ಸಕಲ ಇಷ್ಟಲಿಂಗದಲ್ಲಿ ಗಣಂಗಳು


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಕಲ ಗಣಂಗಳು ಸಾಕ್ಷಿಯಾಗಿ ಶ್ರೀಗುರುದೇವನು ಕರಸ್ಥಲಕ್ಕೆ ಕರುಣಿಸಿಕೊಟ್ಟ ಇಷ್ಟಲಿಂಗದಲ್ಲಿ ನಿಷೆ*ನಿಬ್ಬೆರಗಾಗಿ
ಶರಣಸತಿ ಲಿಂಗಪತಿ ಭಾವಬಿಡದೆ ಆಚರಿಸುವ ಲಿಂಗವು ಓಸರಿಸಿ ಹೋದಡೆ
ಆ ಲಿಂಗದಲ್ಲಿ ತನ್ನ ಪ್ರಾಣತ್ಯಾಗವ ಮಾಡಬೇಕಲ್ಲದೆ ಜೀವನ ಕಕ್ಕುಲಾತಿಯಿಂದುಳಿಯಲಾಗದು. ಮರಳಿ ಮತ್ತೊಂದು ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ಕಾಷ*ದಲ್ಲಿ ಅಗ್ನಿಯಿರ್ಪುದಲ್ಲದೆ ಕರಿಗೊಂಡ ಇದ್ದಲಿಯಲ್ಲಿ ಅಗ್ನಿಯಿರ್ಪುದೇ ? ಇಂತೀ ದೃಷ್ಟದಂತೆ
ಮುನ್ನ ಗುರೂಪದೇಶವಿದ್ದ ದೇಹದಲ್ಲಿ ಶಿವಕಳೆಯಿರ್ಪುದಲ್ಲದೆ
ಗುರೂಪದೇಶವಾಗಿ ಲಿಂಗವ್ರತವನಾಚರಿಸಿ ಮರಳಿ ಲಿಂಗಬಾಹ್ಯ ವ್ರತಗೇಡಿಯಾದ ದೇಹದಲ್ಲಿ ಪರಮಶಿವಕಳೆಯೆಲ್ಲಿಯದೊ ? ಆ ಶಿವಕಳೆಯಿಲ್ಲದ ದೇಹಕ್ಕೆ ಮರಳಿ ಲಿಂಗಧಾರಣವಾದಡೆಯು ಆ ಲಿಂಗ ಪ್ರೇತಲಿಂಗವು ; ಅವ ಭೂತಪ್ರಾಣಿ. ಆ ಲಿಂಗದ ಪೂಜೆಯ ಎಷ್ಟು ದಿನ ಮಾಡಿದಡೆಯು ಫಲವಿಲ್ಲ; ಮುಂದೆ ಮುಕ್ತಿಯಿಲ್ಲ. ಅವಗೆ ರಾಜನರಕ ಪ್ರಾಪ್ತಿಯಾಗಿರ್ಪುದು ನೋಡಾ. ಇದಕ್ಕೆ ಸಾಕ್ಷಿ: ``ಲಿಂಗಬಾಹ್ಯಾತ್ ವ್ರತಭ್ರಷ್ಟಃ ಪುನರ್ಲಿಂಗಂ ನ ಧಾರಯೇತ್