಕಾಲ-ವೇಳೆಯಿಂದ ನಿರತನಾಗಿ ಇಂತೀ ದ್ವಯ ಸಂಪಾದನೆಗಳ ಸಂಪಾದಿಸದೆ ಕೂಡಲಚೆನ್ನಸಂಗಯ್ಯನ ಶರಣರ ಕಾರುಣ್ಯಮಂ ಪಡೆವುದು