ಸಕಲ ಭುವನಾದಿಭುವನಂಗಳಿಗೆ ತಂದೆ ಸಕಲದೇವಾಧಿದೇವರ್ಕಳಿಗೆ ತಂದೆ. ಭವಭವದಲ್ಲಿ ನೀನೆನ್ನ ತಂದೆ. ಗುಹೇಶ್ವರಲಿಂಗ ನಿರಾಳದಲ್ಲಿ ನೀನೆನ್ನ ತಂದೆ.