ಸಕಲ ಪ್ರಾಣಿಗಳಿಗೆ ಲೇಸಾಗಲೆಂದು


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸಕಲ ಪ್ರಾಣಿಗಳಿಗೆ ಲೇಸಾಗಲೆಂದು ಮಜ್ಜನಕ್ಕೆರೆವ ಲಾಂಛನಧಾರಿಯ ವೇಷಕ್ಕೆ ಶರಣೆಂಬೆ
ಲಾಂಛನದ ಹೆಚ್ಚು-ಕುಂದನರಸೆ. ಸಕಲ ಪದಾರ್ಥವ ತಂದು ಜಂಗಮಕ್ಕೆ ನೀಡುವೆ ಭಕ್ತಿಯಿಂದ. ಮನೆಗೆ ಬಂದಡೆ ಪರಿಣಾಮವ ಕೊಡುವೆ
ಆತನಿದ್ದೆಡೆಗೆ ಹೋಗೆ. ಕೂಡಲಚೆನ್ನಸಂಗಯ್ಯನಲ್ಲಿ ಅನುವಿಲ್ಲಾಗಿ ಮುನಿದುದಿಲ್ಲ.